
ಪತ್ರಕರ್ತ ನಾಗರಾಜ್ ವೈ ಗೆ ಕೇರಳದ ಕಾಸರಗೋಡಿನಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸನ್ಮಾನಿಸಿ ಗೌರವ.
ಗಂಗಾವತಿ: ಟಿವಿ-೫ ಮಾಧ್ಯಮದ ಜಿಲ್ಲಾ ವರದಿಗಾರರಾದ ನಾಗರಾಜ್ ವೈ ಇವರು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕೊಡಮಾಡುವ ಶ್ರೀ ಜೋಸೆಫ್ ಮಥಾಯಿಸ್ ದುಬೈ ನೀಡುವ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಹಿನ್ನೆಲೆ ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯಾದ ಬಸವರಾಜ್ ಮ್ಯಾಗಳಮನಿ ಅವರ ನೇತೃತ್ವದಲ್ಲಿ ನಾಗರಾಜ್.ವೈ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿಸಿ ಮಾತನಾಡಿದ ಬಸವರಾಜ್ ಮ್ಯಾಗಳಮನಿಯವರು, ನಾಗರಾಜ್ ಅವರು ಬಹಳ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ…