ಗಂಗಾವತಿ: ನಗರದ ೩೨ನೇ ವಾರ್ಡಿನ “ಗಾಳೆಮ್ಮ ಕ್ಯಾಂಪ್” ಮತ್ತು “ಮುಡ್ಡಾಣೇಶ್ವರ ಕ್ಯಾಂಪ್” ಹಿರೇಜಂತಕಲ್ಲಿನ ಎರಡು ಅಂಗನವಾಡಿ ಕೇಂದ್ರಗಳು ಸುಮಾರು ೧೫ ವರ್ಷಗಳ ಕಾಲ ಬಾಡಿಗೆ ಕೇಂದ್ರಗಳಲ್ಲಿ ಇದ್ದವು. ಈ ಅಂಗನವಾಡಿ ಕೇಂದ್ರಗಳಿಗೆ ನೂತನ ಕಟ್ಟಡಗಳನ್ನು ನಿರ್ಮಿಸಿ ಶ್ರೀಮತಿ “ಹುಲಿಗೆಮ್ಮ ಕಿರಿಕಿರಿ” ನಗರಸಭೆ ಸದಸ್ಯರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಜಯಶ್ರೀ ಆರ್ ರವರು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಹುಲಿಗೆಮ್ಮ ಕಿರಿಕಿರಿ ರವರು ಮಾತನಾಡಿ ಅಂಗನವಾಡಿ ಕೇಂದ್ರ ಬಹಳ ಅಚ್ಚುಕಟ್ಟಾಗಿ ನಿರ್ಮಾಣವಾಗಿವೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ವಾರ್ಡಿನ ಸಾರ್ವಜನಿಕರು ಅಂಗನವಾಡಿ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಕಳಿಸಬೇಕು. ಹಾಗೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನುಡಿಯಂತೆ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕು, ಮೊದಲ ಶಿಕ್ಷಣವೇ ಅಂಗನವಾಡಿ, ಇಲ್ಲಿನ ಶಿಕ್ಷಕರು ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸವನ್ನು ಹೇಳಿಕೊಡಬೇಕು ಅಂದಾಗ ಮಾತ್ರ ಅಂಗನವಾಡಿ ಸ್ಥಾಪಿಸಿರುವುದಕ್ಕೆ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತಾಲೂಕ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಪರಶುರಾಮ ಕಿರಿಕಿರಿ ಮಾತನಾಡಿ ಮಾಜಿ ಸಚಿವ ಸನ್ಮಾನ್ಯ ಶ್ರೀ ಇಕ್ಬಾಲ್ ಅನ್ಸಾರಿ ಅವರು ನಮಗೆ ನಗರಸಭೆ ಸದಸ್ಯರು ಆದ ಮೇಲೆ ವಾರ್ಡಿನ ಜನರ ಮೂಲಭೂತ ಸೌಕರ್ಯಗಳನ್ನು ಈಡೇರಿಸಬೇಕು ಅಂದಾಗ ನಗರಸಭೆ ಸದಸ್ಯರು ಆಗಿರುವುದಕ್ಕೆ ಸಾರ್ಥಕವಾಗುತ್ತದೆ ಎಂದು ತಿಳಿ ಹೇಳಿದ್ದರು. ಇಂದು ಅವರ ಆಸೆಯಂತೆ ನಮ್ಮ ವಾರ್ಡಿನ ಮೂಲಭೂತ ಸೌಕರ್ಯಗಳನ್ನು ವಾರ್ಡಿನ ಜನರಿಗೆ ಕೊಡಲು ಯಶಸ್ವಿಯಾಗಿದ್ದೇವೆ ಎಂದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳಾದ ಪ್ರಸನ್ನ ಕಲ್ಮನಿ ಅವರು ಮಾತನಾಡಿ ಶ್ರೀಮತಿ ಹುಲಿಗೆಮ್ಮ ಕಿರಿಕಿರಿ ಅವರು ಬಹಳ ಆಸಕ್ತಿವಹಿಸಿ ಶ್ರಮಪಟ್ಟು ಅಂಗನವಾಡಿ ಕೇಂದ್ರಕ್ಕೆ ಜಾಗವನ್ನು ಗುರುತಿಸಿ ನಗರಸಭೆ ಪೌರಯುಕ್ತರ ವತಿಯಿಂದ ಚೆಕ್‌ಬಂದಿ ಹಾಕಿಸಿ ನಮ್ಮ ಇಲಾಖೆಗೆ ತಂದು ಇಲಾಖೆಗೆ ಅಗಾಗೆ ಭೇಟಿ ನೀಡಿ ಅಂಗನವಾಡಿ ಕಟ್ಟಿಸಿಕೊಡಿ ಎಂದು ವಿನಂತಿಸಿಕೊಂಡರು. ಅದರಂತೆ ಸಿ.ಡಿ.ಪಿ.ಓ ರವರು ಅವರ ಪ್ರಸ್ತಾವನೆಯನ್ನು ಕಳುಹಿಸಿ ಒಂದೇ ವಾರ್ಡಿನಲ್ಲಿ ಎರಡು ಅಂಗನವಾಡಿ ಕೇಂದ್ರ ಆಗಿರುವುದಕ್ಕೆ ಪ್ರಶಂಸನೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸರಸ್ವತಿ ರವರು ಮಾತನಾಡಿ ಮುಡ್ಡಾಣೇಶ್ವರ ಕ್ಯಾಂಪ್‌ನಲ್ಲಿ ಅಂಗನವಾಡಿ ಕೇಂದ್ರ ಬಹಳ ದಿನದ ಕನಸು ಆಗಿತ್ತು. ಶ್ರೀಮತಿ ಹುಲಿಗಮ್ಮ ಕಿರಿಕಿರಿ ಅವರು ಅದನ್ನು ಇಂದು ನನಸು ಮಾಡಿದ್ದಾರೆ. ಅವರು ಬಂದಮೇಲೆ ನಮ್ಮ ವಾರ್ಡಿಗೆ ಅಂಗನವಾಡಿ ಮತ್ತು ಮಹಿಳೆಯರ ಶೌಚಾಲಯ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕರಾದ ಶ್ರೀಮತಿ ವಿದ್ಯಾವತಿ ಹಾಗೂ ಶ್ರೀಮತಿ ಶರಣಮ್ಮ ನಾಲ್ವಡ್, ವಲಯದ ಮೇಲ್ವಿಚಾರಕಿಯಾದ ಶ್ರೀಮತಿ ಈರಮ್ಮ ಯಾಳಗಿ, ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕಿಯರು ಹಾಗೂ ವಾರ್ಡಿನ ಮುಖಂಡರಾದ ಅಲಿಸಾಬ್, ದಡ್ಡೆದಾಳು ದುರಗಪ್ಪ, ರವಿ ನಾಯಕ್, ರಫೀ, ಹೊನ್ನೂರ್, ಜಾಫರ್, ಅಸೇನ್, ಸಿದ್ದಪ್ಪ, ಮೈಬು, ಕುಬಾಂರ್ ಸಂಗಪ್ಪ, ಬಸಪ್ಪ, ಶಾರದಮ್ಮ, ಶಾಂತಮ್ಮ. ಸರಸ್ವತಿ, ಜಯಮ್ಮ, ಮಾಲನಮ್ಮ, ಅನೀಪಮ್ಮ, ಹೇಮಾವತಿ, ಹುಸೇನಮ್ಮ, ಹುಲಿಗೆಮ್ಮ, ಫಾತಿಮಾ ಹಾಗೂ ವಾರ್ಡಿನ ಗುರುಹಿರಿಯರು ಉಪಸ್ಥಿತರಿದ್ದರು.