ಆಷಾಢ ಮಾಸದ ಭೀಮನ ಅಮಾವಾಸ್ಯೆ: ಕಿಷ್ಕಿಂದ ಅಂಜನಾದ್ರಿಯಲ್ಲಿ ವಿಶೇಷ ಕಾರ್ಯಕ್ರಮಗಳು

ಆಷಾಢ ಮಾಸದ ಭೀಮನ ಅಮಾವಾಸ್ಯೆ: ಕಿಷ್ಕಿಂದ ಅಂಜನಾದ್ರಿಯಲ್ಲಿ ವಿಶೇಷ ಕಾರ್ಯಕ್ರಮಗಳು

ಗಂಗಾವತಿ: ಇತಿಹಾಸ ಪ್ರಸಿದ್ಧ ಹನುಮ ಹುಟ್ಟಿದ ನಾಡೆಂದು ಪ್ರಸಿದ್ಧವಾದ ವಿಜಯನಗರ ಸಾಮ್ರಾಜ್ಯದ ಆನೆಗುಂದಿ ಪ್ರದೇಶದ ಕಿಷ್ಕಿಂದ ಅಂಜನಾದ್ರಿಯಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಈ ಪೂಜಾ ಕಾರ್ಯಕ್ರಮಗಳು ಚಿಕ್ಕ ರಾಮಪುರದ ಆಂಜನೇಯ ದೇವಾಲಯದಲ್ಲಿ, ಪ್ರಧಾನ ಅರ್ಚಕ ಶ್ರೀ ವಿದ್ಯಾದಾಸ ಬಾಬಾಜಿ ಅವರ ನೇತೃತ್ವದಲ್ಲಿ ಉತ್ಸವಪೂರ್ವಕವಾಗಿ ನೆರವೇರಿಸಲ್ಪಟ್ಟವು.

ಬೆಳಿಗ್ಗೆ ಮೂಲ ಆಂಜನೇಯನಿಗೆ ಜಲಾಭಿಷೇಕ, ಪಂಚಾಮೃತಾಭಿಷೇಕ, ಅಷ್ಟೋತ್ತರ ಪಾರಾಯಣ, ವಾಯುಸ್ತುತಿ ಪಠಣ, ಹನುಮಾನ್ ಚಾಲೀಸಾ ಪಾರಾಯಣ ಹಾಗೂ ಭಜನೆಗಳನ್ನು ಮಾಡಲಾಯಿತು.

ಪೂಜೆಯ ಬಳಿಕ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಇಷ್ಟಾರ್ಥಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು.

 

ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಭಕ್ತರು ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅರ್ಚಕ ವಿದ್ಯಾದಾಸ ಬಾಬಾಜಿ ಮಾತನಾಡುತ್ತಾ, “ಆಂಜನೇಯನ ಅವತಾರವಾದ ಭೀಮಸೇನ ಧರ್ಮಮಾರ್ಗದಲ್ಲಿ ನಡೆದದ್ದು, ಕೌರವರು ಸೋಲಲು ಇದು ಕಾರಣವಾಯಿತು,” ಎಂದು ಹೇಳಿದರು.

ಪತಿಗೆ ಪಾದಪೂಜೆ ಮಾಡುವುದರ ಮೂಲಕ ಪತ್ನಿಯು ಗಂಡನ ಆಯುಷ್ಯ ವೃದ್ಧಿಗೆ ಪ್ರಾರ್ಥಿಸುವ ಪವಿತ್ರ ದಿನವಾಗಿದೆ ಎಂಬುದನ್ನೂ ಅವರು ತಿಳಿಸಿದರು.

Leave a Reply