ಮಹಿಳೆಗೆ ಅನುಕಂಪ ಬೇಡ, ಅವಕಾಶ ನೀಡಿ: ಡಾ.ಶೋಭಾ.ಕೆ.ಎಸ್.

ಇಂದು ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಮಾರಂಭವನ್ನು ಜ್ಯೋತಿ ಬೆಳಗಿ ವಿನೂತನ ವಿಶೇಷ ರೀತಿಯಲ್ಲಿ ತೊಟ್ಟಿಲು ತೂಗುವ ಮೂಲಕ ಉದ್ಘಾಟಿಸಿದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಶೋಭಾ.ಕೆ.ಎಸ್.ರವರು ಇತ್ತೀಚಿನ ಶತಮಾನಗಳಲ್ಲಿ ಮಹಿಳೆ ಆಧುನಿಕ ಯುಗದಲ್ಲಿ ತೀವ್ರವಾಗಿ ಸದೃಢವಾಗುತ್ತಿರುವುದರಿಂದ ಮಹಿಳೆಗೆ ಅನುಕಂಪ ಬೇಡ ಅವಕಾಶ ನೀಡಿ ಎಂದು ಕರೆಕೊಟ್ಟರು.

ಕಾರ್ಯಕ್ರಮದ ಘನ ಉಪಸ್ಥಿತರಿದ್ದ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಕರಿಗೂಳಿ ಯವರು ಸರ್ವ ರಂಗಗಳಲ್ಲಿ ಮಹಿಳೆಗೆ ಸಮಾನತೆ ಸಿಗಬೇಕು. ತಾಯಿ, ಹೆಂಡತಿ, ಸಹೋದರಿಯಾಗುವ ಮಹಿಳೆ ಉನ್ನತ ಶಿಕ್ಷಣ ಕಲಿತು ಅತ್ಯುನ್ನತ ಹುದ್ದೆಗೆ ಅಲಂಕೃತರಾಗಬೇಕೆಂದು ಆಶಿಸಿದರು.

ಘನ ಉಪಸ್ಥಿತರಿದ್ದ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಸರ್ಫರಾಜ್ ಅಹ್ಮದ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಪ್ರತಿಯೊಬ್ಬರೂ ತಾಯಿ ಮುಖ್ಯ.ಅಲ್ಲದೇ ಶಿಕ್ಷಣದಿಂದ ತಮ್ಮ ಗುರಿಗಳು ಅತ್ಯುತ್ತವಾಗಲೆಂದು ಶುಭಕೋರಿದರು.

ಬೋಧಕೇತರರಾದ ಶ್ರೀಮತಿ ಜಬೀನಾ ಬೇಗಂ ಅವರು ಮಾತನಾಡಿ ಸರ್ವಸಮತೆಯ ಬಾಳು ಬೇಕೆಂದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಹಾಗೂ ಮಹತ್ವ, ಪ್ರಸ್ತುತ ದಿನಗಳಲ್ಲಿ ಮಹಿಳೆಯ ಸ್ಥಾನದ ಕುರಿತು ಪ್ರಾಸ್ತಾವಿಕವಾಗಿ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ತಾತಪ್ಪ.ಕೆ ಇವರು ಅಭಿಪ್ರಾಯಿಸಿದರು.

ಸದರಿ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲಾಯಿತು, ನಾಡಿನ ಮಹಿಳಾ ಸಾಧಕಿಯರ ಕುರಿತಾಗಿ ಕಾಲೇಜಿನ ಮಹಿಳಾ ವಿದ್ಯಾರ್ಥಿಗಳೇ ಭಾಷಣ ಮಾಡಿದರು.

ವಿದ್ಯಾರ್ಥಿನಿಯರಾದ ಸೂಫಿಯಾ ರವರು ಸಿಂಧುತಾಯಿ ಸಕ್ಪಾಲ್ ರ ಕುರಿತು, ಲಾವಣ್ಯರವರು ಸೂಲಗಿತ್ತಿ ನರಸಮ್ಮರ ಕುರಿತು , ರಾಧಿಕಾರವರು ತುಳಿಸಿಗೌಡ, ಪಲ್ಲವಿಯವರು ಸುನೀತಾ ವಿಲಿಯಮ್ಸ್, ಗಾಯತ್ರಿ ಎಂಬ ವಿದ್ಯಾರ್ಥಿನಿ ಭೀಮವ್ವ ದೊಡ್ಡ ಬಾಳಪ್ಪರ ಕುರಿತು ಮಹೇಶ್ವರಿರವರು ಅಕ್ಕಮಹಾದೇವಿ, ಅಂಬ್ರೀನ್ ಬೇಗಂ ಅವರು ಬಾನು ಮುಷ್ತಾಕ್ ರವರ ಕುರಿತು ವಿಚಾರ ಮಂಡನೆ ಮಾಡಿದರು, ನಂತರ ಕಾರ್ಯಕ್ರಮದಲ್ಲಿ ವಿಷಯಮಂಡನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ಉಡುಗೊರೆ ನೀಡಿ ಪ್ರೋತ್ಸಾಹ ಗೌರವ ನೀಡಲಾಯಿತು.

ಇದೇ ಸಂದರ್ಭದಲ್ಲಿ ವಾಣಿಜ್ಯ ಶಾಸ್ತ್ರದ ಡಿಜಿಟಲ್ ಮಾರ್ಕೆಟಿಂಗ್ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಅಖಿಲಾಂಡೇಶ್ವರಿ ವಾಸಂಶೆಟ್ಟಿ ಇವರನ್ನು ಗೌರವಿಸಲಾಯಿತು.

ಇತ್ತೀಚೆಗೆ ಆಂಧ್ರಪ್ರದೇಶದ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಪ್ರಾಂಶುಪಾಲರಾದ ಡಾ.ಶೋಭಾ.ಕೆ.ಎಸ್ ಅವರನ್ನು ಹಾಗೂ ಮಹಿಳಾ ಸಿಬ್ಬಂದಿಯವರಾದ ಸಂಧ್ಯಾ, ಜಬೀನಾ ಬೇಗಂ, ಶಾಂತಮ್ಮ, ಸಾವಿತ್ರಮ್ಮ ಇವರನ್ನು ಸನ್ಮಾನಿಸಲಾಯಿತು.

ಪ್ರಾಧ್ಯಾಪಕರಾದ ರವಿಕುಮಾರ್, ವಿರೂಪಾಕ್ಷ, ಶಂಕ್ರಪ್ಪ, ಶಶಿಕುಮಾರ್, ವೆಂಕಟರಾಜು, ಪೀರಾವಲಿ, ದೇವರಾಜ್, ಪರಶುರಾಮ್,ಈಶಪ್ಪ ಮೇಟಿ, ದುರ್ಗಾ ಕೃಷ್ಣ, ಉಪಸ್ಥಿತರಿದ್ದರು.

ರತ್ನಾ, ನಿರ್ಮಲ ಸ್ವಾಗತಿಸಿದರೆ, ದಾಕ್ಷಾಯಿಣಿ, ರಕ್ಷಿತಾ, ಪ್ರತಿಭಾ, ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ಸಮಸ್ತ ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದರು

Leave a Reply