ಜಗತ್ತಿಗೆ ವಿಶ್ವಕರ್ಮರ ಪಂಚಕಸುಬುಗಳ ಕೊಡುಗೆ ಅಪಾರ: ಮೌಲಾಸಾಬ್

ಗಂಗಾವತಿ: ಒಳ್ಳೆಯ ಕೆಲಸ ಹಾಗೂ ಒಳ್ಳೆಯ ಸೇವೆಗಳನ್ನು ಮಾಡಿದರೆ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತೇವೆ. ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರಬೇಕು. ವಿಶ್ವಕರ್ಮ ಸಮುದಾಯವು ಪಂಚಕಸುಬುಗಳ ಮೂಲಕ ಜಗತ್ತಿಗೆ ಅಪಾರ ಕೊಡುಗೆ ನೀಡಿದೆ. ಸಮಾಜವು ಇವುಗಳನ್ನು ಜೀವಂತವಾಗಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದು ನಗರಸಭೆ ಅಧ್ಯಕ್ಷರಾದ ಮೌಲಾಸಾಬ್ ಹೇಳಿದರು.
ಅವರು ಜನವರಿ-೯ ಗುರುವಾಗ ಗಂಗಾವತಿ ತಾಲೂಕ ಆಡಳಿತ ಹಾಗೂ ತಾಲೂಕ ವಿಶ್ವಕರ್ಮ ಸಮಾಜ, ತಾಲೂಕ ಮಹಿಳಾ ಘಟಕ ಮತ್ತು ವಿಶ್ವಕರ್ಮ ಯುವ ಘಟಕ ಸಂಘದ ಸಹಯೋಗದಲ್ಲಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಮೌನೇಶ್ವರರ ದೇವಸ್ಥಾನದಲ್ಲಿ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿಡದರು.
ನಂತರ ಸಮಾಜದ ಜಿಲ್ಲಾ ಅಧ್ಯಕ್ಷರಾದ ನಾಗೇಶ್ ಕುಮಾರ್ ಕಂಸಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಕೆತ್ತನೆ ಮಾಡಿದ ಶಿಲ್ಪಕಲೆಯ ದೇವಸ್ಥಾನಗಳು, ಇಂದು ಪ್ರವಾಸೋದ್ಯಮದಲ್ಲಿ ಉದ್ಯೋಗದ ಕೇಂದ್ರಗಳಾಗಿವೆ. ಆ ನಿಟ್ಟಿನಲ್ಲಿ ಐತಿಹಾಸಿಕ ದೇವಾಲಯ, ಸ್ಮಾರಕಗಳು, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ಗಂಗಾವತಿ ತಾಲೂಕ ಅಧ್ಯಕ್ಷರಾದ ಕಾಳೇಶ ಬಡಿಗೇರ ಮಾತನಾಡಿ ‘ಜಗತ್ತಿನ ಐತಿಹಾಸಿಕ ದೇವಾಲಯಗಳು, ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳ ಬೆಳವಣಿಗೆಗೆ ಅಮರಶಿಲ್ಪಿ ಜಕಣಾಚಾರರ ಕೊಡುಗೆ ಅಪಾರವಾಗಿದೆ’. ವಿಶ್ವಕರ್ಮ ಸಮಾಜವು ಒಗ್ಗಟ್ಟಿನಿಂದ ಮುನ್ನಡೆದು, ಪಂಚ ಕಸುಬುಗಳನ್ನು ಉಳಿಸಿ ಬೆಳೆಸಬೇಕೆಂದು ಕೋರಿದರು.
ತಾಲೂಕ ಉಪದಂಡಾಧಿಕಾರಿಗಳಾದ ರವಿಕುಮಾರ ಹಾಗೂ ನಗರಸಭೆ ಸದಸ್ಯರಾದ ಎಫ್ ರಾಘವೇಂದ್ರರವರು ಮಾತನಾಡಿ, ನಮ್ಮ ದೇಶದಲ್ಲಿ ಇಂದಿಗೂ ಶಿಲ್ಪಕಲೆ ಜೀವಂತವಾಗಿದೆ ಎಂಬುದಕ್ಕೆ ಬೇಲೂರು, ಹಳೇಬೀಡು, ಸೋಮನಾಥಪುರ ಗಳಂತೆ ಐತಿಹಾಸಿಕ ಶಿಲ್ಪಗಳೇ ನಮಗೆ ಸಾಕ್ಷಿಯಾಗಿವೆ ಎಂದರು.
ಮುಂದುವರೆದು ಸಮಾಜದ ಮುಖಂಡ ಮಂಜುನಾಥ್ ಪತ್ತಾರ್ ಮಾತನಾಡಿ ಆಗಿನ ಅಮರ ಶಿಲ್ಪಿ ಜಕಣಾಚಾರಿಯಂತೆ ಈಗಿನ ಮೈಸೂರು ನಾಡಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಶ್ವಕರ್ಮ ಸಮಾಜದ ಆಸ್ತಿಯಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶ್ವಕರ್ಮ ಸಮಾಜದ ಶಿಲ್ಪಿಗಳನ್ನು ಗುರುತಿಸಿ, ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಈ ಸಂಸ್ಮರಣಾ ದಿನಾಚರಣೆ ಅಂಗವಾಗಿ ಸಮಾಜದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಂಗೋಲಿ ಸ್ಪರ್ಧೆ, ಆಶುಭಾಷಣ, ಛದ್ಮವೇಶ, ಅಗ್ನಿರಹಿತ ಅಡುಗೆ ಪದಾರ್ಥಗಳ ತಯಾರಿಕೆ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಹಾಗೆಯೇ ಸಮಾಜದ ಸ್ಥಳೀಯ ಶಿಲ್ಪಿಯಾದ ಪ್ರಶಾಂತ ಸೋನಾರ್ ಶಿಲ್ಪಿಯವರಿಗೆ ಆಡಳಿತ ಮಂಡಳಯಿಂದ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಎನ್.ಎಂ.ಪತ್ತಾರ್, ಸಿ.ವಿ ಸರ್ವಜ್ಞಾಚಾರ್, ಪ್ರಭು ಬಡಿಗೇರ್ ಕೆಸರಟ್ಟಿ, ಮೌನೇಶ್ ಆಚಾರ್, ಜೆ ಮಂಜುನಾಥ್ ಸರಾಫ್, ಸೋಮನಾಥ ವಡ್ಡರಹಟ್ಟಿ, ಮೋನಮ್ಮ ಶಿಕ್ಷಕರು ಹಾಗೂ ಸಮಾಜದ ಗುರುಹಿರಿಯರು, ಮುಖಂಡರು ಯುವ ಮಿತ್ರರು, ಮಹಿಳಾ ಮಂಡಳಿಯವರು ಉಪಸ್ಥಿತರಿದ್ದರು.

 

ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಹಿನ್ನೆಲೆಯಲ್ಲಿ ಬೃಹತ್ ಜಾಗೃತಿ ಜಾಥಾ
ಗಂಗಾವತಿ: ಸಮೀಪದ ಶ್ರೀರಾಮನಗರದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರದಂದು ಶಾಲೆಯ ೩೧ನೆಯ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಯುವ ರಕ್ಷಣೆ ರಾಷ್ಟ್ರೀಯ ರಕ್ಷಣೆ ಎಂಬ ನಾಮದ ಅಡಿಯಲ್ಲಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಜಾಗೃತಿ ಜಾಥಾವನ್ನು ನಡೆಸಿದರು.
ಶಾಲೆಯ ಆವರಣದಿಂದ ನಡೆದ ಜಾಥಾವನ್ನು ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪಾರ್ಥ ಸಾರಥಿ, ಲಿಟಲ್ ಹಾರ್ಟ್ಸ್ ಶಾಲೆಯ ಮುಖ್ಯೋಪಾಧ್ಯಾಯನಿ ಪ್ರಿಯಕುಮಾರಿ, ಪ್ರಭಾಕರ್ ಚಿನ್ನು ಪಾಟಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ರಫಿ, ಶಾಲೆಯ ಮುಖ್ಯ ಗುರು ಶಾರುಣ್ ಕುಮಾರಿ ಸೇರಿದಂತೆ ಇತರರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ವಿಶ್ವಗುರು ಸ್ವಾಮಿ ವಿವೇಕಾನಂದರ ಆಶಯದಂತೆ ಸಮೃದ್ಧ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವವಾಗಿದ್ದು. ಈ ಹಿನ್ನೆಲೆಯಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಯುವ ಜನತೆ ಧೂಮಪಾನ, ತಂಬಾಕು ಜಿಗಿಯೋದು, ಮಾದಕ ವ್ಯಸನಿ, ಮಧ್ಯಪಾನ ಸೇರಿದಂತೆ ಕೆಟ್ಟ ಚಟಗಳಿಗೆ ಮಾರುಹೋಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಯಾಗಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಯುವ ದಿನಚರಣೆ ಪ್ರಯುಕ್ತ ಯುವಜನ ರಕ್ಷಿಸಿ ರಾಷ್ಟ್ರೀಯ ಯುವಕರನ್ನು ಎಚ್ಚರಿಸಿ ಎಂಬ ಸಂದೇಶದ ಅಡಿಯಲ್ಲಿ ಜಾಗೃತಿ ಜಾಥಾದ ಮೂಲಕ ಎಚ್ಚರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಘೋಷಣೆಗಳನ್ನು ಕೂಗುತ್ತಾ ಡಾ. ಪುನೀತ್ ರಾಜಕುಮಾರ್ ವೃತ್ತದ ಬಳಿ ಹಾಡು ನೃತ್ಯ ಮೂಲಕ ವಿಶೇಷ ಗಮನ ಸೆಳೆದರು.
ಲೀಟಲ್ ಹಾರ್ಟ್ ಶಾಲೆಯ ಮುಖ್ಯೋಪಾಧ್ಯಾಯನಿ ಪ್ರಿಯಾ ಕುಮಾರಿ ಮಾತನಾಡಿ ಸಮೃದ್ಧ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ ಆಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂಜಾಗಬೇಕೆಂದು ಕರೆ ನೀಡಿದರು.
ಒಟ್ಟಾರೆ ದಿನಾಂಕ 12ರಂದು ಜರುಗಲಿರುವ 31ನೆಯ ವಾರ್ಷಿಕೋತ್ಸವ ಆಚರಣೆ ಪ್ರಯುಕ್ತ ಜರುಗಿದ ಜನಜಾಗೃತಿ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಹಾಗೂ ಔಚಿತ್ಯಪೂರ್ಣವಾಗಿ ಕಂಡುಬಂದಿತು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು ಶಿಕ್ಷಕರು. ಪಾಲ್ಗೊಂಡಿದ್ದರು.
ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ವೈದ್ಯಕೀಯ ಸಂಘಗಳ ಸಂಪೂರ್ಣ ಬೆಂಬಲ

ಗಂಗಾವತಿ: ನಾಳೆ ನಡೆಯಲಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಭಾರತೀಯ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಸಂಘದ ಮಹಿಳಾ ಘಟಕ, ಐ.ಎಂ.ಎ ಮೈತ್ರಿ, ಭಾರತೀಯ ದಂತ ವೈದ್ಯಕೀಯ ಸಂಘ, ಭಾರತೀಯ ಆಯುಶ್ ವೈದ್ಯಕೀಯ ಸಂಘಗಳು ಐ.ಎಂ.ಎ ಭವನದಲ್ಲಿ ಸಭೆ ಸೇರಿ ತುಂಗಭದ್ರಾ ನದಿ ನಮ್ಮ ನಾಡಿನ ಜೀವನದಿ. ಈ ನದಿಯ ನೀರು ಇಂದು ಕಲುಷಿತವಾಗಿ ಇದರಿಂದ ಹಲವಾರು ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಆದ್ದರಿಂದ ನಾವು ತುಂಗಭದ್ರಾ ನದಿ ಸ್ವಚ್ಚತೆ ಕಾಪಾಡಲು ಎಲ್ಲರೂ ಕೈ ಜೋಡಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾದ್ಯಕ್ಷರಾದ ಡಾ|| ವಿ.ವಿ.ಚಿನಿವಾಲರ್ ಕರೆ ಕೊಟ್ಟರು.

ಗಂಗಾವತಿ ಐ.ಎಂ.ಎ ಅಧ್ಯಕ್ಷರಾದ ಡಾ|| ಎ.ಎಸ್.ಎನ್.ರಾಜು ಅವರು ಮಾತನಾಡಿ, ಈ ನೀರು ನಮಗೆ ಕುಡಿಯುವುದಕ್ಕಷ್ಟೆ ಅಲ್ಲ, ತುಂಗಭದ್ರಾ ನದಿಯ ಮೇಲೆ ನಮ್ಮೆಲ್ಲರ ಜೀವನ ಅವಲಂಬಿಸಿದೆ, ತುಂಗಭದ್ರಾ ತಾಯಿ ತೊಂದರೆಯಲ್ಲಿ ಇದ್ದಾಳೆ, ಅವಳ ಮಕ್ಕಳಾದ ನಾವು ತಾಯಿ ತುಂಗಭದ್ರೆಯನ್ನು ಕಾಪಾಡಲು ಈ ಅಭಿಯಾನದಲ್ಲಿ ಎಲ್ಲಾ ವೈದ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಂದೋಲನದ ಪ್ರಮುಖರಾದ ಡಾ|| ಶಿವಕುಮಾರ ಮಾಲಿಪಾಟೀಲ್, ಮಂಜು ಕಟ್ಟಿಮನಿ, ವಿನಯ್ ಪಾಟೀಲ, ಡಾ|| ನಾಗರಾಜ, ಡಾ|| ಮೇಧಾ, ಡಾ|| ರಾಜಶೇಖರ ನಾರಿನಾಳ, ಡಾ|| ಗುರುರಾಜ ಉಮಚಗಿ, ಡಾ|| ಶ್ಯಾಮಸುಂದರ, ಡಾ|| ಚೇತನ, ಡಾ|| ಭರತ್, ಡಾ|| ಶ್ರೀನಿವಾಸಲು, ಶ್ರೀಮತಿ ಭಾರತಿ ಹೊಸಳ್ಳಿ, ಡಾ|| ಕಿರಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಖಿಲ ಕರ್ನಾಟಕ ನಾಲ್ಕನೇ ಕವಿ-ಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಆಹ್ವಾನ.

ಗಂಗಾವತಿ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ಸ್ಥಳೀಯ ಘಟಕದ ಸಹಕಾರದಲ್ಲಿ ನಗರದ ಶ್ರೀ ಚನ್ನಬಸವೇಶ್ವರ ಕಲಾಮಂದಿರದಲ್ಲಿ ಹಮ್ಮಿಕೊಂಡಿರುವ ಹಿರಿಯ ಸಾಹಿತಿ, ಘನ ವಿದ್ವಾಂಸರಾದ ಪ್ರಾಚಾರ್ಯ ಡಾ. ಜಾಜಿ ದೇವೇಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ ೨೦೨೫ ಜನವರಿ-೧೯ ಭಾನುವಾರ ಬೆಳೆಗ್ಗೆ ೦೯ ಗಂಟೆಯಿಂದ ಸಂಜೆ ೦೭ ಗಂಟೆವರೆಗೂ ಇಡೀ ದಿನ ಸಮ್ಮೇಳನ ನಡೆಯಲಿದ್ದು, ಉದ್ಘಾಟನಾ ಸಮಾರಂಭ ಸೇರಿದಂತೆ ಎರಡು ರಾಜ್ಯಮಟ್ಟದ ಕವಿಗೋಷ್ಠಿಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕೇಂದ್ರ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದರು.

ಅವರು ಗಂಗಾವತಿಯ ಕಲ್ಯಾಣನಗರದ ಡಾ. ಜಾಜಿ ದೇವೇಂದ್ರಪ್ಪನವರ ಮನೆಯಲ್ಲಿ ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಆಹ್ವಾನ ನೀಡಿ ಮಾತನಾಡಿ, ಬಸವಾದಿ ಶಿವಶರಣರ ಹಾಗೂ ಕುವೆಂಪು, ವಿವೇಕಾನಂದರ ಚಿಂತನಾ ತತ್ವಗಳಡಿಯಲ್ಲಿ ಸಮಸಮಾಜದ ಕನಸೊತ್ತು ಕಳೆದ ಏಳೆಂಟು ವರ್ಷಗಳಿಂದ ಎಲೆಮರೆ ಕಾಯಿಯಂತಹ ಸಾಧಕರನ್ನು ಗುರುತಿಸಿ ಸಾಮಾಜಿಕ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಸೇರಿದಂತೆ ಮಹಾರಾಷ್ಟ್ರ, ಕೇರಳ, ಆಂದ್ರಪ್ರದೇಶ ಹಾಗೂ ಹೊರದೇಶಗಳಲ್ಲಿ ನಮ್ಮ ವೇದಿಕೆ ನಿರಂತರವಾಗಿ ಪ್ರತಿ ಕಾರ್ಯನಿರ್ವಹಿಸುತ್ತಿದೆ. ಗಂಗಾವತಿಯಲ್ಲಿ ಸಾಹಿತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡರವರ ನೇತೃತ್ವದಲ್ಲಿ ಗಂಗಾವತಿ ತಾಲ್ಲೂಕು ಘಟಕದವತಿಯಿಂದ ವಿಚಾರಗೋಷ್ಠಿ, ಕೃತಿ ವಿಮರ್ಶೆ, ಕವಿಗೋಷ್ಠಿ, ಕೃತಿ ಲೋಕಾರ್ಪಣೆ ಸೇರಿದಂತೆ ಅನೇಕ ಮೌಲ್ಯಯುತ ಕಾರ್ಯಕ್ರಮಗಳನ್ನು ಈಗಾಗಲೇ ಮಾಡಿದ್ದಾರೆ. ಪ್ರಸ್ತುತ ಜಿಲ್ಲಾಧ್ಯಕ್ಷೆ ಅನಸೂಯ ಜಹಗೀರದಾರ, ಹಿರಿಯ ಸಾಹಿತಿ, ಸಂಘಟಕಿ, ಸಾಮಾಜಿಕ ಹೋರಾಟಗಾರ್ತಿ ಶೈಲಜಾ ಹಿರೇಮಠ, ಸಾಹಿತಿಗಳಾದ ನಾಗಭೂಷಣ ಅರಳಿ, ರಮೇಶ ಗಬ್ಬೂರು, ಮಹಾದೇವ ಮೋಟಿ, ಯಲ್ಲಪ್ಪ ಕಲಾಲ್, ಅಶೋಕ್ ಕುಮಾರ್ ರಾಯ್ಕರ್, ಡಾ|| ಅಮರ್ ಮಕ್ಕಳ ತಜ್ಞರು, ಡಾ|| ಶಿವಕುಮಾರ ದಂತ ವೈದ್ಯರು ಮುಂತಾದವರ ಮುಖಂಡತ್ವದಲ್ಲಿ ನಾಲ್ಕನೇ ಕವಿಕಾವ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.‌

ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರಾದ ಡಾ. ಜಾಜಿ ದೇವೇಂದ್ರಪ್ಪನವರು ಅಧಿಕೃತ ಆಹ್ವಾನ ಸ್ವೀಕರಿಸಿ ಮಾತನಾಡಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಶೋಧನೆ, ಚಿಂತನೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಈ ಹಿನ್ನೆಲೆಯಲ್ಲಿ ಕೊಟ್ರೇಶ್ ಎಸ್. ಉಪ್ಪಾರ್ ನೇತೃತ್ವದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಗಂಗಾವತಿಯಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನ ಹಮ್ಮಿಕೊಂಡು ಈ ಸಮ್ಮೇಳನಕ್ಕೆ ನನ್ನನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು ಅತ್ಯಂತ ಖುಷಿ ಕೊಟ್ಟಿದೆ. ಎಲ್ಲಾ ಸಮ್ಮೇಳನಗಳಲ್ಲೂ ಚರ್ಚೆ, ವಿಚಾರಗೋಷ್ಠಿಗಳು ನಡೆಯುತ್ತವೆ. ಆದರೆ ಈ ಸಮ್ಮೇಳನ ಕೇವಲ ಕಾವ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಉದ್ಘಾಟನೆ ಸೇರಿದಂತೆ ಎರಡು ಮಹತ್ವದ ರಾಜ್ಯಮಟ್ಟದ ಕವಿಗೋಷ್ಠಿಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಇಲ್ಲಿ ಕೇವಲ ಸಮಕಾಲೀನ ಕಾವ್ಯದ ಚರ್ಚೆ ನಡೆಯುತ್ತದೆ. ಇದೊಂದು ವಿಶೇಷ ಸಮ್ಮೇಳನವಾಗಿದ್ದು, ಗಂಗಾವತಿ ಹಾಗೂ ಕೊಪ್ಪಳ ಜಿಲ್ಲೆಯ ಸಾಹಿತ್ಯಾಸಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮುಖೇನ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಡಾ. ಪಿ. ದಿವಾಕರ ನಾರಾಯಣ, ಶಿವಮೊಗ್ಗ ಜಿಲ್ಲಾಧ್ಯಕ್ಷೆ ಡಾ. ಎಚ್.ಕೆ. ಹಸೀನಾ, ಸಾಮಾಜಿಕ ಹೋರಾಟಗಾರ್ತಿ ಹಾಗೂ ಸಾಹಿತಿ ಶೈಲಜಾ ಹಿರೇಮಠ, ತಾಲ್ಲೂಕು ಅಧ್ಯಕ್ಷ ಶರಣಪ್ಪ ತಳ್ಳಿ ಕುಪ್ಪಿಗುಡ್ಡ, ತಿಪಟೂರು ತಾಲ್ಲೂಕು ಅಧ್ಯಕ್ಷೆ ಲತಾಮಣಿ ಎಂ.ಕೆ. ತುರುವೇಕೆರೆ, ಹಿರಿಯ ಸಾಹಿತಿಗಳಾದ ನಾಗಭೂಷಣ ಅರಳಿ, ರಮೇಶ್ ಗಬ್ಬೂರು, ಶಿಕ್ಷಕ ಮಹೇಶ್, ಕು. ಖದೀರಾ ಸೇರಿ

ದಂತೆ ಹಲವರು ಉಪಸ್ಥಿತರಿದ್ದರು.

ಆರೋನ್ ಮೀರಜಕರ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ದಿನಾಚರಣೆ

ಗಂಗಾವತಿ: ಜನವರಿ-೦೩ ಮತ್ತು ೦೪ ಎರಡು ದಿನಗಳ ಕಾಲ ನಗರದ ಹೊಸಳ್ಳಿ ರಸ್ತೆಯಲ್ಲಿರುವ “ಆರೋನ್ ಮಿರಜ್‌ಕರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ದಿನಾಚರಣೆ”ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರುಬೀನ್ ಮಿರಜ್‌ಕರ್ ಅವರು ಧ್ವಜಾರೋಹಣ ಮಾಡುವುದರ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳಿಂದ ಗೌರವ ವಂದನೆಯನ್ನ ಸ್ವೀಕರಿಸಿದರು.

“ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಭಿನ್ನ ಕ್ರೀಡೆಗಳನ್ನು ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ತರಗತಿವಾರು ವಿವಿಧ ತಂಡಗಳನ್ನು ರಚಿಸಲಾಗಿದೆ ಹಾಗೂ ಶಾಲಾ ಶಿಕ್ಷಕರನ್ನು ನಿರ್ಣಾಯಕರಾಗಿ ನೇಮಿಸಲಾಗಿದೆ.” ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾನಸ ಪಾಟೀಲ್ ಮಾಹಿತಿ ನೀಡಿದರು.

“ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಮುಖ್ಯವಾಗಿವೆ. ಮಕ್ಕಳ ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಬೆಳವಣಿಗೆಯು ಅವಶ್ಯವಾಗಿದ್ದು, ನಮ್ಮ ಶಾಲೆಯ ವಿದ್ಯಾರ್ಥಿಗಳು ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡುತ್ತಿದ್ದಾರೆ. ಜೊತೆಗೆ ಪರೀಕ್ಷೆಯಲ್ಲಿ ಉತ್ತಮವಾದ ಪಲಿತಾಂಶವನ್ನು ನೀಡುತ್ತಿದ್ದಾರೆ.” ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ರುಬೀನ್ ಮಿರಜ್‌ಕರ್ ಅವರು ತಿಳಿಸಿದರು.

“‘ಸಧೃಢ ಶರೀರದಲ್ಲಿ, ಸಧೃಢ ಮನಸ್ಸಿರುತ್ತದೆ.’ ಅಂತೆಯೆ ಕ್ರೀಡೆಯು ಮಗುವಿನ ಮನಸ್ಸನ್ನು ಏಕಾಗ್ರತೆಯ ಕಡೆಗೆ ಕೊಂಡೊಯ್ಯುವ ಒಂದು ಸಾಧನವಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಆರೋಗ್ಯ ಯಾವಾಗಲೂ ಸಹ ಚೆನ್ನಾಗಿ ಇರುತ್ತದೆ.” ಎಂದು ಶಾಲೆಯ ಆಡಳಿತಾಧಿಕಾರಿಗಳಾದ ಚಂದ್ರಕಾತ್. ಜಿ ಅವರು ನುಡಿದರು.

ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಮಂಜುನಾಥ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ದೈಹಿಕ ಶಿಕ್ಷಕರಾದ ವೀರೇಶ್ ಇವರು ಪ್ರಮಾಣ ವಚನ ಭೋಧಿಸಿದರು. ನಂತರ ಕ್ರೀಡಾ ತಂಡಗಳ ಪರಿಚಯವನ್ನು ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿಗಳಾದ ಶ್ರೀಮತಿ ಸುನೀತಾ ಮಿರಜ್‌ಕರ್, ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಖಾ ಠಾಕೂರ್, ಶಾಲೆಯ ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡು ದಿನದ ಕಾರ್ಯಕ್ರಮವನ್ನು ಶನಿವಾರ ಮಕ್ಕಳಿಗೆ ಬಹುಮಾನಗಳನ್ನು ಘೋಸಿಸುವ ಮೂಲಕ ಸಮಾಪ್ತಿಗೊಳಿಸಲಾಯಿತು.

ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೆ: ರಮೇಶ್ ಗಬ್ಬುರ್

ಗಂಗಾವತಿ: ದೇಶ ಹಾಗೂ ಯಾವುದೇ ಒಂದು ಸಮಾಜ ಸರ್ವತೋಮುಖ ಅಭಿವೃದ್ಧಿಗೊಳ್ಳಬೇಕಾದರೆ. ಶಿಕ್ಷಣವನ್ನು ಕಲಿತಾಗ ಮಾತ್ರ ಸಾಧ್ಯ ಎಂದು. ಅತ್ಯಂತ ಬಲವಾಗಿ ನಂಬಿದ್ದ ಸಾವಿತ್ರಿಬಾಯಿ ಪುಲೆ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಎಂದು ಕರೆಯಲಾಗುತ್ತದೆ. ಹೀಗಾಗಿ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಿದರೂ ತಪ್ಪೇನಿಲ್ಲ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಗ್ರಂಥಪಾಲಕ ಸಂಗೀತ ಹಾಗೂ ನೃತ್ಯ ಅಕಾಡೆಮಿಯ ಸದಸ್ಯ ರಮೇಶ್ ಗಬ್ಬುರ್ ಅಭಿಪ್ರಾಯಪಟ್ಟರು.

ಶುಕ್ರವಾರದಂದು ಎಂ ಎನ್ ಎಂ. ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ ಸಾವಿತ್ರಿಬಾಯಿ ಪುಲೆ ಅವರ ಜನ್ಮೋತ್ಸವ. ಸಂಗೀತೋತ್ಸವ. ವರ್ಷದ ಕಾಲ ಉದಯವಾಣಿ ಪತ್ರಿಕೆಯನ್ನು ಶಾಲೆಗೆ ಉಚಿತವಾಗಿ ಶಾಲೆಗೆ ದೇಣಿಗೆ ನೀಡಿದ ಡಾ ಕೃಷ್ಣಕುಮಾರ್ ಅವರ ಸನ್ಮಾನ ಸಮಾರಂಭವನ್ನು ಹಾಗೂ ನಿರ್ಮಲ ತುಂಗಭದ್ರಾ ಅಭಿಯಾನದ ಪ್ರತಿಜ್ಞಾವಿಧಿ ಬೋಧನೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.. ಇದಕ್ಕೂ ಪೂರ್ವದಲ್ಲಿ. ಶಿಕ್ಷಣದ ಮಾತೆ ಸಾವಿತ್ರಿಬಾಯಿ ಪೂಲೆ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ. ಸಸಿಗಳಿಗೆ ನೀರು ಹಾಕುವುದರ ಮೂಲಕ ವೇದಿಕೆಯಲ್ಲಿನ ಗಣ್ಯರು ಚಾಲನೆಯನ್ನು ನೀಡಿದರು. ಬಳಿಕ ಸಮಾರಂಭವನ್ನು ಉದ್ದೇಶಿಸಿ ರಮೇಶ್ ಗಬ್ಬೂರು ಮಾತನಾಡಿ ಡಾ, ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮೋತ್ಸವವನ್ನು ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿರುವುದು. ಒಂದೆಡೆ ಆದರೆ ಅವರಿಗಿಂತ ಇತಿಹಾಸದ ಪೂರ್ವ ಪುಟದಲ್ಲಿ ಹಲವು ದಶಕಗಳ ಕಾಲ ಮುಂಚೆ ಹುಟ್ಟಿದ ಸಾವಿತ್ರಿಬಾಯಿ ಪುಲೆ ಅವರು ಮಹಿಳೆಯರ ಶಿಕ್ಷಣಕ್ಕಾಗಿ ಹತ್ತು ಹಲವಾರು ಶಾಲೆಗಳನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸುವುದರ ಮೂಲಕ ಮಹಿಳಾ ಸಬಲೀಕರಣಕ್ಕೆ ಅದ್ಭುತ ವ್ಯಕ್ತಿಯಾಗಿ ಶಕ್ತಿಯಾಗಿ ಕಂಗೊಳಿಸುತ್ತಿದ್ದಾರೆ ಎಂದು ಅವರ ಜೀವನ ಕುರಿತು.\ ತಮ್ಮ ಮಾತಿನ ಮೂಲಕ ಹಾಗೂ ಹಾಡಿನ ಮೂಲಕ ಸಮಗ್ರ ಮಾಹಿತಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸನ್ಮಾನಿತಗೊಂಡ ದಾನಿ ಡಾ ಕೃಷ್ಣಕುಮಾರ್ ಮಾತನಾಡಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಪ್ರಪಂಚಕ ಜ್ಞಾನ ಪಡೆದುಕೊಳ್ಳಲು ದಿನಪತ್ರಿಕೆಗಳು ಸಹಕಾರಿಯಾಗಿದೆ. ದೇಶ ನೋಡು ಇಲ್ಲವೇ ಕೋಶ ಓದು ಎಂಬ ಮಾತಿನಂತೆ ಜ್ಞಾನದ ಅಭಿವೃದ್ಧಿಗೆ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಎಂ ಎನ್ ಎಂ ಕಾಲೇಜಿನ ಪ್ರಾಚಾರ್ಯ ಶಾಂತಪ್ಪ. ಪ್ರಭಾರಿ ಮುಖ್ಯ ಗುರು ಸುಮಂಗಲ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಕೆ ನಿಂಗಜ್ಜ. ಎಫ್ ಎಂ ಕೇಂದ್ರದ ನಿರ್ದೇಶಕ ರಾಘವೇಂದ್ರ, ದೈಹಿಕ ನಿರ್ದೇಶಕಿ ಉಮಾದೇವಿ, ಮಲ್ಲಿಕಾರ್ಜುನ್, ವೀರಣ್ಣ, ಅಮರೇಶ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಂಗೀತ ಶಿಕ್ಷಕರ ನಿವೃತ್ತಿ ಹಿನ್ನೆಲೆಯಲ್ಲಿ ಸಂಗೀತೋತ್ಸವ ಕಾರ್ಯಕ್ರಮ ಅಡಿಯಲ್ಲಿ ಭಾವಗೀತೆಯ ಜನಪದ ಗೀತೆ ಹಾಗೂ ಪರಿಸರ ಕುರಿತು ಹಾಡುಗಳನ್ನು ಹಾಡಲಾಯಿತು. ಈರಣ್ಣ ಶಿಕ್ಷಕರು ಸ್ವಾಗತಿಸಿದರು ಮಲ್ಲಿಕಾರ್ಜುನ್ ಶಿಕ್ಷಕರು ವಂದಿಸಿದರು.

ಗಂಗಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಗಂಗಾವತಿ: ಜನವರಿ-೫ ರವಿವಾರ ಗಂಗಾವತಿ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ತಾಲೂಕು ಘಟಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಚಟುವಟಿಕೆಗಳ ಸಮಾರಂಭ ಜರುಗಲಿದೆ.
ಉದ್ಘಾಟನೆಯನ್ನು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಶಿವರಾಜ ಎಸ್. ತಂಗಡಗಿಯವರು ನೆರವೇರಿಸಲಿದ್ಧಾರೆ. ಭುವನೇಶ್ವರಿ ಭಾವಚಿತ್ರಕ್ಕೆ ಶಾಸಕರಾದ ಶ್ರೀ ಗಾಲಿ ಜನಾರ್ಧನರೆಡ್ಡಿ ಮಾಲಾರ್ಪನೆ ಮಾಡಲಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಸಂಸದರಾದ ಶ್ರೀ ರಾಜಶೇಖರ ಹಿಟ್ನಾಳ ನೆರವೇರಿಸಲಿದ್ದಾರೆ. ಪುಸ್ತಕ ಲೋಕಾರ್ಪಣೆಯನ್ನು ಮಾಜಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಶರಣೇಗೌಡ ಪೊಲೀಸ್ ಪಾಟೀಲ್ ವಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಕೆರೂರು ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಲ್ಲಪ್ಪ ಟಿ. ಹೊಸೂರು ಆಗಮಿಸಲಿದ್ದಾರೆ. ಗೌರವಾನ್ವಿತರಾಗಿ ಕೇಂದ್ರ ಕಸಾಪ ಸಂಘ-ಸಂಸ್ಥೆ ಪ್ರತಿನಿಧಿಯಾದ ಶ್ರೀ ನಬಿಸಾಬ್ ಕುಷ್ಟಗಿ, ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯರು ಹಾಗೂ ಕನಕಗಿರಿ ೪ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಶರಣಬಸಪ್ಪ ಕೋಲ್ಕಾರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ಶ್ರೀ ರಮೇಶ ಗಬ್ಬೂರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಶ್ರೀ ಅಜಮೀರ ನಂದಾಪುರ, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಸದಸ್ಯರಾದ ಶ್ರೀ ಕೆ. ನಿಂಗಜ್ಜ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯರಾದ ಡಾ. ಜಾಜಿ ದೇವೆಂದ್ರಪ್ಪ ಉಪಸ್ಥಿತರಿರಲಿದ್ದಾರೆ.
ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿವಾಸ ಅಂಗಡಿಯವರು ನೂತನ ಅಧ್ಯಕ್ಷರಾದ ರುದ್ರೇಶ ಎಂ. ಆರ‍್ಹಾಳ ರವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು ಹಾಗೂ ನವಲಿ ೫ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಶ್ರೀ ಲಿಂಗಾರೆಡ್ಡಿ ಆಲೂರುರವರು ದಿಕ್ಸೂಚಿ ನುಡಿಗಳನ್ನು ಆಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರವರ್ಗದವರು, ಸಾಹಿತಿಗಳು, ವಿವಿಧ ತಾಲೂಕುಗಳ ಕಸಾಪ ಅಧ್ಯಕ್ಷರುಗಳು ಉಪಸ್ಥಿತರಿರಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಸಾಪ ಆಜೀವ ಸದಸ್ಯರು, ದೃಶ್ಯ ಮತ್ತು ಶ್ರವ್ಯ ಮಾದ್ಯಮ ಬಂಧುಗಳು, ಗುರು-ಹಿರಿಯರು, ಎಲ್ಲಾ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ನೂತನ ತಾಲೂಕ ಅಧ್ಯಕ್ಷರಾದ ರುದ್ರೇಶ ಎಂ. ಆರ‍್ಹಾಳರವರು, ಗೌರವ ಕಾರ್ಯದರ್ಶಿಗಳಾದ ಶಿವಾನಂದ ತಿಮ್ಮಾಪುರ, ರಮೇಶ ಬಾಳೇಕಾಯಿ ವಿನಂತಿಸಿಕೊಂಡಿದ್ದಾರೆ.

ಗಂಗಾವತಿಯಲ್ಲಿ ಯಶಸ್ವಿ ೪ನೇ ವರ್ಷದ ಗರ್ಭಧಾರಣೆ ಸಮಸ್ಯೆ ಮತ್ತು ಬಂಜೆತನ ನಿವಾರಣೆಯ ಉಚಿತ ಶಿಬಿರ

ಗಂಗಾವತಿ: ಜೀನಿಯ ಫರ್ಟಿಲಿಟಿ ಸೆಂಟರ್ ಹಾಗೂ ಯಶೋಧ ಆಸ್ಪತ್ರೆ ಗಂಗಾವತಿ ಸಹಯೋಗದಲ್ಲಿ ಜನವರಿ-೩ ಶುಕ್ರವಾರ ಬೆಳಿಗ್ಗೆ ೧೦:೦೦ ಗಂಟೆಯಿಂದ ಮದ್ಯಾಹ್ನ ೪:೦೦ ರವರೆಗೆ ಗರ್ಭಧಾರಣೆ ಸಮಸ್ಯೆ ಮತ್ತು ಬಂಜೆತನ ನಿವಾರಣೆ ಬಗ್ಗೆ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಖ್ಯಾತ ವೈದ್ಯರಾದ ಡಾ|| ಸತೀಶ ರಾಯಕರ್ ಪ್ರಕಟಣೆಯಲ್ಲಿ ತಿಳಿಸಿದರು.
ಹೊಸವರ್ಷದ ಪ್ರಯುಕ್ತ ಈ ಉಚಿತ ಶಿಬಿರದಲ್ಲಿ ಮಕ್ಕಳಿಲ್ಲದ ೭೫ ದಂಪತಿಗಳಿಗೆ ಉಚಿತ ಬಂಜೆತನ ನಿವಾರಣಾ ಶಿಬಿರ, ಉಚಿತ ಸಮಾಲೋಚನೆ, ಉಚಿತ ಸ್ಕ್ಯಾನ್‌, ಉಚಿತ ವೀರ್ಯಾಣು ಪರೀಕ್ಷೆ, ಉಚಿತ ತಪಾಸಣೆ, ಉಚಿತ ಸಲಹೆಗಳನ್ನು ನೀಡಲಾಗುತ್ತದೆ.
ಈ ಶಿಬಿರದಲ್ಲಿ ಡಾ|| ದಿವ್ಯಶ್ರೀ ಪಿ. ಯೆಸ್ ಹಾಗೂ ಡಾ|| ಪ್ರಭಾ ರಾಯಕರ್ ತಪಾಸಣೆ ಮಾಡಲಿದ್ದಾರೆ,
ಮಕ್ಕಳಾಗುವ ಅವಕಾಶವಿದ್ದರೂ ಸಹ ಸೂಕ್ತ ಸಲಹೆ, ಸೂಚನೆ, ಚಿಕಿತ್ಸೆಗಳಿಲ್ಲದೆ ಸಂತಾನಕ್ಕಾಗಿ ಹಂಬಲಿಸುತ್ತಿರುವ ದಂಪತಿಗಳಿಗಾಗಿಯೇ ಈ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ದಂಪತಿಗಳ ಬಂಜೆತನ ಪರಿಹಾರಕ್ಕಾಗಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ಕೋರಿದ್ದಾರೆ.
ಈ ಉಚಿತ ಶಿಬಿರದ ನೋಂದಣಿಗಾಗಿ ಮೊಬೈಲ್ ಸಂಖ್ಯೆ ೮೯೭೦೪೯೦೧೦೮ ಸಂಪರ್ಕಿಸಲು ತಿಳಿಸಲಾಗಿದೆ.https://www.facebook.com/share/p/19k9iWSizM/

ಕಮ್ಮವಾರಿ ಯುವ ಸೇವಾ ಸಮಿತಿವತಿಯಿಂದ ನೂತನ ಕ್ಯಾಲೆಂಡರ್ ಬಿಡುಗಡೆ

ಗಂಗಾವತಿ: ತಾಲೂಕ ಕಮ್ಮಾವಾರಿ ಯುವ ಸೇವಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರದಂದು ನಗರದ ಅಗ್ರಿಕಲ್ಚರ್ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ 2025 ವರ್ಷದ ನೂತನ ಕ್ಯಾಲೆಂಡರ್ ಅನ್ನು ಶ್ರೀನಿವಾಸ್ ನೆಕ್ಕಂಟಿ, ಚಿನ್ನುಪಾಟಿ ಪ್ರಭಾಕರ್, ಜಿ ರಾಮಕೃಷ್ಣ, ಗೋವಿಂದ ಮುದ್ಯಾಳ, ಎನ್ ಕುಟುಂಬರಾವ್, ಸತ್ಯನಾರಾಯಣ, ಪ್ರಸಾದ್ ಸೇರಿದಂತೆ ಇತರರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನೆಕ್ಕಂಟಿ ಸತ್ಯನಾರಾಯಣ ಮಾತನಾಡಿ ಕಮ್ಮವಾರಿ ಸಮಾಜದ ಅಭಿವೃದ್ಧಿ ಸಂಘದವರು ವಿಶೇಷ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಶೇಕಡ 30ರಷ್ಟು ಬಡಜನರನ್ನು ಸಮಾಜ ಹೊಂದಿದ್ದು. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅಂತಹ ಕುಟುಂಬದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಹಕಾರಿ ಬ್ಯಾಂಕುಗಳು ನಿರ್ಮಾಣ, ಆಸ್ಪತ್ರೆ ಸೇರಿದಂತೆ ಸೌಲಭ್ಯ ವಂಚಿತ ಬಡ ಕುಟುಂಬಗಳ ಅಭಿವೃದ್ಧಿಗೆ ಶ್ರಮಿಸುವಂತಹ ಕಾರ್ಯವಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಸಂಕ್ರಾಂತಿ ಪ್ರಸಾದ್, ನೆಕ್ಕಂಟಿ ಸತ್ಯನಾರಾಯಣ, ಸುಬ್ಬರಾವ್ ಶ್ರೀಮತಿ ಮಾಲತಿ ಉಪಸ್ಥಿತರಿದ್ದರು. https://www.facebook.com/share/p/1E9861y6rf/