ರೋಟರಿ ಸಂಸ್ಥೆಯಿಂದ ಜಗತ್ತಿನಾದ್ಯಂತ ನಾನಾ ಕಲ್ಯಾಣ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇಲ್ಲಿ ಸ್ವಾರ್ಥ, ಅಧಿಕಾರಕ್ಕೆ ಅವಕಾಶವಿಲ್ಲ. ಸೇವೆ ಮಾಡುವುದೇ ಇಲ್ಲಿ ಮುಖ್ಯವಾಗಿದೆ ಎಂದು ರೋಟರಿ ಜಿಲ್ಲಾ 3160 ಗವರ್ನರ್ ಡಾ. ಸಾಧು ಗೋಪಾಲ ಕೃಷ್ಣ ರವರು ಇತ್ತೀಚೆಗೆ ಗಂಗಾವತಿ ರೋಟರಿ ಸಂಸ್ಥೆಗೆ ಭೇಟಿ ನೀಡಿ ಸದಸ್ಯರ ಜೊತೆ ಸಮಾಲೋಚನೆ ನಡೆಸಿದರು.
ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತವೆ, ಇದು ನಗರ, ರಾಜ್ಯ ಮಟ್ಟದಲ್ಲಿ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವಾ ಕಾರ್ಯಗಳಿಗೆ ಅವಕಾಶವಿದೆ.
ಗಂಗಾವತಿ ನಗರ ರೋಟರಿ ಸಂಸ್ಥೆ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಈ ಹಿಂದೆ ಹಲವಾರು ಸೇವಾ ಕಾರ್ಯಗಳನ್ನು ಮುಖ್ಯವಾಗಿ ಪಲ್ಸ್ ಪೋಲಿಯೋ ಜಾಗೃತಿ, ಆರೋಗ್ಯ ಸೇವೆ, ಆರ್ಥಿಕ ಸೇವೆ, ಸಮುದಾಯ ಸೇವೆ ಹಾಗೂ ಶೈಕ್ಷಣಿಕವಾಗಿ ಕರೋನಾ ಸಂದರ್ಭದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ವಿದ್ಯಾ ಸೇತು ಪುಸ್ತಕ ವಿತರಣೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೇವಾ ಸೌಲಭ್ಯ ನೀಡಿ ಶೈಕ್ಷಣಿಕ ಪ್ರಗತಿಗೆ ಮಹತ್ವದ ಕಾರ್ಯವನ್ನು ಮಾಡಿದೆ ಎಂದು ಗಂಗಾವತಿ ರೋಟರಿ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಟಿ. ಆಂಜನೇಯ ರವರು ತಮ್ಮ ಸಂಸ್ಥೆ ಸಮುದಾಯ ಮತ್ತು ಆರೋಗ್ಯ ಸೇವೆ ಹಲವಾರು ಸೇವಾ ಕಾರ್ಯಗಳ ಜೊತೆಗೆ ಕೌಶಲ್ಯ ಅಭಿವೃದ್ಧಿ, ಉದ್ಯೋಗ ತರಬೇತಿ, ಕಾರ್ಯಾಗಾರ, ಆರ್ಥಿಕ ಸಾಕ್ಷರತೆ ಹಾಗೂ ಆರೋಗ್ಯ ಸೇವೆಗಳು, ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು ದೀರ್ಘಕಾಲದ ಖಾಯಿಲೆಗಳಿಗೆ ಪರಿಹಾರವನ್ನು ಕಂಡುಹಿಡಿಯುವ ಹಲವಾರು ಕಾರ್ಯಗಳು ಮಾಡುತ್ತಿದೆ ಎಂದು ತಿಳಿಸಿದರು. ಅಲ್ಲದೆ ಈ ವರ್ಷ ಗಂಗಾವತಿ ಸಂಸ್ಥೆ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಇನ್ನೂ ಹಲವಾರು ರೀತಿಯ ಸೇವಾ ಕಾರ್ಯಗಳನ್ನು ಮಾಡಲು ಬಯಸುತ್ತಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ವಿಜಯನಗರ ಝೋನ್ ಅಸಿಸ್ಟೆಂಟ್ ಗವರ್ನರ್ ಮಹೇಶ ಸಾಗರ್ ರವರು ಗಂಗಾವತಿ ಸಂಸ್ಥೆ ತುಂಬಾ ವರ್ಷಗಳಿಂದ ಆರೋಗ್ಯ, ಸಮುದಾಯಕ್ಕೆ ಉಪಯುಕ್ತವಾಗುವ ಯೋಜನೆಗಳು ಮತ್ತು ಶೈಕ್ಷಣಿಕ ಪ್ರಗತಿಗೆ ಪುಸ್ತಕಗಳು, ಕಂಪ್ಯೂಟರಗಳು ಮತ್ತು ಶಾಲಾ ಸಾಮಗ್ರಿಗಳನ್ನು ನೀಡಿದೆ. ಜನರಿಗೆ ಉಪಯುಕ್ತವಾದ ಉತ್ತಮ ಸೇವಾ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ರೋಟರಿ ಕಾರ್ಯದರ್ಶಿ ವಾಸು ಕೊಳಗದ ರವರು ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ಎ. ಶಿವಕುಮಾರ್ ರವರು ಕಾರ್ಯಕ್ರಮ ನಿರುಪಿಸಿದರು.
ಈ ಜಿಲ್ಲಾ ಗವರ್ನರ್ ಸಮಾಲೋಚನಾ ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಅಜಿತ್ ರಾಜ್ ಸುರಾನ, ರೋಟರಿ ಜಿಲ್ಲಾ ಖಜಾಂಚಿ ಬಾಲ ಸೂರ್ಯ ರಾವ್, ಪ್ರಕಾಶ್ ಛೋಪ್ರಾ, ಜೆ. ನಾಗರಾಜ, ಉಗಮ ರಾಜ ಜೈನ, ದೊಡ್ಡಯ್ಯ, ಸುರೇಶ್ ಬಂಬ, ಗುರುರಾಜ, ರಾಘವೇಂದ್ರ ರಾವ್, ಶ್ರೀಧರ್ ನಾಯಕ್, ಟಿ.ಸಿ. ಶಾಂತಪ್ಪ, ಶ್ರೀನಿವಾಸ್, ಗಂಗಾಧರ್, ಚಂದ್ರಶೇಖರ್ ಗೌಡ, ದಿಲೀಪ್ ಮೋತಾ, ಬಸವರಾಜ, ಸುರೇಶ ಸೋಲಂಕಿ ಇನ್ನಿತರ ರೋಟರಿ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೊನೆಯಲ್ಲಿ ರೋಟರಿ ಮಾಜಿ ಕಾರ್ಯದರ್ಶಿ ಮಂಜುನಾಥ್ ರವರು ವಂದಿಸಿದರು.