ಕೊಪ್ಪಳ: ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಸಮಸ್ತ ವಿಶ್ವಕರ್ಮ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಮತ್ತು ಜಾತಿಯ ಕಾಲಂನಲ್ಲಿ ವಿಶ್ವಕರ್ಮ ಎಂದು ನಮೂದಿಸಬೇಕೆಂದು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಶಕುಮಾರ ಕಂಸಾಲ್ ಕರೆ ನೀಡಿದ್ದಾರೆ.
ಅವರು ಸೆಪ್ಟೆಂಬರ್-25 ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರಕಾರ ಹಿಂದುಳಿದ ಆಯೋಗದ ಮೂಲಕ ಮನೆ ಮನೆಗೆ ಗಣತಿದಾರರ ಮೂಲಕ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಪ್ರಾರಂಭಿಸಿದೆ. ಗಣತಿದಾರರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಮತ್ತು ಧರ್ಮ ಕಾಲಂನಲ್ಲಿ ಹಿಂದೂ ಎಂದು ಮತ್ತು ಜಾತಿ ಕಾಲಂನಲ್ಲಿ ವಿಶ್ವಕರ್ಮ ಎಂದು ಸರಿಯಾಗಿ ನಮೂದಿಸಿ ಪರಿಶೀಲಿಸಬೇಕು. ಈ ಕುರಿತು ಸಮಾಜದ ಎಲ್ಲಾ ಬಂಧುಗಳು ಪ್ರತಿಯೊಂದು ಮನೆಯಲ್ಲಿ ಸರಿಯಾಗಿ ನಮೂದು ಮಾಡಿರುವ ಕುರಿತು ಪರಿಶೀಲಿಸಬೇಕು ಎಂದು ನಾಗೇಶಕುಮಾರ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಪ್ರಕಾಶ, ಜಿಲ್ಲಾ ಕಾರ್ಯಾಧ್ಯಕ್ಷ ರುದ್ರಪ್ಪ ಕೆ ಮತ್ತಿತರು ಇದ್ದರು.