೧೫ನೇ ವರ್ಷದ ಶ್ರೀ ದತ್ತಾತ್ರೇಯ ಜಯಂತೋತ್ಸವ ಗುರುದೋಷ ನಿವಾರಣೆಗೆ ದತ್ತ ನಾಮಸ್ಮರಣೆ ಅವಶ್ಯಕ: ಧರ್ಮದರ್ಶಿ ನಾರಾಯಣರಾವ್ ವೈದ್ಯ.
ಗಂಗಾವತಿ: ಹರ ಮುನಿದರು ಗುರು ಕಾಯುವ ಎಂಬ ಮಾತಿನಂತೆ ಪ್ರತಿಯೊಬ್ಬರ ಬದುಕಿನಲ್ಲಿ ಮುಂದೆ ಗುರಿ ಹಿಂದೆ ಗುರುವಿನ ಅನುಗ್ರಹ ಅವಶ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಗುರುದೋಷ ನಿವಾರಣೆಗೆ ತ್ರಿಮೂರ್ತಿ ಅವತಾರಿಗಳಾದ ಶ್ರೀ ದತ್ತಾತ್ರೇಯ ಗುರುಗಳ ನಾಮಸ್ಮರಣೆ ಅತ್ಯಂತ ಅವಶ್ಯಕವಾಗಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.ಅವರು ಶಂಕರ ಮಠದ ಶಾರದಾ ದೇಗುಲದಲ್ಲಿ ಶೃಂಗೇರಿ ಜಗದ್ಗುರುಗಳ ಸುವರ್ಣ ಮಹೋತ್ಸವದ ಪ್ರಯುಕ್ತ ಉಭಯ ಜಗದ್ಗುರುಗಳ ಅನುಗ್ರಹದ ಮೇರೆಗೆ ೧೫ನೇ ವರ್ಷದ ದತ್ತಾತ್ರೇಯ ಜಯಂತೋತ್ಸವ ಉಪಯುಕ್ತ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು….