ಗಂಗಾವತಿ ನಗರದಲ್ಲಿ ಸೆ.೧೦ ರಿಂದ ೨೦ ರವರೆಗೆ ಹಾನಗಲ್ ಕುಮಾರ ಶಿವಯೋಗಿಗಳ ೧೫೮ನೇ ಜಯಂತ್ಯೋತ್ಸವ ಕಾರ್ಯಕ್ರಮ ಆಯೋಜಿಸಿತು.
ಅದಕ್ಕೆ ನಗರದ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆಯ ಸಂಸ್ಥಾಪಕ ಗುರುಗಳಾದ ಶ್ರೀ ಶರಣಬಸವ ದೇವರು ಸಂತಸ ವ್ಯಕ್ತಪಡಿಸಿದರು.
ಹಾನಗಲ್ಲ ಶಿವಯೋಗಿಗಳ ಜಯಂತ್ಯೋತ್ಸವದ ಯಶಸ್ವಿಗೆ ಸರ್ವರೂ ಸನ್ನದ್ಧರಾಗಬೇಕೆಂದು ಕರೆ ನೀಡಿದ್ದಾರೆ.
ಅವರು ಜನರಲ್ಲಿ ದುಶ್ಚಟಗಳನ್ನು ದೂರಗೊಳಿಸಿ, ಅರಿವು ಮೂಡಿಸಲು ನಾಡಿನ ನೂರಾರು ಪೂಜ್ಯರು ಆಗಮಿಸುತ್ತಿರುವುದು ನಮ್ಮ ತಾಲೂಕಿಗೆ ಸಂದ ಭಾಗ್ಯವಾಗಿದೆ.
ಹೀಗಾಗಿ ಈ ಹತ್ತು ದಿನಗಳ ಕಾಲ ನಡೆಯುವ ಪಾದಯಾತ್ರೆ ಮತ್ತಿತರ ಕಾರ್ಯಕ್ರಮಗಳಲ್ಲಿ ಎಲ್ಲರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಶಿವಯೋಗಿ ಮಂದಿರವನ್ನು ಸ್ಥಾಪಿಸಿ ವಿಭೂತಿ ತಯಾರಿಸುವ ಸಂಸ್ಥೆ ಕಟ್ಟಿ ಗೋವುಗಳ ರಕ್ಷಣೆ ಮಾಡುವುದರ ಜೊತೆಗೆ ನಾಡಿನ ಸಮಸ್ತ ಜನರಲ್ಲಿ ಸಂಸ್ಕಾರ, ಆಧ್ಯಾತ್ಮ, ಸಂಗೀತ, ಸಂಸ್ಕೃತ ಪಾಂಡಿತ್ಯವನ್ನು ನೀಡುವ ದೊಡ್ಡ ಸಂಸ್ಥೆಯನ್ನು ಕಟ್ಟಿ ಸಮಾಜ ಪರಿವರ್ತನೆ ರೂವಾರಿಗಳಾಗಿರುವ ಪೂಜ್ಯ ಕುಮಾರ ಮಹಾಶಿವಯೋಗಿಗಳ ಜಯಂತಿ ಕಾರ್ಯಕ್ರಮವನ್ನು ಗಂಗಾವತಿಯಲ್ಲಿ ನಡೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ.
ಈ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಪೂಜ್ಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶರಣಬಸವ ದೇವರು ತಿಳಿಸಿದರು.