ಗಂಗಾವತಿ: ರಾಜ್ಯ ಸರ್ಕಾರ ನೀಡಲ್ಪಡುವ ರಾಜ್ಯಮಟ್ಟದ ಡಾ. ಬಾಬು ಜಗಜೀವನರಾಮ್ ಪ್ರಶಸ್ತಿಗೆ ಮಾಯಮ್ಮ ಆಯ್ಕೆ.
ಮಾಯಮ್ಮ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯಲ್ಲಿ ಪೌರಕಾರ್ಮಿಕಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಏಪ್ರಿಲ್-೫ ರಂದು ಶನಿವಾರ ವಿಧಾನಸೌಧದಲ್ಲಿ ಸರ್ಕಾರದಿಂದ ಪ್ರಶಸ್ತಿ ಪಡೆದಿರುತ್ತಾರೆ.
ಇದಕ್ಕೆ ಕ್ರಾಂತಿಚಕ್ರ ಬಳಗದ ರಾಜ್ಯ ಅಧ್ಯಕ್ಷರಾದ ಭಾರಧ್ವಾಜ್ ಹರ್ಷ ವ್ಯಕ್ತಪಡಿಸಿದರು.
ಪ್ರಶಸ್ತಿಗೆ ಭಾಜನರಾದ ಮಾಯಮ್ಮ ಅವರನ್ನು ಇಂದು ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್‌ನಲ್ಲಿ ಕ್ರಾಂತಿಚಕ್ರ ಬಳಗದವತಿಯಿಂದ ಗೌರವಯುತವಾಗಿ ಅಭಿನಂದನೆ ಸಲ್ಲಿಸಲಾಯಿತು.