ಶ್ರೀ ಶನೇಶ್ವರ ಜಯಂತಿ ನಿಮಿತ್ಯ ವೆಂಕಟಗಿರಿ ಗ್ರಾಮದ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಜರುಗಿದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು

ಶ್ರೀ ಶನೇಶ್ವರ ಜಯಂತಿ ನಿಮಿತ್ಯ ವೆಂಕಟಗಿರಿ ಗ್ರಾಮದ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಜರುಗಿದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು

ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮದ ಹಾಲಸ್ವಾಮಿ ಮಠದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸಮಸ್ತ ಭಕ್ತಾದಿಗಳಿಂದ ಇದೇ ಮೇ ೨೬ ಮತ್ತು ೨೭ ರಂದು ಶ್ರೀ ಶನೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು ಎಂದು ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ಹಾಗೂ ಭಕ್ತ ಮಂಡಳಿಯ ಪ್ರಮುಖರಾದ ಮಂಜುನಾಥ ಕುರುಗೋಡು ಅವರು ತಿಳಿಸಿದರು.

ಶ್ರೀ ಶನೇಶ್ವರ ಜಯಂತಿಯ ನಿಮಿತ್ಯವಾಗಿ ಮೇ-೨೬ ಸೋಮವಾರ ದೇವಸ್ಥಾನದಲ್ಲಿ ನವಗ್ರಹ ಪೂಜಾ, ಗಣಹೋಮಗಳು ಜರುಗಿದವರು. ಮರುದಿನ ಮೇ-೨೭ ಮಂಳವಾರ ಬೆಳಗಿನ ಜಾವ ೫:೩೦ಕ್ಕೆ ಶ್ರೀ ಶನೇಶ್ವರ ಸ್ವಾಮಿಗೆ ಅಭಿಷೇಕ, ಲೋಕಕಲ್ಯಾಣಕ್ಕಾಗಿ ಹೋಮ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು, ಹಾಗೆಯೇ ಮಠದ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ದೇವಿಗೆ ಹಾಗೂ ಫಕೀರೇಶ್ವರ ಸ್ವಾಮಿ ಗದ್ದುಗೆಗೆ ಪೂಜಾ ಹಾಗೂ ಅಭಿಷೇಕ ಮಾಡಲಾಯಿತು.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಕೂಕನಪಳ್ಳಿಯ ಫಕೀರಯ್ಯಸ್ವಾಮಿ ಹಿರೇಮಠ, ಶಾಂತಯ್ಯ ಪುರಾಣಿಕಮಠ ನಾಗೇಂದ್ರಗಡ, ಗಂಗಾವತಿಯ ಮಂಜುನಾಥ ಕುರುಗೋಡು, ಚಿದಾನಂದ ಶಂಕ್ರಪ್ಪ ಹೂಗಾರ, ಸಿ.ಬಿ.ಎಸ್ ಚಾನೆಲ್‌ನ ದಶರಥ, ಸಂಡೂರಿನ ಅನೂಪ ಬಂಡ್ರಿ, ಗುರಪ್ಪ ಕಾರಟಗಿ, ಅಮರಪ್ಪ ಕಲಬುರ್ಗಿ, ಬೆಟ್ಟಪ್ಪ ಬೀರಪ್ಪ ಜೀರಾಳ, ಜಯಕುಮಾರ ಶಂಭುಲಿಂಗಪ್ಪ ವಡ್ಡರಹಟ್ಟಿ, ಡಾ|| ಸುಜಾತ ಶ್ರೀನಿವಾಸಲು, ನಾಗನಗೌಡ ಪಾಟೀಲ್, ದೊಡ್ಡನಗೌಡ ಪಾಟೀಲ್, ಬಸವಣ್ಣೆಯ್ಯಸ್ವಾಮಿ ಹಿರೇಮಠ, ತಿಮ್ಮಾಪುರದ ಪರ್ವತಯ್ಯ ಹಿರೇಮಠ ಹಾಗೂ ಕುಟುಂಬವರ್ಗ ಈ ಎಲ್ಲಾ ದಂಪತಿಗಳು ಸೇರಿದಂತೆ ಕಲ್ಮಂಗಿ, ಆಗೋಲಿ, ಅಬ್ಬಿಗೇರಿ, ಸಾಲೋಟಗಿ, ಕಕ್ಕೇರಿ, ಕಾಸನಕಂಡಿ, ಪಿ.ಕೆ ಹಳ್ಳಿ, ಬೆನ್ನೂರು, ಹಿರೇಹಡಗಲಿ, ಕೇಸರಹಟ್ಟಿ, ವೆಂಕಟಗಿರಿ, ಗಡ್ಡಿ, ವಡ್ಡರಹಟ್ಟಿ ಹಾಗೂ ಗಂಗಾವತಿ ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿ ಯಶಸ್ವಿಯಾಗಿ ಜರುಗಿದವು.

ಶ್ರೀ ಶನೇಶ್ವರ ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ, ವೈಭವದಿಂದ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಆಚರಿಸಿ, ಮದ್ಯಾಹ್ನ ಮಹಾಪ್ರಸಾದ ಸ್ವೀಕರಿಸಿ ಭಕ್ತಾದಿಗಳು ಶ್ರೀ ಶನೇಶ್ವರಸ್ವಾಮಿ ಕೃಪೆಗೆ ಪಾತ್ರರಾದರು ಎಂದು ವೆಂಕಟಗಿರಿ ಹಾಲಸ್ವಾಮಿ ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ಹೇಳಿದರು.

Leave a Reply