ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ಬಿ.ಎಲ್.ಬುಲ್ಸ್ ಕರಾಟೆ ಸಂಸ್ಥೆಯ ಕ್ರೀಡಾಪಟುಗಳ ಸಾಧನೆ

ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ಬಿ.ಎಲ್.ಬುಲ್ಸ್ ಕರಾಟೆ ಸಂಸ್ಥೆಯ ಕ್ರೀಡಾಪಟುಗಳ ಸಾಧನೆ
ಗಂಗಾವತಿ: ಜುಲೈ 13ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದ 9ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಬಿ.ಎಲ್.ಬುಲ್ಸ್ ಕರಾಟೆ ಸಂಸ್ಥೆಯ 26 ಕ್ರೀಡಾಪಟುಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಚಂದ್ರೇಗೌಡ ಪೊಲೀಸ್ ಪಾಟೀಲ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿದ ಅವರು, ನಮ್ಮ ಸಂಸ್ಥೆಯ 26 ಕರಾಟೆ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದಿದ್ದಾರೆ.
ಅಹಾನ್, ಸಾತ್ವಿಕ್, ಕೃಷ್ಣ, ರಿಷಿಕ್, ಚಿನ್ನಪ್ಪ, ಅವೇಜ್, ಆಲಿಯಾ, ಶರತ್ ಮತ್ತು ಅಬುಬಕರ್ ಕಟಾ ಹಾಗೂ ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಶಿವರಾಜ್, ಗಾನವಿ, ಅನ್ವಿತಾ ದೇವಿಕೇರಿ ಮತ್ತು ವಾಣಿ ಕುಮಾರ್ ಕಟಾ ಹಾಗೂ ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸಮರ್ಥ್, ಅಭಿರಾಮ್, ಲೋಚನ್, ಅಖಿಲೇಶ್, ಕುಶಾಲ್, ದಿಲೀಪ್ ಕಟಾದಲ್ಲಿ ಪ್ರಥಮ ಹಾಗೂ ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪ್ರಣವಿ, ಶರತ್ ಪಂಡಿತ್ ಮತ್ತು ಅಬ್ರಾರ್ ಕಟಾದಲ್ಲಿ ಪ್ರಥಮ ಹಾಗೂ ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹರಣಿ ಕಟಾದಲ್ಲಿ ತೃತೀಯ ಹಾಗೂ ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡಿದ್ದಾಳೆ.
ಹರ್ಷ ಕಟಾದಲ್ಲಿ ತೃತೀಯ ಹಾಗೂ ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾನೆ.
ಸಚಿನ್ ಕಟಾ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಗೌರವ ತಂದಿದ್ದಾನೆ.
ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸಾಧನೆಮಾಡಿ ಬಹುಮಾನಗಳನ್ನು ಪಡೆದು ಸಂಸ್ಥೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಈ ಸಾಧನೆಗೆ ವಿದ್ಯಾರ್ಥಿಗಳಿಗೆ ಶಿಲ್ಪಾ, ಮೀನಾಕ್ಷಿ, ಫಯಾಜ್, ಪ್ರಜ್ವಲ್ ಹಾಗೂ ಕರಾಟೆ ಮುಖ್ಯ ತರಬೇತಿದಾರ ಮಂಜುನಾಥ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಮಾಹಿತಿಗಾಗಿ
ಮಂಜುನಾಥ ರಾಠೋಡ್
ಕರಾಟೆ ತರಬೇತುದಾರರು,
ಮೊ.ನಂ: ೭೨೫೯೬೧೮೬೩೭

Leave a Reply