ಈ ಸಲದ ವಿಶ್ವ ಪ್ರವಾಸೋದ್ಯಮ ದಿನವನ್ನು ವಿಶೇಷವಾಗಿ ಆಚರಣೆ ಮಾಡೋಣವೆಂದು ಯೋಚಿಸುತ್ತಾ ಬಸ್ ಸ್ಟಾಂಡ್ ಒಳಗೆ ಹೋದಾಗ ಕಣ್ಣಿಗೆ ಬಿದ್ದಿದ್ದು .ಮಹಿಳಾ ವಿಶ್ರಾಂತಿ ಕೊಠಡಿ, ಅದರ ಗೋಡೆಯ ಮೇಲೆ ಬಹಳಷ್ಟು ಅದು ಇದು ಗೀಚಾಡಿ, ಅಂದಗೆಡಿಸಿದ್ದರು. ಇದರ ಒಳಗಡೆ ವಿವರಣೆ ಒಳಗೊಂಡ ಸ್ಮಾರಕಗಳ ಪೊಟೊ ಹಾಕಲು ಯೋಚನೆ ಬಂತು, ಹಾಗೆ ಹಚ್ಚಿದರೆ ಸುಂದರವಾಗಿರಲ್ಲ, ಬಣ್ಣ ಹೊಡೆದು Posters ಹಚ್ವೊಣ ಎಂದುಕೊಂಡು ಹೊರಬಂದೆ, ನನ್ನ ಗೆಳೆಯ ಹಿರಿಯ ಅಧಿಕಾರಿ ಅಶ್ರಫ್ ಅಲಿ ಗೆ ಪೊನ್ ಮಾಡಿ ವಿಷಯ ತಿಳಿಸಿದೆ, ಅವನು ಡಿಪೋ ಮ್ಯಾನೆಜರ್ ಜೊತೆಗೆ ಮಾತಾಡುತ್ತೆನೆ ಎಂದನು.ನಂತರ ಪ್ರಹ್ಲಾದ್ ಕುಲಕರ್ಣಿ ಅವರನ್ನು ಕರೆದುಕೊಂಡು ಬಸ್ ಡಿಪೋಗೆ ಹೋಗಿ ಘಟಕ ವ್ಯವಸ್ಥಾಪಕ ರಾಜಶೇಖರ ಅವರನ್ನು ಭೇಟಿಯಾದೆ, ಆಗ ಅವರು ಉತ್ತಮವಾಗಿ ಸ್ಪಂದಿಸಿದರು, ರಾತ್ರಿ
8.30 ಕ್ಕೆ ರಾಜಶೇಖರ ಅಣ್ಣಿಗೇರಿ ಹಾಗೂ ನಾನು ಬಸ್ ನಿಲ್ದಾಣ ವೀಕ್ಷಣೆ ಹೋದೆವು. ಮಹಿಳಾ ಕೊಠಡಿಯನ್ನು ನೋಡಿದ ತಕ್ಷಣ, ತಮ್ಮ ಸಿಬ್ಬಂದಿ ವರ್ಗಕ್ಕೆ ಚಾರಣ ಬಳಗದಿಂದ ಇಲ್ಲಿ ಬಣ್ಣ ಹೊಡದು, ಪ್ರವಾಸಿ ತಾಣಗಳ ಪೋಸ್ಟರ್ ಹಚ್ಚುತ್ತಾರೆ, ಇವರಿಗೆ ಸಹಕಾರ ನೀಡಲು ಆದೇಶ ನೀಡಿದರು. ಆಗ ನೂತನ್ ದರೋಜಿ ಅವರಿಗೆ ಪೊನ್ ಮಾಡಿ, ನಾನು ಆನೆಗೊಂದಿ ಪ್ರವಾಸೋದ್ಯಮ ಕಾರ್ಯಕ್ರಮಕ್ಕೆ ಹೋಗುತ್ತೆನೆ, ಬಸ್ ನಿಲ್ದಾಣದ ಮಹಿಳಾ ಕೊಠಡಿ ಒಳಗೆ, ಹೊರಗಡೆ ಬಣ್ಣ ಹಚ್ಚಲು ಕೇಳಿಕೊಂಡೆ. ನೂತನ್ ದರೋಜಿ ,ಮರುದಿನ ಪೆಂಟರ್ ಕಳಿಸಿ ಬಣ್ಣ ಹಚ್ಚಿಸಿದ, ಡಾ.ಶರಣಬಸಪ್ಪ ಕೋಲ್ಕಾರ್ ಸರ್ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿದ ಪೋಸ್ಟರ್ ಗಳನ್ನು ಇಲ್ಲಿ ಹಚ್ಚಲು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ ಅವರಿಂದ ಪರವಾನಿಗೆ ಪಡೆದೆ.
ಕೋಲ್ಕಾರ್ ಸರ್ ತಯಾರಿಸಿದ ಪೋಸ್ಟರ್ ನಲ್ಲಿ ಒಂದು ಕಡೆ ಕನ್ನಡ,ಇನ್ನೊಂದು ಕಡೆ ಇಂಗ್ಲೀಷ್ ಭಾಷೆಯಲ್ಲಿ ಇದ್ದವು. ಬರಿ ಕನ್ನಡ ಅಷ್ಟೇ ತೆಗೆದುಕೊಂಡು, ಬೇರೆ ಬೇರೆ ಆಕಾರದ ಪೋಸ್ಟರ್‌ಗಳು ಆಕರ್ಷಣೀಯವಾಗಿ ಕಾಣಲು, ಪೋಟೊಗಳನ್ನು ಪ್ರವಾಸೋದ್ಯಮ ಇಲಾಖೆಯ ಯಮನೂರ್ ಅವರಿಂದ, ಪ್ರಹ್ಲಾದ್ ಕುಲಕರ್ಣಿ ಅವರಿಂದ, ಕೆಲವೊಂದು ಗೂಗಲ್ ನಿಂದ ಉತ್ತಮ ಪೊಟೊಗಳನ್ನು ಆಯ್ಕೆ ಮಾಡಿ, ಪೋಸ್ಟರ್ ತಯಾರಿಸಲು ಮಂಜುನಾಥ ಸೋನಾರ್, ವಿಶ್ವರೂಪ ಕಂಪ್ಯೂಟರ್ಸ್ ನಲ್ಲಿ ಎರಡು ತಾಸುಗಳ ಕಾಲ ಕುಳಿತು ತಯಾರಿಸಿದೆವು. ಒಂದೇ ದಿನದಲ್ಲಿ ಗೋಡೆಗೆ ಬಣ್ , ಪೋಸ್ಟರ್ ರೆಡಿಯಾದವು , ರಾತ್ರಿ ಮೇದಾರ್ ಮಂಜುನಾಥ ಅವರನ್ನು ಕರೆದುಕೊಂಡು, ನಾನು, ಪ್ರಹ್ಲಾದ್ ಕುಲಕರ್ಣಿ, ಮೈಲಾರಪ್ಪ ಬೂದಿಹಾಳ ಮಳೆಯಲ್ಲೇ ಬಸ್ ಸ್ಟಾಂಡ್ ಗೆ ತೆರಳಿ, ಬೆಳಿಗ್ಗೆ ಉದ್ಘಾಟನಾ ಇದೆ, ನಾವು ರಾತ್ರಿ ಎಷ್ಟೊತ್ತಾದರೂ ಪೋಸ್ಟರ್ ಗಳನ್ನು ಹಚ್ಚಲೇಬೇಕಾಗಿತ್ತು. ರಾತ್ರಿ 11.30 ವರೆಗೆ ಪೋಸ್ಟರ್ ಹೆಚ್ಚುವ ಕೆಲಸ ಆಯಿತು. ಮರುದಿನವೇ ಉದ್ಘಾಟನೆ ಒಂದು ಗಂಟೆಯ ಮೊದಲು ಆಮಂತ್ರಣ ಪತ್ರಿಕೆಯನ್ನೂ ಮಂಜುನಾಥ ಸೋನಾರ್ ಅವರಿಂದ ತಯಾರಿಸಿ, ಅತಿಥಿಗಳಿಗೆ ಕಳಿಸಿದೆ,ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ಡಾ. ಶರಣಬಸಪ್ಪ ಕೋಲ್ಕಾರ್. ಸಾರಿಗೆ ಘಟಕ ವ್ಯವಸ್ಥಾಪಕರಾದ ರಾಜಶೇಖರ ಅಣ್ಣಿಗೇರಿ ಅವರ ಸಹಕಾರದಿಂದ ಉತ್ತಮ ಕಾರ್ಯಕ್ರಮ ನೆರವೇರಿತು.
ಮಾದ್ಯಮ ಮಿತ್ರರು, ಪತ್ರಕರ್ತರು ಸರಿಯಾದ ಸಮಯಕ್ಕೆ ಬಂದು ನಮ್ಮ ಕೆಲಸಕ್ಕೆ ಪ್ರೋತ್ಸಾಹ ನೀಡಿದರು. ಗಂಗಾವತಿ ಚಾರಣ ಬಳಗದ ಸದಸ್ಯರು ಹಾಗೂ ಹಿತೈಷಿಗಳು ಆಗಮಿಸಿ ಕಾರ್ಯಕ್ರಮ ನಾನು ಅಂದುಕೊಂಡಕ್ಕಿಂತ ಹೆಚ್ಚಿನ ರೀತಿಯಲ್ಲಿ ಯಶಸ್ಸು ಕಂಡಿತು.ನಂತರ ತಹಶಿಲ್ದಾರರ ಕಚೇರಿಗೆ ಹೋಗಿ ಅಲ್ಲಿ ತಹಶಿಲ್ದಾರ ಯು.ನಾಗರಾಜ ಹಾಗೂ ಉಪತಹಶಿಲ್ದಾರ ಪ್ರಕಾಶ ಅವರ ಸಮ್ಮುಖದಲ್ಲಿ ಪೋಸ್ಟರ್ ಗಳನ್ನು ಹಚ್ಚಿದೆವು. ನಮ್ಮ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಜನರಿಗೆ ಮಾಹಿತಿ ಸಿಗಬೇಕು ಎಂಬ ಧ್ಯೇಯದೊಂದಿಗೆ ನಡೆದ ಕಾರ್ಯ ಸಾರ್ಥಕತೆ ಕಂಡಿತು. ಈ ಆಂದೋಲನವನ್ನು ಮುಂದುವರಿಸಲು ಆತ್ಮ ವಿಶ್ವಾಸ ಹೆಚ್ಚಿಸಿತು. ಈ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರಿಗೂ ಅನಂತ ಧನ್ಯವಾದಗಳ.
ಮಂಜುನಾಥ ಸೋನಾರ್
ವಿಶ್ವರೂಪ ಕಂಪ್ಯೂಟರ್ಸ್ ಗಂಗಾವತಿ
ಮೊ: 9964415556, 9886382270