ಗಂಗಾವತಿ. ನಗರದ ತಹಶೀಲ್ ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು ಉಪ ತಹಶೀಲ್ದಾರ್ ಮಹಾಂತೇಶ್ ಗೌಡ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ. ಆಚರಣೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಮಹಾಂತೇಶ್ ಗೌಡ ಮಾಹಿತಿ ನೀಡಿದರು.
ಬಳಿಕ ಶಂಕರ ಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಮಾತನಾಡಿ ಕೇಂದ್ರ ಸರ್ಕಾರದ ಆದೇಶದಂತೆ ಶ್ರೀ ಶಂಕರಾಚಾರ್ಯರ ಜಯಂತೋತ್ಸವವನ್ನು ತತ್ವಜ್ಞಾನಿಗಳ (ವಿಶ್ವ ದಾರ್ಶನಿಕರ) ದಿನಾಚರಣೆಯನ್ನು ಮೇ-2 ಶುಕ್ರವಾರದಂದು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಆಚರಿಸಲು ತಹಶೀಲ್ದಾರರು ಆದೇಶ ನೀಡಬೇಕು. ಅಗತ್ಯ ಇದ್ದಲ್ಲಿ ಶ್ರೀ ಶಂಕರಾಚಾರ್ಯರ ಭಾವಚಿತ್ರವನ್ನು ಇಲಾಖೆಗಳಿಗೆ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ. ಜಗನ್ನಾಥ್ ಅಳವಂಡಿಕರ್, ಅನಿಲ್ ಅಳವಂಡಿಕರ್, ನಾಗೇಶ್ ಭಟ್, ಶೇಷಗಿರಿ, ಶ್ರೀಪಾದ್ ಮುಧೋಳಕರ್, ವೇಣುಗೋಪಾಲ್, ಹೊಸಳ್ಳಿ ಭೀಮಶಂಕರ, ಮೋಹನ್ ಲೆಕ್ಕಿಹಾಳ ಇತರರು ಉಪಸ್ಥಿತರಿದ್ದರು.