ಪತ್ರಕರ್ತ ನಾಗರಾಜ್ ವೈ ಗೆ ಕೇರಳದ ಕಾಸರಗೋಡಿನಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸನ್ಮಾನಿಸಿ ಗೌರವ.

ಪತ್ರಕರ್ತ ನಾಗರಾಜ್ ವೈ ಗೆ ಕೇರಳದ ಕಾಸರಗೋಡಿನಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ  ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸನ್ಮಾನಿಸಿ ಗೌರವ.

ಗಂಗಾವತಿ: ಟಿವಿ-೫ ಮಾಧ್ಯಮದ ಜಿಲ್ಲಾ ವರದಿಗಾರರಾದ ನಾಗರಾಜ್ ವೈ ಇವರು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕೊಡಮಾಡುವ ಶ್ರೀ ಜೋಸೆಫ್ ಮಥಾಯಿಸ್ ದುಬೈ ನೀಡುವ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಹಿನ್ನೆಲೆ ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯಾದ ಬಸವರಾಜ್ ಮ್ಯಾಗಳಮನಿ ಅವರ ನೇತೃತ್ವದಲ್ಲಿ ನಾಗರಾಜ್.ವೈ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿಸಿ ಮಾತನಾಡಿದ ಬಸವರಾಜ್ ಮ್ಯಾಗಳಮನಿಯವರು, ನಾಗರಾಜ್ ಅವರು ಬಹಳ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಾಮಾಜಿಕ ಪರ ವರದಿ ಮಾಡುವ ಮೂಲಕ ಹೆಸರು ಮಾಡಿದ್ದಾರೆ. ಅಲ್ಲದೆ ಸರಳ ವ್ಯಕ್ತಿತ್ವದ ಜೊತೆಜೊತೆಗೆ ಸಾಮಾನ್ಯ ವರ್ಗದ ಜನರ ಪರವಾಗಿ ಸುದ್ದಿ ಪ್ರಸಾರ ಮಾಡುತ್ತಾ, ಜನಪರ ಕಾಳಜಿ ಹೊಂದಿದ್ದಾರೆ. ಇವರಿಗೆ ಇದೀಗ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಸರ್ಕಾರದ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಇವರ ಸಹಯೋಗದಲ್ಲಿ ಕೇರಳದ ಕಾಸರಗೋಡಿನಲ್ಲಿ ಮೇ-೩ ರಂದು ನಡೆಯಲಿರುವ ಸಮಾರಂಭದಲ್ಲಿ ಶ್ರೀ ಜೋಸೆಫ್ ಮಥಾಯಿಸ್ ದುಬೈ ಪ್ರಶಸ್ತಿ ನೀಡುತ್ತಿರುವುದು ಸಂತಸದಾಯಕವಾಗಿದೆ. ಇದರ ಜೊತೆಗೆ ಕೇರಳ ರಾಜ್ಯದಲ್ಲಿ ನೀಡುವ ಪ್ರಶಸ್ತಿಗೆ ಉತ್ತರ ಕರ್ನಾಟಕ ಭಾಗದಿಂದ ನಾಗರಾಜ್. ವೈ ಅವರು ಒಬ್ಬರೇ ಆಯ್ಕೆಯಾಗಿದ್ದು, ನಮ್ಮ ಭಾಗದ ಜನರಿಗೆ ಗೌರವ ತಂದಿದೆ ಎಂದರು.

ಈ ಸಂಧರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ರಗಡಪ್ಪ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚನ್ನಾದಾಸರ, ಮುತ್ತಣ್ಣ ಹೊಸಳ್ಳಿ, ತಿಪ್ಪೇಶ್, ಜಂಬಣ್ಣ ಮತ್ತಿತರರು ಇದ್ದರು.


ಪ್ರಶಸ್ತಿ ಸಮಾರಂಭ ೨೦೨೫ನೇ ಮೇ-೦೩ ರಂದು ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಕೆ ಶೆಟ್ಟಿ ಕುತ್ತಿಕಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕದ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮುಂತಾದ ಗಣ್ಯರು ಸೇರಿ ಪ್ರಶಸ್ತಿ ಪ್ರಧಾನಿಸುವರು ಎಂದು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ತಿಳಿಸಿದೆ.


 

Leave a Reply