ಹಾಸನದ ಶ್ರೀ ಶಾರದ ಕಲಾಸಂಘದ ಕಲಾವಿದರು ಶ್ರೀ ಹೆಚ್.ಜಿ. ಗ೦ಗಾಧರ್ ನೇತೃತ್ವದಲ್ಲಿ ನಂಜನಗೂಡಿನ ಶಿವರಂಜಿನಿ ಸಾಂಸ್ಕೃತಿಕ ಕಲಾ ಬಳಗರವರು ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಚಾಮರಾಜನಗರ ಜಿಲ್ಲೆ, ಹನೂರು ತಾಲೂಕು, ಮಹದೇಶ್ವರ ಬೆಟ್ಟದ ದೇವಸ್ಥಾನದ ರಂಗ ಮಂದಿರದಲ್ಲಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ ದಿನಾಂಕ 21-6-2025 ರ ಶನಿವಾರ ರಾತ್ರಿ 8 ಗಂಟೆಗೆ ಎ.ಸಿ. ರಾಜು ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸುವರು.ಉದ್ಘಾಟನೆ ಶ್ರೀ. ಸುನೀಲ್ ಬೋಸ್, ಸಂಸದರು,ಚಾಮರಾಜನಗರ ಜಿಲ್ಲೆ. ಅಧ್ಯಕ್ಷತೆ ಶ್ರೀ ಹೆಚ್.ಸಿ. ಮಹದೇವಪ್ಪರವರು, ಸಚಿವರು, ಸಮಾಜ ಕಲ್ಯಾಣ ಇಲಾಖೆ. ಗೌರವ ಉಪಸ್ಥಿತಿ ಡಾ.ಎಂ. ಡಿ. ಸುದರ್ಶನ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು. ಶ್ರೀ ಗೊರೂರು ಅನಂತರಾಜು, ಸಾಹಿತಿಗಳು, ಹಾಸನ. ಶ್ರೀ ಯೋಗೇಶ್, ವಕೀಲರು, ಹಾಸನ. ಗೋವಿಂದೇಗೌಡ್ರು, ಕಲಾವಿದರು, ಹಾಸನ. ಸೋಮರಾಜ್, ಕಲಾವಿದರು, ನಂಜನಗೂಡು.
ಹಾಸನ ಕಲಾವಿದರಿಂದ ಮಲೈಮಹದೇಶ್ವರ ಬೆಟ್ಟದಲ್ಲಿ ಕುರುಕ್ಷೇತ್ರ ನಾಟಕ
