ಗಂಗಾವತಿ: ಭಾರತ ಅಭ್ಯುತ್ತಾನ ಮಂಗಳ ಯಾತ್ರಾದ ಎಲ್ಲಾ ಸದಸ್ಯರಿಂದ ತಾಲೂಕಿನ ಆನೆಗುಂದಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಇದೇ ಕ್ರೋಧಿ ನಾಮ ಸಂವತ್ಸರದ ಪುಷ್ಯ ಮಾಸದ ಬುಧವಾರ ಅಂದರೆ ಜನವರಿ-೨೨ ಬುಧವಾರ ಬೆಳಿಗ್ಗೆ ೭ ರಿಂದ ಸಂಜೆ ೮ ರವರೆಗೆ ವಿಶ್ವ ಶಾಂತಿ ಹೋಮ ಹಾಗೂ ನರಸಿಂಹ ಹೋಮವನ್ನು ನೆರವೇರಿಸಲು ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಯಿಸಲಾಗಿದೆ.
ಎಲ್ಲರೂ ಬಂಧು ಬಾಂಧವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನರಸಿಂಹ ಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಹಾಗೂ ವಿಶ್ವ ಶಾಂತಿ ಹೋಮದ ಮೂಲಕ ಒಬ್ಬ ಜವಾಬ್ದರಿಯುತ ಪ್ರಜೆಯಾಗಿ ಜಗತ್ತಿಗೆ ಶಾಂತಿಯನ್ನು ಪಸರಿಸಲು ಸಹಕಾರ ನೀಡಬೇಕೆಂದು ಭಾರತ ಅಭ್ಯುತ್ತಾನದ ವತಿಯಿಂದ ಕೊರಲಾಗಿದೆ.
ಸದರಿ ದಿನದಂದು ಮದ್ಯಾಹ್ನ ೧ ರಿಂದ ಹಾಗೂ ಸಂಜೆ ೮ ರಿಂದ ಪ್ರಸಾದ ವಿನಿಯೋಗ ಇರುತ್ತದೆ.