12 ರಂದು ಜಿ ಹಂಪಣ್ಣ ಹೊಸ್ಕೇರಾ ಲಯನ್ಸ್ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆ… ಹಲವು ದಶಕಗಳ ಕನಸು ನನಸು… ಎಂ.ಜೆ.ಎಫ್  ಲ. ಟಿ ರಾಮಕೃಷ್ಣ.

12 ರಂದು ಜಿ ಹಂಪಣ್ಣ ಹೊಸ್ಕೇರಾ ಲಯನ್ಸ್ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆ… ಹಲವು ದಶಕಗಳ ಕನಸು ನನಸು… ಎಂ.ಜೆ.ಎಫ್ ಲ. ಟಿ ರಾಮಕೃಷ್ಣ.

ಗಂಗಾವತಿ: ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಒಂದಾದ ಲಯನ್ಸ್ ಕ್ಲಬ್ ಗಂಗಾವತಿ, ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಹಲವು ದಶಕಗಳ ಕನಸು ಅಕ್ಟೋಬರ್‌-12 ರಂದು ನೆರವೇರಲಿದ್ದು,  ಜಿ ಹಂಪಣ್ಣ ಹೊಸ್ಕೇರಾ ಲಯನ್ಸ್ ಕಣ್ಣಿನ ಆಸ್ಪತ್ರೆಯು ಕಂಪ್ಲಿ ರಸ್ತೆಯಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆ ಜರುಗಲಿದೆ ಎಂದು ಲಯನ್ಸ್ ಕಣ್ಣಿನ ಆಸ್ಪತ್ರೆ ಸಮಿತಿಯ ಅಧ್ಯಕ್ಷ ಎಂ.ಜೆ.ಎಫ್‌ ಲ. ಟಿ. ರಾಮಕೃಷ್ಣ ಹೇಳಿದರು. ಅವರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಅಮಂತ್ರಣ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿ ಅಂತರಾಷ್ಟ್ರೀಯ ಸಂಸ್ಥೆಯಾದ ಲಯನ್ಸ್…

Read More
ಕರ್ನಾಟಕ ರಾಜ್ಯ ಬರಹಗಾರರ ಸಂಘದ ಹಾಸನ ಜಿಲ್ಲಾ ಘಟಕದ ಸಂಚಾಲಕರಾಗಿ ಶ್ರೀಮತಿ ಇಂದಿರಾ ಲೋಕೇಶ್ ಆಯ್ಕೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಹಾಸನ ಜಿಲ್ಲಾ ಘಟಕದ ಸಂಚಾಲಕರಾಗಿ ಶ್ರೀಮತಿ ಇಂದಿರಾ ಲೋಕೇಶ್ ಆಯ್ಕೆ.

ಹಾಸನ: ಕರ್ನಾಟಕ ರಾಜ್ಯ ಬರಹಗಾರರ ಸಂಘವು ಒಂದು ನೋಂದಾಯಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಕೇಂದ್ರ ಕಛೇರಿ ಹೂವಿನ ಹಡಗಲಿಯಾಗಿದ್ದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು, ತಾಲ್ಲೂಕು ಘಟಕಗಳನ್ನು ಹೊಂದಿದೆ. ಅಲ್ಲದೇ ಹೊರ ರಾಜ್ಯದಲ್ಲೂ ತನ್ನ ಘಟಕಗಳನ್ನು ವಿಸ್ತರಿಸಿಕೊಂಡು ಈಗಾಗಲೇ ಹಲವಾರು ಸಾಹಿತ್ಯ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಹಾಸನ ಜಿಲ್ಲಾ ಘಟಕವು ರಾಜ್ಯದಲ್ಲೆ ಅತ್ಯುತ್ತಮವಾದ ನಾಡು ನುಡಿ ಕಲೆ ಸಾಹಿತ್ಯ ಕವಿ ಕಾವ್ಯ ಗಾಯನ ಕಲಾ ಕುಂಚ ಹೀಗೆ ವಿಭಿನ್ನ ಕಾರ್ಯಕ್ರಮಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ…

Read More
ಎಸ್.ಎಫ್.ಐ ನೂತನ ಕೊಪ್ಪಳ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ.

ಎಸ್.ಎಫ್.ಐ ನೂತನ ಕೊಪ್ಪಳ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ.

ಗಂಗಾವತಿ: ಅಕ್ಟೋಬರ್-8 ರಂದು ಗಂಗಾವತಿ ನಗರದಲ್ಲಿ ನಡೆದ ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ನಡೆದ ಎಸ್.ಎಫ್.ಐ ಜಿಲ್ಲಾ ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಶಿವುಕುಮಾರ್ ಈಚನಾಳ್, ಜಿಲ್ಲಾ ಕಾರ್ಯದರ್ಶಿಯಾಗಿ ಬಾಲಾಜಿ ಚಳ್ಳಾರಿ, ಉಪಾಧ್ಯಕ್ಷರಾಗಿ ನಾಗರಾಜು ಯು, ಹನುಮೇಶ್ ಮ್ಯಾಗೇಡಿ, ಷರೀಫ್ ಎಂ.ಪಿ., ಪೂಜಾ ಕೊಪ್ಪಳ, ಜಂಟಿ ಕಾರ್ಯದರ್ಶಿಗಳಾಗಿ ರೋಜಾ ಬಿ., ದರ್ಶನ್ ಹೊಸ್ಕೇರ, ಬಸಯ್ಯ ಹಿರೇಮಠ್, ಸದಸ್ಯರಾಗಿ ಮಾರುತಿ ಕನಕಗಿರಿ, ರಮೇಶ್ ಅಗಸಿಮುಂದಿನ ಕುಷ್ಟಗಿ, ಹನುಮೇಶ್ ಚಳ್ಳಾರಿ, ದೊಡ್ಡಬಸವ ಕುಷ್ಟಗಿ, ರಾಜು…

Read More
ಗಂಗಾವತಿಯ ಡಾ. ಚನ್ನಬಸವ ಕೊಟಗಿ ಅವರಿಗೆ ರಾಷ್ಟ್ರೀಯ ಸಾಧಕ ಪ್ರಶಸ್ತಿ

ಗಂಗಾವತಿಯ ಡಾ. ಚನ್ನಬಸವ ಕೊಟಗಿ ಅವರಿಗೆ ರಾಷ್ಟ್ರೀಯ ಸಾಧಕ ಪ್ರಶಸ್ತಿ

ಗಂಗಾವತಿ: ನಗರದ ನಿವಾಸಿಯಾದ ಚನ್ನಬಸವ ಕೊಟಗಿಯವರು ಒಬ್ಬ ವರದಿಗಾರರಾಗಿ ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ೧೫ ವರ್ಷಗಳಿಂದ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಬೆಂಗಳೂರಿನ ಗ್ಲೋಬಲ್ ಎಂಟರ್‌ ಪ್ರೈಸಸ್‌ ವತಿಯಿಂದ ರಾಷ್ಟ್ರೀಯ ಸಾಧಕ ಪ್ರಶಸ್ತಿ-೨೦೨೫ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಶಾಂತಾ ತಿಳಿಸಿದ್ದಾರೆ. ಚನ್ನಬಸವ ಕೊಟಗಿಯವರು ಒಬ್ಬ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ, ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳಲ್ಲಿ ಪ್ರವಾಸಿಗರ ಮಾರ್ಗದರ್ಶಕರಾಗಿ, ಸಂಘಟಕರಾಗಿ, ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ, ಗಣ್ಯವ್ಯಕ್ತಿಗಳ ಆಪ್ತ ಸಹಾಯಕರಾಗಿ ಹತ್ತಾರು ಸೇವೆಗಳನ್ನು ಸಲ್ಲಿಸುತ್ತಾ, ವಿವಿಧ ಖಾಸಗಿ ಟಿ.ವಿ ಚಾನೆಲ್‌ಗಳು…

Read More
ಗೊರೂರು ಅನಂತರಾಜು ಅವರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ

ಗೊರೂರು ಅನಂತರಾಜು ಅವರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ

ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಗೆ 25 ವರ್ಷ ತುಂಬಿದ ಪ್ರಯುಕ್ತ ವೇದಿಕೆಯು ತನ್ನ 25ನೇ ವಾರ್ಷಿಕೋತ್ಸವ ರಜತ ಮಹೋತ್ಸವ ಲೇಖಿಕಾ ಸಾಹಿತ್ಯ ಸಂಭ್ರಮದ ಅಂಗವಾಗಿ 25 ಸಾಧಕರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪ್ರಶಸ್ತಿ ಫಲಕ, ಸ್ಮರಣಿಕೆ, ಶಾಲು, ಫಲ ತಾಂಬೂಲಗಳನ್ನು ನವೆಂಬರ್ 9ರ ಭಾನುವಾರ ಹಾಸನದ ಎವಿಕೆ ಕಾಲೇಜು ಸಭಾಂಗಣದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಶ್ರೀಮತಿ ಶೈಲಜಾ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರು:…

Read More
ಶ್ರೀ ಶಾರದಾ ಶರನ್ನ ನವರಾತ್ರಿ. ಚಂಡಿ ಹವನ ಸಂಪನ್ನ

ಶ್ರೀ ಶಾರದಾ ಶರನ್ನ ನವರಾತ್ರಿ. ಚಂಡಿ ಹವನ ಸಂಪನ್ನ

ಗಂಗಾವತಿ. ನಗರದ ಶಂಕರಮಠದ ಶ್ರೀ ಶಾರದಾದೇ ಗುಳದಲ್ಲಿ ಬುಧವಾರ ರಂದು ನವ ಚಂಡಿ ಹವನ ಸಂಪನ್ನಗೊಂಡಿತು. ವೇದಮೂರ್ತಿ ಮಹೇಶ್ ಭಟ್ ಜೋಶಿ ಹಾಗೂ ತಂಡ ದವರಿಂದ ಸೇವಾಕರ್ತರಿಗೆ ಮಹಾಸಂಕಲ್ಪ ಹಾಗೂ ವೈದ್ಯ ನೇತೃತ್ವದಲ್ಲಿ ಪೂರ್ಣಾಹುತಿಯನ್ನು ಸಂಪನ್ನಗೊಳಿಸಲಾಯಿತು. ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಶೃಂಗೇರಿಯ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ 75ನೇ ವರ್ಧಂತಿ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ನವಚಂಡಿ ಹವನವನ್ನು ಆಯೋಜಿಸಲಾಗಿದ್ದು. ಇದರೊಂದಿಗೆ ದಂಪತಿ ಪೂಜೆ ಹಾಗೂ ಕನ್ನಿಕಾ ಪೂಜೆಯನ್ನು ಭಕ್ತರಿಂದ ನೆರವೇರಿಸಲಾಯಿತು….

Read More
ಬನ್ನಿಯಿಂದ ಬಂಗಾರದ ಜೀವನ ನಡೆಸೋಣ: ಪೂಜ್ಯ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು..

ಬನ್ನಿಯಿಂದ ಬಂಗಾರದ ಜೀವನ ನಡೆಸೋಣ: ಪೂಜ್ಯ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು..

ಎಲ್ಲರ ಸಹಕಾರದಿಂದ ಶರನ್ನನವರಾತ್ರಿ ಕಾರ್ಯಕ್ರಮ ಯಶಸ್ವಿ: ಅಧ್ಯಕ್ಷರು ದರೋಜಿ ನಾಗರಾಜ ಶ್ರೇಷ್ಠಿ.ಗಂಗಾವತಿ: ನಗರದ ಹಿರೇಜಂತಗಲ್ ವಿರುಪಾಪುರದಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸೆಪ್ಟಂಬರ್ 22ನೇ ತಾರೀಖಿನಿಂದ ಅಕ್ಟೋಬರ್ 1ನೇ ತಾರೀಖಿನವರೆಗೆ ನಡೆದ ಶರನ್ ನವರಾತ್ರಿಯ ಪುರಾಣವು ದೇವಸ್ಥಾನದ ಶ್ರೀ ವಾಸವಿ ವೇದಿಕೆಯಲ್ಲಿ ಹತ್ತು ದಿನಗಳವರೆಗೆ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪುರಾಣದ ಸಾನಿಧ್ಯವನ್ನು ವಹಿಸಿದ ಪರಮ ಪೂಜ್ಯಶ್ರೀ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು ಸುಳೆಕಲ್ ಅವರು ಮಾತನಾಡಿ ಶರನ್ ನವರಾತ್ರಿಯ ಒಂದೊಂದು ದೇವಿಯ ಅವತಾರವು ಪುರಾಣದಲ್ಲಿ ತಿಳಿಸಲಾಯಿತು. ಈ…

Read More
ಹಾಸ್ಯ ನಟ ಬಹುಮುಖ ಪ್ರತಿಭೆಯ ಮೈಸೂರು ರಮಾನಂದ್.

ಹಾಸ್ಯ ನಟ ಬಹುಮುಖ ಪ್ರತಿಭೆಯ ಮೈಸೂರು ರಮಾನಂದ್.

ಕರ್ನಾಟಕದ ರಂಗಭೂಮಿಯ ಪರಂಪರೆ ಕನ್ನಡಿಗರ ವಾಸ್ತವ ಬದುಕನ್ನು ಸಮರ್ಥವಾಗಿ ಪ್ರತಿನಿಧಿಸುತ್ತಲೇ ಬಂದಿದೆ. ಆಧ್ಯಾತ್ಮಿಕ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ವಿಡಂಬನೆ, ಸಮಕಾಲೀನ ಸಮಸ್ಯೆ….. ಹೀಗೆ ರಂಗಭೂಮಿಯಿಂದ ಆಗಿರುವ ಜೀವನಕ್ರಾಂತಿ ಬಹು ದೊಡ್ಡದು. ಜನಮಾನಸವನ್ನು ಈ ರೀತಿಯಾಗಿ ಸದಾ ಚಾಲನೆಯಲ್ಲಿ ಇರಿಸಿದ ದೃಷ್ಟಿಯಿಂದ ರಂಗಭೂಮಿಯನ್ನು ಜವಾಬ್ದಾರಿಯಿಂದ ಬೆಳಸಿದ ಮಹಾನ್ ಕಲಾವಿದರ ಪರಂಪರೆಗೆ ದೊಡ್ಡ ಗೌರವ ಸಲ್ಲಲೇಬೇಕಿದೆ. ಇಂತಹ ಮಹಾನ್ ರಂಗಕಲಾವಿದರಲ್ಲಿ ಸಮರ್ಪಣೆಯ ರಂಗ ಕಲಾವಿದ ಮೈಸೂರು ರಮಾನಂದ್ ಕೂಡ ಒಬ್ಬರು. ಸುಮಾರು 70 ವರ್ಷ ವಯಸ್ಸಿನ ಮೈಸೂರು ರಮಾನಂದ್ ಅವರು…

Read More
ಬದುಕು ‘ಹಾವು-ಏಣಿಯಾಟ ಜಯಪ್ಪ ಹೊನ್ನಾಳಿ

ಬದುಕು ‘ಹಾವು-ಏಣಿಯಾಟ ಜಯಪ್ಪ ಹೊನ್ನಾಳಿ

ಬದುಕು ಹಾವು ಏಣಿಯಾಟ, ಅದರಲ್ಲಿ ದುರಾಸೆ, ದುಃಖ, ಜಾತಿ, ಮತ, ಕುಲ, ಧರ್ಮಗಳೆಂಬ ವಿಷಕಾರುವ ಹಾವುಗಳು ಜಾಸ್ತಿ, ‘ಬುದ್ಧ-ಬಸವ-ಅಂಬೇಡ್ಕರ್’ ಮುಂತಾದವರಿಲ್ಲಿ ಏಣಿಗಳು, ಆ ಏಣಿಗಳನ್ನು ಹಿಡಿದುಕೊಂಡು ನಾವು ಮೇಲೇರಬೇಕಾಗಿದೆ, ಅದರಲ್ಲೂ ಮುಖ್ಯವಾಗಿ ನಾವು ಅಂದರೆ ಬರೆವಣಿಗೆಯಲ್ಲಿ ತೊಡಗಿಸಿಕೊಂಡವರು, ಬರೆಯದ ಸಾವಿರಾರು ಜನರ ಪ್ರತಿನಿಧಿಗಳಾಗಿ, ಜಾತ್ಯತೀತರಾಗಿ ಜಗತ್ತಿಗೆ ಆದರ್ಶವಾಗಬೇಕಾಗಿದೆ, ತಾತೀತನಾಗದವನು, ಕುಲಾತೀತನಾಗದವನು ಎಂದಿಗೂ ಕವಿಯಾಗಲಾರ, ಮಮತೆ ಸಮತೆಗಳ ತನ್ನೆರಡೂ ಕಣ್ಣಾಗಿಸಿಕೊಂಡವ ಮಾತ್ರ ಕವಿಯಾಗಲು ಸಾಧ್ಯ, ರಾಜಕಾರಣಿಗಳ, ಮಂತ್ರಿ ಮಹೋದಯರ ಶಿಫಾರಸ್ಸಿನಿಂದ ಯಾರೇ ಕವಿಗೋಷ್ಠಿಯ ವೇದಿಕೆಗಳನ್ನೇರಿದರೂ, ಸಹೃದಯರೆದೆಯ ಸಿಂಹಾಸನವನ್ನೇರುವುದು ಅಸಾಧ್ಯ,…

Read More
ಕದಂಬ ಸೈನ್ಯ ಸಾಹಿತ್ಯ ಸಂಘಟನೆ ಮತ್ತು ಕದಂಬ ವಾಣಿ ಪತ್ರಿಕೆ ವತಿಯಿಂದ ಮೈಸೂರು ವಿಭಾಗ ಮಟ್ಟದ ಕವಿಗೋಷ್ಕಿ ಶ್ರೀರಂಗಪಟ್ಟಣದಲ್ಲಿ

ಕದಂಬ ಸೈನ್ಯ ಸಾಹಿತ್ಯ ಸಂಘಟನೆ ಮತ್ತು ಕದಂಬ ವಾಣಿ ಪತ್ರಿಕೆ ವತಿಯಿಂದ ಮೈಸೂರು ವಿಭಾಗ ಮಟ್ಟದ ಕವಿಗೋಷ್ಕಿ ಶ್ರೀರಂಗಪಟ್ಟಣದಲ್ಲಿ

ಹಾಸನ: ಮಂಡ್ಯ ಜಿಲ್ಲೆ ಪ್ರಸಿದ್ಧ ಕದಂಬ ವಾಣಿ ಪತ್ರಿಕೆ ವತಿಯಿಂದ ಮೈಸೂರು ವಿಭಾಗ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಸನ ಜಿಲ್ಲೆ ವತಿಯಿಂದ ಎಂಟು ಮಂದಿಗೆ ಕವಿಗೋಷ್ಠಿಗೆ ಅವಕಾಶ ಕಲ್ಪಿಸಲಾಗುವುದು. ಕವಿಗಳು ತಮ್ಮ ವಿವರ, ಹೆಸರು, ದೂರವಾಣಿ ಸಂಖ್ಯೆಯನ್ನು ಕದಂಬ ಸೈನ್ಯ ಕನ್ನಡ ಸಂಘಟನೆ ಹಾಸನ ಜಿಲ್ಲೆ ಗೌರವ ಅಧ್ಯಕ್ಷರು ಗೊರೂರು ‌ಅನಂತರಾಜುರವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಅಕ್ಟೋಬರ್ ೧೫ನೇ ತಾರೀಖಿನ ಒಳಗೆ ಎಂದು ಮನವಿ ಮಾಡಲಾಗಿದೆ. ಗೊರೂರು ಅನಂತ ರಾಜು ರವರ ದೂರವಾಣಿ ಸಂಖ್ಯೆ ೯೪೪೯೪೬೨೮೭೯….

Read More

VISHWAROOPA NEWS BLOG

Infinite

Skip to content ↓