ಗಂಗಾವತಿ. ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ ಪ್ರಯುಕ್ತ ಜನವರಿ-21 ಹಾಗೂ 22 ರಂದು ಜರುಗಲಿರುವ ವಿಜಯ ಯಾತ್ರೆ 2025 ರ ಯಶಸ್ವಿಗೆ ಪ್ರಾರ್ಥಿಸಿಕೊಂಡು ಸೋಮವಾರದಂದು ಪೂಜ್ಯರಿಂದ ಲೋಕಾರ್ಪಣೆಗೊಳ್ಳಲಿರುವ ನವೀಕರಿಸಿದ ಸಭಾಂಗಣದ ಆವರಣದಲ್ಲಿ ಪ್ರಥಮ ಪೂಜೆ, ವಿಘ್ನ ವಿನಾಶಕ ಗಣಪತಿ ಪೂಜೆ, ಹೋಮವನ್ನು ವೇದಮೂರ್ತಿ ಮಹೇಶ್ ಭಟ್ ಜೋಶಿ ಹಾಗೂ ತಂಡದವರು ಸಾಂಗತವಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಶೃಂಗೇರಿ ಕಿರಿಯ ಸ್ವಾಮೀಜಿಗಳು ವಿಜಯ ಯಾತ್ರೆಯ ಹಿನ್ನೆಲೆಯಲ್ಲಿ ಭಕ್ತ ಕೋಟಿ ಅನುಗ್ರಹಿಸಲು ನಗರಕ್ಕೆ ಆಗಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಹಾಗಣಪತಿ ಹೋಮದೊಂದಿಗೆ ಯಾವುದೇ ರೀತಿಯ ಸಂಕಷ್ಟಗಳು ಆಗಬಾರದು ಎಂಬ ಉದ್ದೇಶದಿಂದ ಈ ಹೋಮದಿಂದಲೇ ಸದರಿ ದಿನಗಳಂದು ವಿಜಯ ಯಾತ್ರೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಕಲ ಭಕ್ತಾದಿಗಳು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೇದಮೂರ್ತಿ ಮಹೇಶ್ ಭಟ್ಟ ಜೋಶಿ ಸೇರಿದಂತೆ ಶಂಕರ ಮಠದ ಹಿರಿಯ ಸದಸ್ಯರಾದ ರಾಘವೇಂದ್ರ ಅಳವಂಡಿಕರ್. ಬ್ರಾಹ್ಮಣ ಸಮಾಜದ ತಾಲೂಕ ಅಧ್ಯಕ್ಷ ರಾಘವೇಂದ್ರ ಮೇಗೂರು. ಜಗನ್ನಾಥ್ ರಾವ್ ಅಳವಂಡಿಕರ್. ಶ್ರೀನಿವಾಸ ಕರಮುಡಿ, ಸುದರ್ಶನ ವೈದ್ಯ, ಭೀಮಸೇನ್ ರಾವ್. ವೇಣು ಇತರರು ಉಪಸ್ಥಿತರಿದ್ದರು.