ಗಂಗಾವತಿ: ಜನವರಿ-೨೧ ಮಂಗಳವಾರದಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯ ಕುರಿತು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಬಂಧ ಸ್ಪರ್ಧೆಯಲ್ಲಿ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಕುಮಾರಿ ನಿಕಿತಾ ಮೊದಲನೇ ಸ್ಥಾನವನ್ನು, ಅಲ್ವೇರ ದ್ವಿತೀಯ ಸ್ಥಾನವನ್ನು, ವೈಷ್ಣವಿ ತೃತೀಯ ಸ್ಥಾನವನ್ನು ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರಿ ಮುಶಿರ ಪ್ರಥಮ ಸ್ಥಾನವನ್ನು ಪಡೆಯುವುದರ ಮುಖಾಂತರ ತಾಲೂಕಿನಲ್ಲಿ ಮಹಾನ್ ಶಾಲೆಯ ಕೀರ್ತಿಯನ್ನು ತಂದಿದ್ದಾರೆ.
ಇಂದು ಮಂಥನ ಸಭಾಂಗಣದಲ್ಲಿ ನಡೆದ ಸಂಚಾರ ಮತ್ತು ಸುರಕ್ಷತಾ ಕಾರ್ಯಕ್ರಮದಲ್ಲಿ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪೊಲೀಸ್ ಉಪಾಧೀಕ್ಷರಾದ ಸಿದ್ದಲಿಂಗಪ್ಪಗೌಡ ಪಾಟೀಲ್, ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ಮಾಳಿ, ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ಶಾರದಮ್ಮ, ಆರಕ್ಷಕ ಪೊಲೀಸ್ ಉಪನಿರೀಕ್ಷಕರಾದ ಇಸ್ಮಾಯಿಲ್ ಸಾಹೇಬ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್ ವಸ್ತ್ರದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ಹಾಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಶಾಲೆ ಅಧ್ಯಕ್ಷರಾದ ನೇತ್ರಾಜ್ ಗುರುವಿನ ಮಠ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಗುರುವಿನ ಮಠ ಹಾಗೂ ಪೂರ್ಣಿಮಾ, ಕುಮೋದಿನಿ, ಮಂಜುನಾಥ್, ವೀರಯ್ಯ, ಶ್ರೀದೇವಿ, ಶಿವಾನಿ, ವಿಜಯಲಕ್ಷ್ಮಿ, ಶಾಂತ ಹಿರೇಮಠ, ಚಂದ್ರಶೇಖರ, ಸಿದ್ದೇಶ್ ಇನ್ನಿತರ ಶಿಕ್ಷಕರು ಶುಭ ಹಾರೈಸಿದರು.