ಗಂಗಾವತಿ: ಸಮೀಪದ ಶ್ರೀರಾಮನಗರದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರದಂದು ಶಾಲೆಯ ೩೧ನೆಯ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಯುವ ರಕ್ಷಣೆ ರಾಷ್ಟ್ರೀಯ ರಕ್ಷಣೆ ಎಂಬ ನಾಮದ ಅಡಿಯಲ್ಲಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಜಾಗೃತಿ ಜಾಥಾವನ್ನು ನಡೆಸಿದರು.
ಶಾಲೆಯ ಆವರಣದಿಂದ ನಡೆದ ಜಾಥಾವನ್ನು ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪಾರ್ಥ ಸಾರಥಿ, ಲಿಟಲ್ ಹಾರ್ಟ್ಸ್ ಶಾಲೆಯ ಮುಖ್ಯೋಪಾಧ್ಯಾಯನಿ ಪ್ರಿಯಕುಮಾರಿ, ಪ್ರಭಾಕರ್ ಚಿನ್ನು ಪಾಟಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ರಫಿ, ಶಾಲೆಯ ಮುಖ್ಯ ಗುರು ಶಾರುಣ್ ಕುಮಾರಿ ಸೇರಿದಂತೆ ಇತರರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ವಿಶ್ವಗುರು ಸ್ವಾಮಿ ವಿವೇಕಾನಂದರ ಆಶಯದಂತೆ ಸಮೃದ್ಧ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವವಾಗಿದ್ದು. ಈ ಹಿನ್ನೆಲೆಯಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಯುವ ಜನತೆ ಧೂಮಪಾನ, ತಂಬಾಕು ಜಿಗಿಯೋದು, ಮಾದಕ ವ್ಯಸನಿ, ಮಧ್ಯಪಾನ ಸೇರಿದಂತೆ ಕೆಟ್ಟ ಚಟಗಳಿಗೆ ಮಾರುಹೋಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಯಾಗಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಯುವ ದಿನಚರಣೆ ಪ್ರಯುಕ್ತ ಯುವಜನ ರಕ್ಷಿಸಿ ರಾಷ್ಟ್ರೀಯ ಯುವಕರನ್ನು ಎಚ್ಚರಿಸಿ ಎಂಬ ಸಂದೇಶದ ಅಡಿಯಲ್ಲಿ ಜಾಗೃತಿ ಜಾಥಾದ ಮೂಲಕ ಎಚ್ಚರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಘೋಷಣೆಗಳನ್ನು ಕೂಗುತ್ತಾ ಡಾ. ಪುನೀತ್ ರಾಜಕುಮಾರ್ ವೃತ್ತದ ಬಳಿ ಹಾಡು ನೃತ್ಯ ಮೂಲಕ ವಿಶೇಷ ಗಮನ ಸೆಳೆದರು.
ಲೀಟಲ್ ಹಾರ್ಟ್ ಶಾಲೆಯ ಮುಖ್ಯೋಪಾಧ್ಯಾಯನಿ ಪ್ರಿಯಾ ಕುಮಾರಿ ಮಾತನಾಡಿ ಸಮೃದ್ಧ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ ಆಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂಜಾಗಬೇಕೆಂದು ಕರೆ ನೀಡಿದರು.
ಒಟ್ಟಾರೆ ದಿನಾಂಕ 12ರಂದು ಜರುಗಲಿರುವ 31ನೆಯ ವಾರ್ಷಿಕೋತ್ಸವ ಆಚರಣೆ ಪ್ರಯುಕ್ತ ಜರುಗಿದ ಜನಜಾಗೃತಿ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಹಾಗೂ ಔಚಿತ್ಯಪೂರ್ಣವಾಗಿ ಕಂಡುಬಂದಿತು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು ಶಿಕ್ಷಕರು. ಪಾಲ್ಗೊಂಡಿದ್ದರು.