‘ತುಂಗಭದ್ರಾ ಅಭಿಯಾನ’ಕ್ಕೆ ೧೦೭ನೇ ಕವಿಗೋಷ್ಠಿ ಬೆಂಬಲ
ಗಂಗಾವತಿ: ನಗರದ ಹೊಸಳ್ಳಿ ರಸ್ತೆ ಮರ‍್ಗದ ಲಿಟಲ್ ಹಾರ್ಟ್ಸ್ ಸ್ಕೂಲ್ ಮುಂದಿರುವ ಕನ್ನಡ ಜಾಗೃತಿ ಸಮಿತಿಯ ಶ್ರೀ ಭುವನೇಶ್ವರಿ ಭವನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ನಿರ್ಮಲ ತುಂಗಭದ್ರಾ ಕುರಿತು ಕವನ ವಾಚಿಸುವ ಮೂಲಕ ಕವಿ ಕವಯತ್ರಿಯರು ನಿರ್ಮಲ ತುಂಗಭದ್ರಾ ಅಭಿಯಾನ’ಕ್ಕೆ ಬೆಂಬಲ ವ್ಯಕ್ತಪಡಿಸಿದರು.ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ, ಗಂಗಾವತಿಯ ಕನ್ನಡ ಜಾಗೃತಿ ಸಮಿತಿ ಮತ್ತು ತುಂಗಭದ್ರಾ ಅಭಿಯಾನ ಸಹಯೋಗದಲ್ಲಿ ಕಾವ್ಯಲೋಕ ಸಂಘಟನೆ ‘ನಿರ್ಮಲ ತುಂಗಭದ್ರಾ’ ಶೀರ್ಷಿಕೆಯಡಿ ಆಯೋಜಿಸಿದ್ದ ೧೦೭ನೇ ಕವಿಗೋಷ್ಠಿಯಲ್ಲಿ ಹಿರಿಯ ಕವಿ ಶರಣಪ್ಪ…