
ಮೇ-೨೭ ರಂದು ವೆಂಕಟಗಿರಿ ಗ್ರಾಮದ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಜಯಂತಿ ಆಚರಣೆ.
ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮದ ಹಾಲಸ್ವಾಮಿ ಮಠದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸಮಸ್ತ ಭಕ್ತಾದಿಗಳಿಂದ ಇದೇ ಮೇ-೨೭ ರಂದು ಶ್ರೀ ಶನೇಶ್ವರ ಜಯಂತಿ ಆಚರಿಸಲಾಗುವುದು ಎಂದು ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ಹಾಗೂ ಭಕ್ತ ಮಂಡಳಿಯ ಪ್ರಮುಖರಾದ ಮಂಜುನಾಥ ಕುರುಗೋಡು ಅವರು ತಿಳಿಸಿದರು. ಶ್ರೀ ಶನೇಶ್ವರ ಜಯಂತಿಯ ನಿಮಿತ್ಯವಾಗಿ ಮೇ-೨೬ ಸೋಮವಾರ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಸ್ವಾಮಿಗೆ ಅಭಿಷೇಕ, ಹೋಮ-ಹವನ ಸೇರಿದಂತೆ ಲೋಕಕಲ್ಯಾಣಕ್ಕಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಮೇ-೨೭ ಮಂಗಳವಾರದಂದು ಶ್ರೀ…