
ಪುಷ್ಪಗಿರಿ ಬೆಟ್ಟಕ್ಕೆ ಚಾರಣದ ಸಾಹಸ ಕಥನ ಗೊರೂರು ಅನಂತರಾಜು, ಹಾಸನ.
ಹಾಸನ ತಾಲ್ಲೂಕು ಮುಟ್ಟನಹಳ್ಳಿಯ ಲೇಖಕರಾದ ತ್ಯಾಗರಾಜ್ ಮತ್ತು ತಂಡ ಪ್ರಸಿದ್ಧ ಚಾರಣಕ್ಕೆ ಹೆಸರು ವಾಸಿಯಾದ ಪುಷ್ಪಗಿರಿ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ಬಂದ ಸಾಹಸ ಕಥನವನ್ನು ಸ್ವಾರಸ್ಯಕರವಾಗಿ ಮಿನಿ ಕಾದಂಬರಿ ಸ್ವರೂಪದಲ್ಲಿ ಓದಿಸಿಕೊಂಡು ಹೋಗುವಂತೆ ಬಣ್ಣಿಸಿದ್ದಾರೆ. ಕುಮಾರ ಪರ್ವತ ಚಾರಣ ಮಾಮೂಲಿ ವ್ಯಕ್ತಿಗಳಿಗೆ ಅದೊಂದು ದಿಗಿಲು. ಹವ್ಯಾಸಿ ಚಾರಣಿಗರಿಗೆ ಅದೊಂದು ವಿಶಿಷ್ಟ ಅನುಭವ. ಇಂತಹ ಚಾರಣದ ಅನುಭವವನ್ನು ಬರಹಕ್ಕಿಳಿಸುವುದು ಒಂದು ಕೌಶಲ್ಯವೆ ಸರಿ. ಆಧುನಿಕತೆ, ಲೋಕಜ್ಞಾನ ಬೆಳೆದಂತೆ ಬರಹವೂ ಕೂಡ ಹೊಸತು ಕಂಡುಕೊಳ್ಳುತ್ತಿದೆ. ನಾವು ಕುವೆಂಪುರವರ ಮಲೆಗಳಲ್ಲಿ ಮದುಮಗಳು,…