ಪತ್ರಿಕಾ ದಿನಾಚರಣೆ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜರುಗಿತು.

ಗಂಗಾವತಿ: ಜುಲೈ 31 ರಂದು ಬೆಂಗಳೂರಿನ ಕೊಂಡಜ್ಜ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕದ ಮಾಧ್ಯಮ ಪತ್ರಕರ್ತರ (ರಿ) ಸಂಘವನ್ನು ಅಧಿಕೃತವಾಗಿ ಸ್ಥಾಪಿಸಲಾಗುವುದು.

ಈ ಸಂಘವನ್ನು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಅದೇ ವೇದಿಕೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವೂ ಜರುಗಲಿದೆ.

ಅದೇ ದಿನ ಸಂಘದ ವೆಬ್‌ಸೈಟ್ ಉದ್ಘಾಟನೆ ಮತ್ತು ಸದಸ್ಯರ ಗುರುತಿನ ಕಾರ್ಡ್ ವಿತರಣೆ ಕಾರ್ಯಕ್ರಮಗಳು ಕೂಡ ನಡೆಯಲಿವೆ.

ಈ ಕಾರ್ಯಕ್ರಮಕ್ಕೆ ಗಂಗಾವತಿಯ ಹೆಚ್ಚಿನ ಪತ್ರಕರ್ತರು ಭಾಗವಹಿಸಬೇಕೆಂಬ ಉದ್ದೇಶದಿಂದ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜುಲೈ 17ರಂದು ನಡೆಯಿತು.

ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಈ ಸಭೆ ನಡೆದಿದ್ದು, ರಾಜ್ಯ ಸಮಿತಿ ಸದಸ್ಯ ಎಚ್. ಮಲ್ಲಿಕಾರ್ಜುನ ಹೊಸಕೇರಿ ನೇತೃತ್ವ ವಹಿಸಿದ್ದರು.

ಜಿಲ್ಲಾಧ್ಯಕ್ಷ ರಮೇಶ್ ಕೋಟಿಯವರೂ ಸಭೆಯಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ, ಪತ್ರಕರ್ತರು ಸಂಘದ ಮಾನಸಮರ್ಥತೆ ಕಾಪಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಡಿ.ಎಂ. ಸುರೇಶ್, ಎಸ್. ಮಾರ್ಕಂಡೇಯ, ರಾಮಕೃಷ್ಣ ಸಿ.ಡಿ, ರಮೇಶ್ ಕಾಳಿ, ಮಲ್ಲೇಶ ನಾಯ್ಕ್ ಮತ್ತು ಹಲವರು ಭಾಗವಹಿಸಿದರು.

ಸಭೆಯಲ್ಲಿ ನಾಗರಾಜ ಕೊಟ್ನೆಕಲ್, ಸೋಮಪ್ಪ, ನಾಗರಾಜ ಅಂಗಡಿ, ಶರಣಯ್ಯ ಹೆಚ್.ಎಂ, ಡಿ.ರವಿಕುಮಾರ್, ಗಾಯಕವಾಡ, ಯಮನೂರಪ್ಪ, ಹೆಚ್.ಭೋಗೇಶ್ ಮತ್ತು ಇತರರು ಉಪಸ್ಥಿತರಿದ್ದರು.

ಆಷಾಢ ಮಾಸದ ಭೀಮನ ಅಮಾವಾಸ್ಯೆ: ಕಿಷ್ಕಿಂದ ಅಂಜನಾದ್ರಿಯಲ್ಲಿ ವಿಶೇಷ ಕಾರ್ಯಕ್ರಮಗಳು

ಗಂಗಾವತಿ: ಇತಿಹಾಸ ಪ್ರಸಿದ್ಧ ಹನುಮ ಹುಟ್ಟಿದ ನಾಡೆಂದು ಪ್ರಸಿದ್ಧವಾದ ವಿಜಯನಗರ ಸಾಮ್ರಾಜ್ಯದ ಆನೆಗುಂದಿ ಪ್ರದೇಶದ ಕಿಷ್ಕಿಂದ ಅಂಜನಾದ್ರಿಯಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಈ ಪೂಜಾ ಕಾರ್ಯಕ್ರಮಗಳು ಚಿಕ್ಕ ರಾಮಪುರದ ಆಂಜನೇಯ ದೇವಾಲಯದಲ್ಲಿ, ಪ್ರಧಾನ ಅರ್ಚಕ ಶ್ರೀ ವಿದ್ಯಾದಾಸ ಬಾಬಾಜಿ ಅವರ ನೇತೃತ್ವದಲ್ಲಿ ಉತ್ಸವಪೂರ್ವಕವಾಗಿ ನೆರವೇರಿಸಲ್ಪಟ್ಟವು.

ಬೆಳಿಗ್ಗೆ ಮೂಲ ಆಂಜನೇಯನಿಗೆ ಜಲಾಭಿಷೇಕ, ಪಂಚಾಮೃತಾಭಿಷೇಕ, ಅಷ್ಟೋತ್ತರ ಪಾರಾಯಣ, ವಾಯುಸ್ತುತಿ ಪಠಣ, ಹನುಮಾನ್ ಚಾಲೀಸಾ ಪಾರಾಯಣ ಹಾಗೂ ಭಜನೆಗಳನ್ನು ಮಾಡಲಾಯಿತು.

ಪೂಜೆಯ ಬಳಿಕ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಇಷ್ಟಾರ್ಥಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು.

 

ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಭಕ್ತರು ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅರ್ಚಕ ವಿದ್ಯಾದಾಸ ಬಾಬಾಜಿ ಮಾತನಾಡುತ್ತಾ, “ಆಂಜನೇಯನ ಅವತಾರವಾದ ಭೀಮಸೇನ ಧರ್ಮಮಾರ್ಗದಲ್ಲಿ ನಡೆದದ್ದು, ಕೌರವರು ಸೋಲಲು ಇದು ಕಾರಣವಾಯಿತು,” ಎಂದು ಹೇಳಿದರು.

ಪತಿಗೆ ಪಾದಪೂಜೆ ಮಾಡುವುದರ ಮೂಲಕ ಪತ್ನಿಯು ಗಂಡನ ಆಯುಷ್ಯ ವೃದ್ಧಿಗೆ ಪ್ರಾರ್ಥಿಸುವ ಪವಿತ್ರ ದಿನವಾಗಿದೆ ಎಂಬುದನ್ನೂ ಅವರು ತಿಳಿಸಿದರು.

ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ದಿನಾಂಕ 27-07-2025 ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ್ ಲಂಬಾಣಿ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಗಳಿಂದ 34 ಮಂದಿ ಗಾಯಕ-ಗಾಯಕಿಯರು ಆಯ್ಕೆಯಾಗಿದ್ದು, ತಮ್ಮ ಕಲೆ ಪ್ರದರ್ಶನ ಮಾಡಲು ಅವಕಾಶ ಪಡೆಯಿದ್ದಾರೆ.

ಆಯ್ಕೆಯಾದ ಕಲಾವಿದರು ಇಂತಿವೆ:

  1. ಶ್ರೀಮತಿ ಸುಮಂಗಲಾ ದೇಸಾಯಿ (ಜೋಯಿಡಾ)

  2. ವಿಜಯಕುಮಾರ್ (ಹೊಸಪೇಟೆ)

  3. ಶ್ರೀಮತಿ ಜಿ.ನೀಲಗಂಗಮ್ಮ (ಹೊಸಪೇಟೆ)

  4. ಶ್ರೀಮತಿ ವಾಸವಿ ಸತೀಶ್ (ತುರುವೇಕೆರೆ)

  5. ವಾಲ್ಯಾನಾಯ್ಕ್ ಎಲ್ (ವಿಜಯನಗರ)

  6. ರಾಕೇಶ್ ಸಿಂಗ್ (ಚಿಕ್ಕಮಗಳೂರು)

  7. ಪಿ.ಮಲ್ಲಿಕಾರ್ಜುನ (ದಾವಣಗೆರೆ)

  8. ರಾಮನಾಥ ಜೆ. ನಾಯ್ಕ (ಅಂಕೋಲಾ)

  9. ಶ್ರೀಮತಿ ರೀನಾ ನಂದನ್ (ಹೊಸಪೇಟೆ)

  10. ಹನುಮಂತ ನಾಯ್ಕ್ ಸಿ (ನಾಗರಕಟ್ಟೆ ತಾಂಡ)

  11. ಬಿ.ಎನ್. ನಾಗೇಶ್ (ದಾವಣಗೆರೆ)

  12. ಗೌರಿ ಅರಸು (ಮಂಡ್ಯ)

  13. ವೀಣಾ ನಟರಾಜ್ (ಅಜ್ಜಂಪುರ)

  14. ಸ್ನೇಹ (ತೀರ್ಥಹಳ್ಳಿ)

  15. ಎಲ್. ಗಣೇಶ್ (ತುಂಬಿನಕೇರಿ ದೊಡ್ಡತಾಂಡ)

  16. ಆರ್. ಪ್ರಿಯಾಂಕ (ಹೊಸಪೇಟೆ)

  17. ಟಿ. ದೀಪಾ (ವಿಜಯನಗರ)

  18. ವಿದ್ಯಾ ಕೆ (ಚಿಕ್ಕಮಗಳೂರು)

  19. ಪ್ರಶಾಂತ್ ಕುಲಕರ್ಣಿ (ದಾಂಡೇಲಿ)

  20. ಶಶಿಧರ್ ಹಿರೇಮಠ (ಸೊಂಡೂರು)

  21. ಲಕ್ಷ್ಮೀ ಎಚ್ (ಹೊಸಪೇಟೆ)

  22. ಜೂಟೂರು ರಾಘವೇಂದ್ರ (ಹೊಸಪೇಟೆ)

  23. ಶ್ರೀದೇವಿ ತೇರದಾಳ (ಮಹಾಲಿಂಗಪುರ)

  24. ಉಮೇಶ್ ಕುಮಾರ್ ಎಚ್.ಎನ್ (ದಾವಣಗೆರೆ)

  25. ವಿಜಯಶಾಂತಿ ಕೆ (ಕಮಲಾಪುರ)

  26. ಡಾ. ಅಶೋಕ್ ಬಾಬು ಎ.ಆರ್ (ಚಿಕ್ಕಬಳ್ಳಾಪುರ)

  27. ಎಚ್. ಶ್ರೀನಿವಾಸ್

  28. ತಿಮ್ಮನಾಯ್ಕ್ ಸಿ (ಮುದ್ಲಾಪುರ)

  29. ರಮೇಶ್ ಎಸ್. ಲಮಾಣಿ (ಚಿತ್ರದುರ್ಗ)

  30. ಭಾಗ್ಯ ಎಸ್ (ಶಿವಮೊಗ್ಗ)

  31. ಕವಿತಾಬಾಯಿ ವೈ (ಭದ್ರಾವತಿ)

  32. ವಿಜಯ್ ಕುಮಾರ್ ಸಿ.ಆರ್ (ಚಿಕ್ಕಮಗಳೂರು)

  33. ಸುರೇಶ್ ರಾವ್ (ತುಮಕೂರು)

  34. ಮಹಾನಂದ ಮಠಪತಿ (ಕಲ್ಲೂರ್ ರೋಡ್)

ಈ ಗಾಯನ ಕಾರ್ಯಕ್ರಮದ ವೇಳೆ “ಕನ್ನಡ ಕೋಗಿಲೆ” ಎಂಬ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭ ಕೂಡ ನಡೆಯಲಿದೆ ಎಂದು ತಿಳಿಸಲಾಗಿದೆ.

ಈ ಎಲ್ಲ ಗಾಯಕ ಗಾಯಕಿಯರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷರು, ಗೌರವಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅಂತೆಯೇ, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ಸಂಘದ ಪದಾಧಿಕಾರಿಗಳು ಕೋರಿದ್ದಾರೆ.

ಲಯನ್ಸ್ ಕ್ಲಬ್ ನ ವತಿಯಿಂದ ಉಚಿತ ಕನ್ನಡಕ ವಿತರಣೆ

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಮತ್ತು ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಜುಲೈ 24ರಂದು ಜರುಗಿತು.

ಈ ಕಾರ್ಯಕ್ರಮದಲ್ಲಿ, ಜುಲೈ 16ರಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದ ನೇತ್ರ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ 360 ಕನ್ನಡಕಗಳನ್ನು ವಿತರಿಸಲಾಯಿತು.

ವಿತರಣಾ ಕಾರ್ಯಕ್ರಮ ಶ್ರೀರಾಮನಗರದ ಎ.ಕೆ.ಆರ್.ಡಿ ಪಿಯು ಕಾಲೇಜಿನ ಆವರಣದಲ್ಲಿ ನಡೆದಿದ್ದು, ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಹಾಗೂ ವಿಜಯನಗರ ಲಯನ್ಸ್ ಕ್ಲಬ್‌ನ ಲ.ಗಂಗಾಧರ ಮತ್ತು ಲ.ಎನ್. ಭೈರೇಗೌಡ ಭಾಗವಹಿಸಿದರು.

ಗಂಗಾವತಿ ಲಯನ್ಸ್‌ ಕ್ಲಬ್‌ ನ ಹಿರಿಯ ಸದಸ್ಯರಾದ ಲ.ಹರಿಬಾಬು, ಆರೋಗ್ಯ ಶಿಬಿರದ ಸಂಯೋಜಕರಾದ ಲ.ಸುಬ್ರಮಣ್ಯೇಶ್ವರರಾವ್‌ ಭಾಗವಹಿಸಿದರು.

ಲಯನ್ಸ್‌ ಕ್ಲಬ್‌ ಗಂಗಾವತಿ ಖಜಾಂಚಿಯಾದ ಲ.ಶಿವಪ್ಪ ಗಾಳಿ, ಲ.ಅಜಾದ್ ಗನ್ನಮನಿ, ಲ.ಶಿವಕುಮಾರ ಅಂಗಡಿ, ಲ.ಗುರುಪ್ರಸಾದ, ಪಿ.ಸತ್ಯನಾರಾಯಣ, ಎ.ಕೆ.ಆರ್.ಡಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಅಮರೇಶ ಪಾಟೀಲ್‌ ಸೇರಿದಂತೆ ಇತರರು, ಫಲಾನುಭವಿಗಳಿಗೆ ಕನ್ನಡಕಗಳನ್ನು ವಿತರಿಸಿದರು.

ಮಾಹಿತಿಗಾಗಿ
ಡಾ|| ಶಿವಕುಮಾರ ಮಾಲಿಪಾಟೀಲ್
ಅಧ್ಯಕ್ಷರು, ಲಯನ್ಸ್ ಕ್ಲಬ್, ಗಂಗಾವತಿ
ಮೋ:ನಂ: ೯೪೪೮೩೦೨೭೭೫