ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮ

ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ, ಈ ಸಂಘವು ರಾಜ್ಯದ ೩೦ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಸ್ಥಾಪನೆ ಮಾಡಿದ್ದು ಜಿಲ್ಲಾ ಅಧ್ಯಕ್ಷರ ನೇಮಕ ಮಾಡಲಾಗಿದೆ. ಪ್ರತಿ ವರ್ಷ ಕನ್ನಡ ನುಡಿ ವೈಭವ ಕಾರ್ಯಕ್ರಮ ಜೊತೆಗೆ ಹಲವಾರು ವಿಶೇಷ ವಿನೂತನ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಕನ್ನಡ ನಾಡು ನುಡಿ ಸೇವೆ ಮಾಡುತ್ತಾ ಬಂದಿದೆ. ಅಂತೆಯೇ ಮಾರ್ಚ್ ೧೬ ರಂದು ಭಾನುವಾರ ಮುಂಜಾನೆ ೧೦.೦೦‌ ಗಂಟೆಗೆ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮವನ್ನು…

Read More
ಆಷಾಢ ಏಕಾದಶಿ ಪ್ರಯುಕ್ತ ಶ್ರೀ ಪಾಂಡುರಂಗ ದೇವಸ್ಥಾನಕ್ಕೆ ಭಕ್ತರ ದರ್ಶನ

ಆಷಾಢ ಏಕಾದಶಿ ಪ್ರಯುಕ್ತ ಶ್ರೀ ಪಾಂಡುರಂಗ ದೇವಸ್ಥಾನಕ್ಕೆ ಭಕ್ತರ ದರ್ಶನ

ಗಂಗಾವತಿ ನಗರಸಭೆ ವ್ಯಾಪ್ತಿಯ ಪಂಪಾ ನಗರದ ಗೋಂದೊಳಿ ಸಮಾಜದ ಶ್ರೀ ಪಾಂಡುರಂಗ ಮಾಹಿತಿ ದೇವಸ್ಥಾನಕ್ಕೆ ರವಿವಾರದಂದು ಆಷಾಢ ಮಾಸದ ಪ್ರಥಮ ಏಕಾದಶಿಯ ಪ್ರಯುಕ್ತ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಪ್ರಕಾಶ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಸಹ ಪಾಂಡುರಂಗ ದೇವಸ್ಥಾನದಲ್ಲಿ ಬೆಳಿಗ್ಗೆ ಕಾಕಡ ಆರತಿ ಪಂಚಾಮೃತ ಅಭಿಷೇಕ ಅಷ್ಟೋತ್ತರ ಶತನಾಮಾವಳಿ ಸೇರಿದಂತೆ ವಿವಿಧ ಹೂಗಳಿಂದ ಅಲಂಕಾರಿಸಲಾಗಿತ್ತು ಎಂದು ತಿಳಿಸಿದರು. ವಿವಿಧ ಸಮಾಜದ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Read More
ಸುಂದರ ನವಿಲಿಗೆ ಚಂದದ ಗರಿ ಪುಸ್ತಕ ಲೋಕಾರ್ಪಣೆ

ಸುಂದರ ನವಿಲಿಗೆ ಚಂದದ ಗರಿ ಪುಸ್ತಕ ಲೋಕಾರ್ಪಣೆ

ಅರಸೀಕೆರೆ: ರೋಟರಿ ಭವನದಲ್ಲಿ ಅಕ್ಟೋಬರ್‌-11 ಶನಿವಾರ ಸುಂದರ ನವಿಲಿಗೆ ಚಂದದ ಗರಿ ಪುಸ್ತಕ ಲೋಕಾರ್ಪಣಿ ಸಮಾರಂಭವು ನೆರವೇರಿತು. ಕಾತ್ಯಾಯಿನಿ ತೇವರಿಮಠ ನಿರೂಪಣೆ, ಶಫೀತಾಬೇಗಂರಿಂದ ಪ್ರಾರ್ಥನೆ , ಬೇಲೂರು ಮಧುಮಾಲತಿ ರುದ್ರೇಶ್ ರಿಂದ ಸ್ವಾಗತ ನಂತರ ಪರಮೇಶ್ ಕಸಾಪ ಅರಸೀಕೆರೆ ಇವರು ಉದ್ಘಾಟನಾ ನುಡಿಯಲ್ಲಿ ಸಾಹಿತ್ಯವು ವಿಶಾಲವಾದ ‌ ಪ್ರಕ್ರಿಯವಾಗಿದೆ. ಇರುವ ಸ್ಥಿತಿಯನ್ನ ವೈಭವೀಕರಿಸಿ ಕಥೆ, ಕವನ , ನಾಟಕ ಹೀಗೆ ವಿವಿಧ‌ ಪ್ರಕಾರವು ರಚಿಸುವುದಾಗಿದೆ ಎಂದು‌ ತಾವು ನಾಟಕದಲ್ಲಿ ನಟಿಸುವಾಗ ಆದ ಕೆಲವು ಅನುಭವಗಳನ್ನು ಹಂಚಿಕೊಂಡರು. ಪ್ರಾಸ್ತಾವಿಕ…

Read More
ಮೈಸೂರು ದಸರಾ ಕ್ರೀಡಾಕೂಟ-೨೦೨೫ ರಲ್ಲಿ ಗಂಗಾವತಿಯ ವಿದ್ಯಾರ್ಥಿಗಳ ಸಾಧನೆ.

ಮೈಸೂರು ದಸರಾ ಕ್ರೀಡಾಕೂಟ-೨೦೨೫ ರಲ್ಲಿ ಗಂಗಾವತಿಯ ವಿದ್ಯಾರ್ಥಿಗಳ ಸಾಧನೆ.

ಗಂಗಾವತಿ: ಮೈಸೂರು ದಸರಾ ಕ್ರೀಡಾಕೂಟ ೨೦೨೫ ರಾಜ್ಯಮಟ್ಟದ ಟೇಕ್ವಂಡೋ ಸ್ಪರ್ಧೆಯಲ್ಲಿ ಗಂಗಾವತಿಯ ಬ್ಲ್ಯೂ ಡ್ರ‍್ಯಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ಹಾಗೂ ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿಯ ೩ ವಿದ್ಯಾರ್ಥಿಗಳು ವಿವಿಧ ಫೈಟ್ ವಿಭಾಗದಲ್ಲಿ ೩ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯು ಸೆಪ್ಟೆಂಬರ್-೨೨ ರಿಂದ ೨೪ರ ವರೆಗೆ ಮೈಸೂರಿನ ಯುವರಾಜ ಒಳ ಕ್ರೀಡಾಂಗಣದಲ್ಲಿ ನಡೆದಿರುತ್ತದೆ. ಈ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಟೇಕ್ವಂಡೋ ಸ್ಪರ್ಧೆಯಲ್ಲಿ ನಂದಿತಾ ಮಂಜುನಾಥ್-೫೫ ಕೆ.ಜಿ. ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ, ಮಹಾಲಕ್ಷ್ಮಿ ಬಸವರಾಜ್-೭೦ ಕೆ.ಜಿ ಮೇಲ್ಭಾಗದ…

Read More
ಮಹಿಳೆಗೆ ಅನುಕಂಪ ಬೇಡ, ಅವಕಾಶ ನೀಡಿ: ಡಾ.ಶೋಭಾ.ಕೆ.ಎಸ್.

ಮಹಿಳೆಗೆ ಅನುಕಂಪ ಬೇಡ, ಅವಕಾಶ ನೀಡಿ: ಡಾ.ಶೋಭಾ.ಕೆ.ಎಸ್.

ಇಂದು ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾರಂಭವನ್ನು ಜ್ಯೋತಿ ಬೆಳಗಿ ವಿನೂತನ ವಿಶೇಷ ರೀತಿಯಲ್ಲಿ ತೊಟ್ಟಿಲು ತೂಗುವ ಮೂಲಕ ಉದ್ಘಾಟಿಸಿದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಶೋಭಾ.ಕೆ.ಎಸ್.ರವರು ಇತ್ತೀಚಿನ ಶತಮಾನಗಳಲ್ಲಿ ಮಹಿಳೆ ಆಧುನಿಕ ಯುಗದಲ್ಲಿ ತೀವ್ರವಾಗಿ ಸದೃಢವಾಗುತ್ತಿರುವುದರಿಂದ ಮಹಿಳೆಗೆ ಅನುಕಂಪ ಬೇಡ ಅವಕಾಶ ನೀಡಿ ಎಂದು ಕರೆಕೊಟ್ಟರು. ಕಾರ್ಯಕ್ರಮದ ಘನ ಉಪಸ್ಥಿತರಿದ್ದ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಕರಿಗೂಳಿ…

Read More
ಜ್ಞಾನವಂತರಾಗಿ ಕೌಶಲ್ಯವಾಗಿರಿ: ಕವಿತಾ ಮಿಶ್ರ

ಜ್ಞಾನವಂತರಾಗಿ ಕೌಶಲ್ಯವಾಗಿರಿ: ಕವಿತಾ ಮಿಶ್ರ

ಗಂಗಾವತಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಯಶಸ್ವಿಯಾಗಿ ಜೀವನ ನಡೆಸಬೇಕಾದರೆ ಕಾಲೇಜು ಹಂತದಲ್ಲಿ ಜ್ಞಾನವನ್ನು ಕೌಶಲ್ಯಗಳನ್ನು ಸಂಪಾದಿಸಬೇಕಾದ ಅವಶ್ಯಕತೆ ಇದೆ ಎಂದು ಕವಿತಾಳದ ಪ್ರಗತಿಪರ ಕೃಷಿ ಸಾಧಕಿಯಾದ ಕವಿತಾ ಮಿಶ್ರ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು. ಅವರು ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ೧೨ನೇ ವಾರ್ಷಿಕೋತ್ಸವ ಮತ್ತು ರ‍್ಯಾಂಕ್ ಪಡೆದ ಸಾಧಕಿಯರನ್ನ ಸನ್ಮಾನಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಐಟಿ-ಬಿಟಿ ಉದ್ಯೋಗಗಳಿಗಿಂತ ಕೃಷಿ ವೃತ್ತಿಯು ಅತ್ಯಂತ ಮಹತ್ವವಾದದ್ದು ಮತ್ತು ಬೆಲೆಯುತವಾದದ್ದು, ಏಕೆಂದರೆ ಮುಂದಿನ ದಿನಮಾನಗಳಲ್ಲಿ…

Read More
ತ್ರಿ ಭಾಷಾ ಕವಿ ಪುಟ್ಟರಾಜ ಕವಿ ಗವಾಯಿಗಳವರ 111ನೇಯ ಜಯಂತೋತ್ಸವ.

ತ್ರಿ ಭಾಷಾ ಕವಿ ಪುಟ್ಟರಾಜ ಕವಿ ಗವಾಯಿಗಳವರ 111ನೇಯ ಜಯಂತೋತ್ಸವ.

ಬೆಂಗಳೂರು: ಇಲ್ಲಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಸ್ವರಲೋಕ ಸಂಗೀತ ಮತ್ತು ಸಾಂಸ್ಕೃತಿಕ ಮಹಾ ವಿದ್ಯಾಲಯದಲ್ಲಿ ಮಾರ್ಚ್-4‌ ಮಂಗಳವಾರದಂದು ತ್ರಿಬಾಷಾ ಕವಿ ಅಂಧರ ಬಾಳಿನ ಆಶಾಕಿರಣ ಗದಗ ವೀರೇಶ್ವರ ಪುಣ್ಯಶ್ರಮದ ದಿವ್ಯಜ್ಯೋತಿ ಲಿಂಗೈಕ್ಯ ಡಾ. ಪುಟ್ಟರಾಜ ಕವಿ ಗವಾಯಿಗಳವರ 111ನೇಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಸುನಿತಾ ಗಂಗಾವತಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಭವ್ಯ ಚಲ್ಲಯ್ಯ ಸೇರಿದಂತೆ ವಿದ್ಯಾಲಯದ ವಿದ್ಯಾರ್ಥಿಗಳು ಸ್ವರ ಸಂಗೀತದ ಮೂಲಕ ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮತ್ತು ಪ್ರಮೋದ್…

Read More

ಡಿಸೆಂಬರ್-೧೯ ಗುರುವಾರ ಮುಸ್ಟೂರು ಗ್ರಾಮದಲ್ಲಿ ಉಚಿತ ಆರೋಗ್ಯ, ನೇತ್ರ ತಪಾಸಣೆ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ

ಗಂಗಾವತಿ: ಲಯನ್ ಕ್ಲಬ್ ಗಂಗಾವತಿ, ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ) ಗಂಗಾವತಿ, ವೈದೇಹಿ ಆಸ್ಪತ್ರೆ ಬೆಂಗಳೂರು, ಕೆ.ಎಸ್. ಆಸ್ಪತ್ರೆ, ಕೊಪ್ಪಳ, ಲಯನ್ ಕಣ್ಣಿನ ಆಸ್ಪತ್ರೆ, ಕೊಪ್ಪಳ, ಐದೃಷ್ಟಿ ಕಣ್ಣಿನ ಆಸ್ಪತ್ರೆ, ಹೊಸಪೇಟೆ, ಶುಭಶ್ರೀ ಪಾರ್ಮಾಸ್ಯೂಟಿಕಲ್ಸ್, ಕನಕಗಿರಿ, ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘ (ರಿ) ಶ್ರೀರಾಮನಗರ, ಜಿಲ್ಲಾ ಅಂಧತ್ವ ನಿವಾರಣಾ ಸಂಘ ಕೊಪ್ಪಳ, ಪ್ರಾಥಮಿಕ ಆರೋಗ್ಯ ಕೇಂದ್ರ ಮುಸ್ಟೂರು ಹಾಗೂ ಮುಸ್ಟೂರು ಗ್ರಾಮದ ಸಮಸ್ತ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ…

Read More
ಪತ್ರಕರ್ತ ನಾಗರಾಜ್ ವೈ ಗೆ ಕೇರಳದ ಕಾಸರಗೋಡಿನಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ  ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸನ್ಮಾನಿಸಿ ಗೌರವ.

ಪತ್ರಕರ್ತ ನಾಗರಾಜ್ ವೈ ಗೆ ಕೇರಳದ ಕಾಸರಗೋಡಿನಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸನ್ಮಾನಿಸಿ ಗೌರವ.

ಗಂಗಾವತಿ: ಟಿವಿ-೫ ಮಾಧ್ಯಮದ ಜಿಲ್ಲಾ ವರದಿಗಾರರಾದ ನಾಗರಾಜ್ ವೈ ಇವರು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕೊಡಮಾಡುವ ಶ್ರೀ ಜೋಸೆಫ್ ಮಥಾಯಿಸ್ ದುಬೈ ನೀಡುವ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಹಿನ್ನೆಲೆ ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯಾದ ಬಸವರಾಜ್ ಮ್ಯಾಗಳಮನಿ ಅವರ ನೇತೃತ್ವದಲ್ಲಿ ನಾಗರಾಜ್.ವೈ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿಸಿ ಮಾತನಾಡಿದ ಬಸವರಾಜ್ ಮ್ಯಾಗಳಮನಿಯವರು, ನಾಗರಾಜ್ ಅವರು ಬಹಳ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ…

Read More

VISHWAROOPA NEWS BLOG

Infinite

Skip to content ↓