ಗಂಗಾವತಿ: ನಗರದ ಹೆಚ್.ಆರ್.ಎಸ್.ಎಂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲಲಿತಾ ಭಾವಿಕಟ್ಟಿಯವರು ಡಿಸೆಂಬರ್-೧೫ ರಂದು ವಿಧಿವಶರಾಗಿದ್ದು, ಇವರ ನಿಧನಕ್ಕೆ ಹಳೆ ವಿದ್ಯಾರ್ಥಿಗಳ ಸಂಘ ತೀವ್ರ ಸಂತಾಪ ಸೂಚಿಸುತ್ತದೆ ಎಂದು ಸಂಘದ ಅಧ್ಯಕ್ಷರಾದ ಎನ್.ಜಿ ಕಾರಟಗಿಯವರು ತಿಳಿಸಿದರು.
ಅವರು ಬೆಳಗಾವಿ ಅಧಿವೇಶನದಲ್ಲಿದ್ದು, ಅಲ್ಲಿಂದಲೇ ದೂರವಾಣಿ ಕರೆ ಮೂಲಕ ಸಂತಾಪ ಸೂಚಿಸಿದ್ದಾರೆ.
ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾದ ಹನುಮಂತಪ್ಪ ನಾಯಕ, ಕಾರ್ಯದರ್ಶಿಯಾದ ಎಸ್.ವಿ ಪಾಟೀಲ್ ಗುಂಡೂರು, ಸದಸ್ಯರುಗಳಾದ ಕನಕಮೂರ್ತಿ, ಹಾಷ್ಮುದ್ದೀನ ವಕೀಲರು, ಸೈಯ್ಯದ ಅಲಿ, ಗಿರೀಶ್ ಬಳ್ಳಾರಿ, ಹುಸೇನಪಾಷಾ, ಹೆಚ್.ಎಂ. ಪಾಟೀಲ್, ಪಿ. ದಶರಥ ಸೇರಿದಂತೆ ಸಂಘದ ಎಲ್ಲಾ ಹಳೆಯ ವಿದ್ಯಾರ್ಥಿಗಳು ಸಂತಾಪ ಸೂಚಿಸುವ ಮೂಲಕ ಮೃತರಿಗೆ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
