ಪತ್ರಿಕಾ ದಿನಾಚರಣೆ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜರುಗಿತು.

ಪತ್ರಿಕಾ ದಿನಾಚರಣೆ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜರುಗಿತು.

ಗಂಗಾವತಿ: ಜುಲೈ 31 ರಂದು ಬೆಂಗಳೂರಿನ ಕೊಂಡಜ್ಜ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕದ ಮಾಧ್ಯಮ ಪತ್ರಕರ್ತರ (ರಿ) ಸಂಘವನ್ನು ಅಧಿಕೃತವಾಗಿ ಸ್ಥಾಪಿಸಲಾಗುವುದು.

ಈ ಸಂಘವನ್ನು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಅದೇ ವೇದಿಕೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವೂ ಜರುಗಲಿದೆ.

ಅದೇ ದಿನ ಸಂಘದ ವೆಬ್‌ಸೈಟ್ ಉದ್ಘಾಟನೆ ಮತ್ತು ಸದಸ್ಯರ ಗುರುತಿನ ಕಾರ್ಡ್ ವಿತರಣೆ ಕಾರ್ಯಕ್ರಮಗಳು ಕೂಡ ನಡೆಯಲಿವೆ.

ಈ ಕಾರ್ಯಕ್ರಮಕ್ಕೆ ಗಂಗಾವತಿಯ ಹೆಚ್ಚಿನ ಪತ್ರಕರ್ತರು ಭಾಗವಹಿಸಬೇಕೆಂಬ ಉದ್ದೇಶದಿಂದ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜುಲೈ 17ರಂದು ನಡೆಯಿತು.

ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಈ ಸಭೆ ನಡೆದಿದ್ದು, ರಾಜ್ಯ ಸಮಿತಿ ಸದಸ್ಯ ಎಚ್. ಮಲ್ಲಿಕಾರ್ಜುನ ಹೊಸಕೇರಿ ನೇತೃತ್ವ ವಹಿಸಿದ್ದರು.

ಜಿಲ್ಲಾಧ್ಯಕ್ಷ ರಮೇಶ್ ಕೋಟಿಯವರೂ ಸಭೆಯಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ, ಪತ್ರಕರ್ತರು ಸಂಘದ ಮಾನಸಮರ್ಥತೆ ಕಾಪಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಡಿ.ಎಂ. ಸುರೇಶ್, ಎಸ್. ಮಾರ್ಕಂಡೇಯ, ರಾಮಕೃಷ್ಣ ಸಿ.ಡಿ, ರಮೇಶ್ ಕಾಳಿ, ಮಲ್ಲೇಶ ನಾಯ್ಕ್ ಮತ್ತು ಹಲವರು ಭಾಗವಹಿಸಿದರು.

ಸಭೆಯಲ್ಲಿ ನಾಗರಾಜ ಕೊಟ್ನೆಕಲ್, ಸೋಮಪ್ಪ, ನಾಗರಾಜ ಅಂಗಡಿ, ಶರಣಯ್ಯ ಹೆಚ್.ಎಂ, ಡಿ.ರವಿಕುಮಾರ್, ಗಾಯಕವಾಡ, ಯಮನೂರಪ್ಪ, ಹೆಚ್.ಭೋಗೇಶ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply