ಯಾಜ್ಞವಲ್ಕ ಮಂದಿರದಲ್ಲಿ ಸಂಭ್ರಮದ ಹನುಮ ಜಯಂತಿ ಸುಂದರಕಾಂಡ ಪ್ರವಚನ ಸಂಪನ್ನ.

ಯಾಜ್ಞವಲ್ಕ ಮಂದಿರದಲ್ಲಿ ಸಂಭ್ರಮದ ಹನುಮ ಜಯಂತಿ ಸುಂದರಕಾಂಡ ಪ್ರವಚನ ಸಂಪನ್ನ.

ಗಂಗಾವತಿ: ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ ಮಂದಿರದಲ್ಲಿ ಹನುಮ ಜಯಂತಿ ಆಚರಣೆ ಶನಿವಾರದಂದು ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು. ಇದೇ ಸಂದರ್ಭದಲ್ಲಿ ಎರಡು ದಿನಗಳಿಂದ ವೇದಮೂರ್ತಿ ಕಾರ್ತಿಕ ಜೋಶಿ ಅವರಿಂದ ನಡೆಸಲಾದ ಸುಂದರಕಾಂಡ ಪ್ರವಚನ ಕಾರ್ಯಕ್ರಮ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮುರಳಿದರ ಕುಲಕರ್ಣಿ ಮಾತನಾಡಿ ವಾಯುಪುತ್ರ ಹನುಮ ಹುಟ್ಟಿದ ಈ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೇ ಪುಣ್ಯವಂತರು. ಸಮಾಜ ಬಾಂಧವರ ಸರ್ವರ ಸಹಕಾರದ ಮೇಲೆ ಮೇರೆಗೆ ಸದರಿ ದೇವಸ್ಥಾನದಲ್ಲಿ ವರ್ಷವಿಡಿ ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಪಕ್ಕದಲ್ಲಿ ಧಾರ್ಮಿಕ ಮನೋಭಾವನೆ ಸಮಾಜವನ್ನು ಸಂಘಟಿಸಲಾಗುತ್ತದೆ ಎಂದು ಹೇಳಿದರು.

ಬೆಳಿಗ್ಗೆ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ ವಾಯುಸ್ತುತಿ ಪಾರಾಯಣ, ಆಂಜನೇಯದ ಉತ್ಸವ ಮೂರ್ತಿಯನ್ನು ತೊಟ್ಟಿಲು ಹಾಕುವಿಕೆ, ಸೇರಿದಂತೆ ಭಜನೆ, ಶ್ರೀ ಸತ್ಯನಾರಾಯಣ ಪೂಜೆ ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

ಸಮಾಜದ ಮುಖಂಡರಾದ ತಿರುಮಲರಾವ್ ಆಲಂಪಲ್ಲಿ, ಗೋಪಿ ದಿನ್ನಿ, ವೆಂಕಟೇಶ್ ಆನಂದ್, ಗುರುರಾಜ್ ಕುಲಕರ್ಣಿ ಪ್ರಕಾಶ್, ವಿಪ್ರ ಸಮಾಜದ ಅಧ್ಯಕ್ಷ ರಾಘವೇಂದ್ರ ಮೇಗೂರು, ರಾಘವೇಂದ್ರ ಲೆಕ್ಕಿಹಾಳ ಇತರರು ಉಪಸ್ಥಿತರಿದ್ದರು.

ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ಜರುಗಿತು.

Leave a Reply