ಗಂಗಾವತಿ: ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದ ವತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿದೇವಿ ದರ್ಶನಕ್ಕೆ 11ನೇ ವರ್ಷದ ವಾಸವಿ ದೀಕ್ಷಾ ಮಾಲಾಧಾರಿಗಳಿಂದ ಪುಷ್ಯ ಮಹತ್ವದ ನಿಮಿತ್ತವಾಗಿ ಯಾತ್ರೆ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಪುಷ್ಪ ಮಾಸದ ನಿಮಿತ್ತವಾಗಿ ನಾವು 11ನೇ ವರ್ಷದ ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ವಾಸವಿ ದೀಕ್ಷಾ ಮಾಲಾಧಾರಿಗಳಿಂದ ಪ್ರತಿ ವರ್ಷದಂತೆ ಈ ವರ್ಷವೂ ಸುಮಾರು 26 ಜನ ವಾಸವಿ ದೀಕ್ಷಾ ಮಾಲದಾರಿಗಳು ಮತ್ತು ನವ ಬೃಂದಾವನ ಭಜನಾ ಮಂಡಳಿ ಸದಸ್ಯರು ಕೂಡಿ ಯಾತ್ರೆ ಕೈಗೊಂಡಿರುವುದು ವಿಶೇಷವಾಗಿದೆ. ಜೊತೆಗೆ ಆ ಕೊಲ್ಲಾಪುರ ಮಹಾಲಕ್ಷ್ಮಿ ದೇವಿ ಎಲ್ಲರಿಗೂ ಕೃಪೆ ತೋರಲಿ, ಆ ತಾಯಿಯ ಕರುಣೆ ಆಶೀರ್ವಾದ ಎಲ್ಲರ ಮೇಲಿರಲಿ. ಭೂಮಿ ಮೇಲಿರುವ ಯಾವ ಜೀವಿಗೂ ತೊಂದರೆಯಾಗದಂತೆ ಹಾರೈಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಗಲಕೋಟೆಯ ಮಾರ್ಗ ಮಧ್ಯದಲ್ಲಿ ಎಸ್ಆರ್ ಕೋರ ವಕೀಲರು ಮತ್ತು ವಾಸು ದೀಕ್ಷ ರಾಜ್ಯಾಧ್ಯಕ್ಷರು ಮಾತನಾಡಿ ಈ ಸಂದರ್ಭದಲ್ಲಿ ದೇಶಾದ್ಯಂತ ಆರ್ಯವೈಶ್ಯ ಸಮಾಜದ ಕುಲದೇವತೆಯಾದ ಶ್ರೀ ಕನ್ನಿಕಾಪರಮೇಶ್ವರಿಯಮ್ಮನವರು ಜನವರಿ-31ರಂದು ವಿಶ್ವರೂಪ ದರ್ಶನ ನೀಡಿದ ಅತ್ಯಂತ ಶುಭದಿನ. ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರು ಮಾಲಾಧಾರಿಗಳ ದಿಕ್ಷೆಯನ್ನು ಪಡೆದುಕೊಳ್ಳುವುದರ ಮೂಲಕ ದಿನಂಪ್ರತಿ ಅಮ್ಮನವರ ದೇವಸ್ಥಾನದಲ್ಲಿ ಹಾಗೂ ಆಸಕ್ತ ಮಾಲಧಾರಿಗಳ ನಿವಾಸದಲ್ಲಿ ವಿಶೇಷ ಪೂಜೆ ಭಜನೆ ನಡೆಸುತ್ತಾ ಬರಲಾಗಿದ್ದು, ಇದರಿಂದ ಧಾರ್ಮಿಕ ಮನೋಭಾವನೆ ಜೊತೆಗೆ ಸಮಾಜದ ಸಂಘಟನೆಗೆ ಪೂರಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷರು, ಸದಸ್ಯರು, ವಾಸವಿ ಮಹಿಳಾ ಮಂಡಳಿ ಹಾಗೂ ಯುವಕ ಸಂಘದ ಪದಾಧಿಕಾರಿಗಳು, ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನದ ಯಾತ್ರೆಗೆ ತೆರಳಿ ದೇವಿಯ ಅನುಗ್ರಹ ಪಡೆದುಕೊಂಡರು.