ಗಂಗಾವತಿ: ಸಮಾಜಗಳ ಅಭಿವೃದ್ಧಿಗೆ ಒಗ್ಗಟ್ಟು ಅವಶ್ಯವಾಗಿದೆ. ಒಗ್ಗಟ್ಟಿನಿಂದ ಸಮಾಜವು ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ರವಿವಾರ ನಗರದ ಮಾರುತೇಶ್ವರನಗರ ಉಪ್ಪಿನಮಾಳಿ ಕ್ಯಾಂಪಿನಲ್ಲಿರುವ ಶ್ರೀರೇಣುಕಾ ಹುಲಿಗೆಂಬಾ ದೇವಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಶಾಸಕರಾಗಿದ್ದ ಸಮಯದಲ್ಲಿ ಸರ್ವ ವರ್ಗಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು, ಸದರಿ ಸಮುದಾಯ ಭವನಕ್ಕೆ ಮೂರು ಲಕ್ಷ ಅನುದಾನವನ್ನು ನೀಡಲಾಗಿದೆ ಎಂದು ಸ್ಮರಿಸಿದರು.
ಅಲ್ಲದೆ ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಿ, ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಸಮುದಾಯಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಮೋಚಿಗಾರ ಸಮಾಜದ ಅಧ್ಯಕ್ಷರಾದ ಮಂಜುನಾಥ ಹಂಚಾಳಪ್ಪ ಕಳ್ಳಿಮನಿ ವಹಿಸಿದ್ದರು.
ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್. ಶ್ರೀನಾಥ್, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ವಕೀಲರು, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೇರಿದ್ದರು.
ಮುಖಂಡರಾದ ಸಿಂಗನಾಳ ವಿರೂಪಾಕ್ಷಪ್ಪ, ಮೋಚಿಗಾರ ಸಮಾಜದ ರಾಜ್ಯಾಧ್ಯಕ್ಷರಾದ ಶಿವಣ್ಣ ಮುಳುಗುಂದ, ಹನುಮಂತಪ್ಪ ಹುನುಗುಂದ, ಮಲ್ಲಿಕಾರ್ಜುನ ಹುಲ್ಲೂರು, ವಿರೇಶ ತಾವರಗೇರಾ, ಯಮನೂರಪ್ಪ ಕೊಟಿ, ಕಾಶೀಮಪ್ಪ ಹಾದಿಮನಿ ಸೇರಿದ್ದರು.
ಮನೋಹರಗೌಡ ಹೇರೂರು, ಪರಶುರಾಮ ಮಡ್ಡೇರ್, ಜೋಗದ ನಾರಾಯಣಪ್ಪ ನಾಯಕ, ರಮೇಶ ಕೋಟಿ, ಸೋಮಣ್ಣ ಕಿನ್ನಾಳ, ಪಟ್ಟೆಪ್ಪ ಕವಲೂರು, ಚನ್ನಬಸವ ಸೂಡಿ, ಮಲ್ಲಿಕಾರ್ಜುನ ಮಂಗಳೂರು, ಮಂಜುನಾಥ ಬಂಡಿ, ಶರಣಪ್ಪ ಬಂಡಿ, ವನಗುಂದಿ ಕೃಷ್ಣ, ಮಂಜುನಾಥ ಕೋಳೂರು, ಶಿವಕುಮಾರ ಗೌಡ, ಕನಕಪ್ಪ ಹೊಸಪೇಟೆ, ಶಂಕ್ರಪ್ಪ ಪೂಜಾರಿ ಸೇರಿದಂತೆ ಇನ್ನಿತರರಿದ್ದರು.