ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಗಂಗಾವತಿ ವತಿಯಿಂದ ಹಿರೇಬೆಣಕಲ್ ಗ್ರಾಮದಲ್ಲಿ ರೈತರಿಗಾಗಿ ರೈತ ಕ್ಷೇತ್ರ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಾಗಾರ ಉದ್ಘಾಟನೆ ಮಾಡಿದ ವೆಂಕಟಗಿರಿ ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಹರೀಶಕುಮಾರ S G ಯವರು ರೈತರಿಗೆ ಸ್ಥಳೀಯವಾಗಿ ಕಾಲಾನುಸಾರ ಬೆಳೆಯುವ ಬೆಳೆಗಳಲ್ಲಿನ ರೋಗಗಳ ಹತೋಟಿ ಕ್ರಮದ ಕುರಿತು, ಭತ್ತದಲ್ಲಿನ ಕಾಂಡ ಕೊರಕ ಹೂಳುಗಳ ನಿಯಂತ್ರಣದ ಕುರಿತು, ಕೃಷಿ ಇಲಾಖೆಯಲ್ಲಿ ದೊರಕುವ ವಿವಿಧ ಸೌಲಭ್ಯಗಳ ಕುರಿತು, ಮಾಹಿತಿ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಲೋಕೇಶ್ D ಯವರು ರೈತರಿಗೆ ಮಣ್ಣು ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿ ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ ತಿಳಿಸಿ ಮಣ್ಣು ಸಂಗ್ರಹಣಾ ಮಾದರಿ ಕುರಿತು ತರಬೇತಿ ನೀಡಿದರು.
ಈ ಕಾರ್ಯಗಾರದಲ್ಲಿ ಗ್ರಾಮದ ಮುಖಂಡರಾದ ಬೆಟ್ಟದಯ್ಯಸ್ವಾಮಿ, ಬುಡ್ಡಪ್ಪ ಅಂಗಡಿ, ವಿರೂಪಾಕ್ಷಪ್ಪ, ನಿಂಗಪ್ಪ ಇಂಗರಗಿ, ಮಲ್ಲಪ್ಪ ಮಡಿವಾಳರ, ವಿರೇಶ ಅಂಗಡಿ, ಕೃಷಿ ಇಲಾಖೆಯ ATM ಗಣೇಶ, ಸೇವಾಪ್ರತಿನಿಧಿ ಮುಬಿನಾ ಸೇರಿದಂತೆ ಗ್ರಾಮದ ರೈತರು ಉಪಸ್ಥಿತರಿದ್ದರು.


