ಗಂಗಾವತಿ: ಮೈಸೂರು ದಸರಾ ಕ್ರೀಡಾಕೂಟ ೨೦೨೫ ರಾಜ್ಯಮಟ್ಟದ ಟೇಕ್ವಂಡೋ ಸ್ಪರ್ಧೆಯಲ್ಲಿ ಗಂಗಾವತಿಯ ಬ್ಲ್ಯೂ ಡ್ರ‍್ಯಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ಹಾಗೂ ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿಯ ೩ ವಿದ್ಯಾರ್ಥಿಗಳು ವಿವಿಧ ಫೈಟ್ ವಿಭಾಗದಲ್ಲಿ ೩ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯು ಸೆಪ್ಟೆಂಬರ್-೨೨ ರಿಂದ ೨೪ರ ವರೆಗೆ ಮೈಸೂರಿನ ಯುವರಾಜ ಒಳ ಕ್ರೀಡಾಂಗಣದಲ್ಲಿ ನಡೆದಿರುತ್ತದೆ.
ಈ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಟೇಕ್ವಂಡೋ ಸ್ಪರ್ಧೆಯಲ್ಲಿ ನಂದಿತಾ ಮಂಜುನಾಥ್-೫೫ ಕೆ.ಜಿ. ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ, ಮಹಾಲಕ್ಷ್ಮಿ ಬಸವರಾಜ್-೭೦ ಕೆ.ಜಿ ಮೇಲ್ಭಾಗದ ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ಸಿ.ಎಂ. ಮಣಿಕಂಠ ಸಿ.ಎಂ. ರಾಘವೇಂದ್ರ-೮೨ ಕೆ.ಜಿ. ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ತರಬೇತುದಾರ ಷಣ್ಮುಖಪ್ಪನವರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸಹ ಶಿಕ್ಷಕರಾದ ಮೋಹನ್ ಕುಮಾರ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ರಂಗಮ್ಮ, ಷಣ್ಮುಖಪ್ಪ, ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಚಳಮರದ್, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಹ ವಿದ್ಯಾರ್ಥಿಗಳು ಶುಭ ಕೋರಿದ್ದಾರೆ.