ಗಂಗಾವತಿ: ಕನ್ನಡ ಚಿತ್ರರಂಗವನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಮೇರು ನಟ ಸಾಹಸಸಿಂಹ ಕಲಿಯುಗದ ಕರ್ಣ ಎಂದು ಖ್ಯಾತರಾಗಿದ್ದ ಡಾ. ವಿಷ್ಣುವರ್ಧನ್ ಅವರು ಸಹ ಪ್ರಮುಖ ಕಾರಣರಾಗಿದ್ದಾರೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ನಗರದ ಡಾ. ವಿಷ್ಣುವರ್ಧನ್ ಸರ್ಕಲ್ ನಲ್ಲಿ ಡಾ. ವಿಷ್ಣುವರ್ಧನ್ ಅವರ 15ನೆಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ನಿಮಿತ್ಯ ವಿಶೇಷ ಪೂಜೆ ಮತ್ತು ಡಾ. ವಿಷ್ಣುವರ್ಧನ್ ಅವರ ಪುತ್ಥಳಿ ವೃತ್ತ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ ಮಾತನಾಡಿದರು. ನಾನು ಸಹ ಡಾ. ವಿಷ್ಣುವರ್ಧನ್ ಅವರ ಹಲವು ಚಿತ್ರಗಳನ್ನು ನೋಡಿದ್ದೇನೆ. ಕನ್ನಡ ಎಲ್ಲಾ ಜಲ ಭಾಷೆ ಮತ್ತು ದೇಶಭಕ್ತಿ ಮೂಡಿಸುವ ಚಿತ್ರಗಳಲ್ಲಿ ವಿಷ್ಣುವರ್ಧನ್ ಅಭಿನಯಿಸುವ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಅವರ ಕನ್ನಡ ಸೇವೆ ಅಮೋಘವಾಗಿದೆ. ಅವರ ಅಭಿಮಾನಿಗಳು ರಾಜ್ಯದ ಎಲ್ಲೆಡೆ ಇದ್ದು ಪ್ರಸ್ತುತ ಅವರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುವ ಮೂಲಕ ವಿಷ್ಣು ವರ್ಧನ್ ಅವರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ಗಂಗಾವತಿಯಲ್ಲಿ ಹಲವು ವರ್ಷಗಳಿಂದ ವಿಷ್ಣುವರ್ಧನ್ ವೃತ್ತ ಬೇಡಿಕೆ ಇತ್ತು. ಇದೀಗ ವಿಷ್ಣುವರ್ಧನ್ ಸರ್ಕಲ್ ಆಗಿದ್ದು, ಮುಂಬರುವ ದಿನಗಳಲ್ಲಿ ಮುತ್ತಳಿಯ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು. ನಗರಸಭೆಯವರು ಮತ್ತು ಶಾಸಕರಾದ ಗಾಲಿ ಜನಾರ್ಧನರೆಡ್ಡಿಯವರು ಈ ನಿಟ್ಟಿನಲ್ಲಿ ಕಾರ್ಯ ಮಾಡಲು ತಾವು ಸಹ ಮನವಿ ಮಾಡುವುದಾಗಿ ಹೇಳಿದರು.
ನಗರಸಭೆ ಅಧ್ಯಕ್ಷ ಮೌಲಾಸಾಬ್ ಮಾತನಾಡಿ ಹಲವು ವರ್ಷಗಳ ಬೇಡಿಕೆ ನಂತರ ಇದೀಗ ವಿಷ್ಣುವರ್ಧನ್ ಸರ್ಕಲ್ ಮಾಡಲಾಗಿದೆ. ಜನರ ಸಂಚಾರಕ್ಕೆ ತೊಂದರೆಯಾಗದಂತೆ ಪುತ್ಥಳಿ ನಿರ್ಮಾಣ ಮಾಡಲು ತಾವು ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಪ್ರಮುಖರಾದ ವೀರಭದ್ರಪ್ಪ ನಾಯಕ, ಮಹಾಬಲೇಶ, ನಾಗರಾಜ್ ಮೇದಾರ್, ರಂಗಪ್ಪ ನಾಯಕ, ಹನುಮಂತಪ್ಪ ನಾಯಕ, ಚಂದ್ರಶೇಖರ, ಷರೀಫ್, ಮಹೆಬೂಬ ಮಣ್ಣೂರು, ಶಾಮಿದ್ ಹರ್ಲಾಪೂರ, ಗೋವರ್ಧನ್, ಸಂತೋಷ್, ಕಳಕೇಶ, ನರೇಶ, ವಿರೇಶ ಅಯೋಧ್ಯಾ, ಬೆಟ್ಟಪ್ಪ ಕನಕಗಿರಿ, ನವಲಿ ಶ್ರೀಕಾಂತ, ಹುಸೇನ್ ಮೆಕಾನಿಕ್, ಮಂಜುನಾಥ ಬಸಾಪಟ್ಟಣ, ನವಣೆಕ್ಕಿ ಶಿವಪ್ಪ, ಐಲಿ ಮಾರುತಿ, ಚಂದ್ರು, ಗುರುರಾಜಶೆಟ್ಟಿ, ನೇತ್ರ ರಮೇಶ, ಎಸ್.ಎಸ್.ಪಾಷಾ, ಚಿದಾನಂದ, ಸಂಗಮೇಶ ಅಯೋಧ್ಯಾ, ಪಂಪಾನಗೌಡ, ಪ್ರೋ.ಕರಿಗೂಳಿ, ತಾಯಪ್ಪ ಮರ್ಚೇಡ್, ಸಂಗಮೇಶ ಕಲಿಕೇರಿ, ಗುರುಲಿಂಗಪ್ಪ, ಗುರುಶಾಂತಪ್ಪ, ಹೇರೂರು ಮಹೆಬೂಬ, ಅಜಯ್ ಮೇದಾರ, ಸ್ವಾಮಿ ಮೇದಾರ್, ಹುಲಿಗೇಶ ತಾಂಡ, ಗಣೇಶ ಅಗಳಕೇರಿ, ಗಣೇಶ ಮೈಬುನಗರ, ಮಾರುತಿ ಮೇದಾರ, ಮಂಜುನಾಥ ಮೇದಾರ, ಕುಮಾರ, ರಘು, ತಿರ್ಥ ಮೇದಾರ, ವಿರೇಶ ಅಯೋಧ್ಯಾ, ಸಿದ್ದಾಪುರ ಸಿದ್ದಣ್ಣ, ದುರುಗಪ್ಪ ಪೂಜಾರ, ಪರಶುರಾಮ ದೇವರಮನೆ, ಯಲ್ಲಪ್ಪ ಪೋಲಕಾಲ್, ಕಾಜಸಾಬ ಮೂಳ್ಳೂರು ಸೇರಿದಂತೆ ಅನೇಕರಿದ್ದರು.