ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ವೈದ್ಯಕೀಯ ಸಂಘಗಳ ಸಂಪೂರ್ಣ ಬೆಂಬಲ

ಗಂಗಾವತಿ: ನಾಳೆ ನಡೆಯಲಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಭಾರತೀಯ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಸಂಘದ ಮಹಿಳಾ ಘಟಕ, ಐ.ಎಂ.ಎ ಮೈತ್ರಿ, ಭಾರತೀಯ ದಂತ ವೈದ್ಯಕೀಯ ಸಂಘ, ಭಾರತೀಯ ಆಯುಶ್ ವೈದ್ಯಕೀಯ ಸಂಘಗಳು ಐ.ಎಂ.ಎ ಭವನದಲ್ಲಿ ಸಭೆ ಸೇರಿ ತುಂಗಭದ್ರಾ ನದಿ ನಮ್ಮ ನಾಡಿನ ಜೀವನದಿ. ಈ ನದಿಯ ನೀರು ಇಂದು ಕಲುಷಿತವಾಗಿ ಇದರಿಂದ ಹಲವಾರು ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಆದ್ದರಿಂದ ನಾವು ತುಂಗಭದ್ರಾ ನದಿ ಸ್ವಚ್ಚತೆ ಕಾಪಾಡಲು ಎಲ್ಲರೂ ಕೈ ಜೋಡಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾದ್ಯಕ್ಷರಾದ ಡಾ|| ವಿ.ವಿ.ಚಿನಿವಾಲರ್ ಕರೆ ಕೊಟ್ಟರು.

ಗಂಗಾವತಿ ಐ.ಎಂ.ಎ ಅಧ್ಯಕ್ಷರಾದ ಡಾ|| ಎ.ಎಸ್.ಎನ್.ರಾಜು ಅವರು ಮಾತನಾಡಿ, ಈ ನೀರು ನಮಗೆ ಕುಡಿಯುವುದಕ್ಕಷ್ಟೆ ಅಲ್ಲ, ತುಂಗಭದ್ರಾ ನದಿಯ ಮೇಲೆ ನಮ್ಮೆಲ್ಲರ ಜೀವನ ಅವಲಂಬಿಸಿದೆ, ತುಂಗಭದ್ರಾ ತಾಯಿ ತೊಂದರೆಯಲ್ಲಿ ಇದ್ದಾಳೆ, ಅವಳ ಮಕ್ಕಳಾದ ನಾವು ತಾಯಿ ತುಂಗಭದ್ರೆಯನ್ನು ಕಾಪಾಡಲು ಈ ಅಭಿಯಾನದಲ್ಲಿ ಎಲ್ಲಾ ವೈದ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಂದೋಲನದ ಪ್ರಮುಖರಾದ ಡಾ|| ಶಿವಕುಮಾರ ಮಾಲಿಪಾಟೀಲ್, ಮಂಜು ಕಟ್ಟಿಮನಿ, ವಿನಯ್ ಪಾಟೀಲ, ಡಾ|| ನಾಗರಾಜ, ಡಾ|| ಮೇಧಾ, ಡಾ|| ರಾಜಶೇಖರ ನಾರಿನಾಳ, ಡಾ|| ಗುರುರಾಜ ಉಮಚಗಿ, ಡಾ|| ಶ್ಯಾಮಸುಂದರ, ಡಾ|| ಚೇತನ, ಡಾ|| ಭರತ್, ಡಾ|| ಶ್ರೀನಿವಾಸಲು, ಶ್ರೀಮತಿ ಭಾರತಿ ಹೊಸಳ್ಳಿ, ಡಾ|| ಕಿರಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply