ಗಂಗಾವತಿ: ಜನತಾ ಸೇವಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ 1999ನೇ ಸಾಲಿನ ಹಳೆ ವಿದ್ಯಾರ್ಥಿಗಳ ತಂಡದವರು ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ನಡೆಸಿದರು. ಸುಮಾರು 60ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಾಥಮಿಕ, ಪ್ರೌಢ ಘಟ್ಟದಲ್ಲಿನ ತಪ್ಪುಗಳನ್ನು ತಿದ್ದಿ ಸರಿಯಾದ ಹಾದಿಯಲ್ಲಿ ಜೀವನ ನಡೆಸಲು ಮಾರ್ಗದರ್ಶನ ನೀಡಿದ ಶಿಕ್ಷಕರನ್ನು ವಿದ್ಯಾರ್ಥಿಗಳು ನೆನೆಪಿಸಿಕೊಂಡರು. 25 ವರ್ಷಗಳ ಹಿಂದೆ ಅಕ್ಷರ ಜ್ಞಾನ ಕಲಿಸಿದ 30ಕ್ಕೂ ಹೆಚ್ಚು ಶಿಕ್ಷಕರನ್ನು ಕರೆತಂದು ಸನ್ಮಾನಿಸಿದರು.
ಹಳೆಯ ವಿದ್ಯಾರ್ಥಿಗಳಾದ ವೆಂಕಟೇಶ್ ಕಲ್ಯಾಣಿ, ಎನ್ ವಿಜಯ್, ವಿಜಯ್ ಕುಮಾರ್ ಆಳ್ಳಿ ಜ್ಯೋತಿಶ್, ಇವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮ ನಡೆಸುವ ತಯಾರಿಗೆ ಸಾಕ್ಷಿಯಾದರು.
ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಆಟೋಟಗಳನ್ನು ಏರ್ಪಡಿಸಲಾಗಿತ್ತು, ಬಂದಂತ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು,
ಈ ಸಂದರ್ಭದಲ್ಲಿ ಶಿಕ್ಷಕರು ರಮೇಶ್ ಕುಲಕರ್ಣಿ,ಅಜ್ಮೀರ್ ನಂದಾಪುರ್, ರಾಜೇಶ್ವರ್ ರೆಡ್ಡಿ, ವರಲಕ್ಷ್ಮಿ, ಅಕ್ಕಮಹಾದೇವಿ ಪದ್ಮ ಆಶಾ ಹಾಗೂ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿಗಳು ಕುಮಾರಸ್ವಾಮಿ, ನಿರುಪಾದಿ, ಸಲೀಂ, ಸುಮಂಗಳ, ಸರಸ್ವತಿ, ಮಹಾದೇವಿ, ರೇಣುಕಾ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.