ಕುಷ್ಟಗಿ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಡದೂರು ಸೀಮಾ ವ್ಯಾಪ್ತಿಯ ಶ್ರೀ ಕ್ಷೇತ್ರ ಅಮ್ಮನಕಟ್ಟಿಯ ಶ್ರೀ ಸಾಧ್ವಿ ಶಿರೋಮಣಿ ತಿಮ್ಮಮ್ಮನವರ 212ನೇ ಆರಾಧನಾ ಮಹೋತ್ಸವ ಅಪಾರ ಭಕ್ತಾದಿಗಳ ಮಧ್ಯೆ ಭಕ್ತಿಯಿಂದ ಜರುಗಿತು.
ಗುರುವಾರದಂದು ಅಮ್ಮನವರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ.ಸಾಮೂಹಿಕ ಜವಳ, ಹರಿನಾಮ ಕೀರ್ತನೆ.ಸೇರಿದಂತೆ ಸಕಲ ವಾದ್ಯ ವೈಭವದೊಂದಿಗೆ ಹೂನೂರು ಗ್ರಾಮದ ಮೂಲಕ. ಶ್ರೀ ಕ್ಷೇತ್ರ ಅಮ್ಮನ ಕಟ್ಟೆಗೆ ಅಮ್ಮನವರ ಪಲ್ಲಕ್ಕಿ ಮಹೋತ್ಸವ ಆಗಮಿಸಿತು.
ಈ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ. ದೀಡು ನಮಸ್ಕಾರ ಹಾಕುವುದರ ಮೂಲಕ ಹರಕೆ ಸಲ್ಲಿಸಿದರು.
ಲೋಕಕಲ್ಯಾಣಾರ್ಥಕವಾಗಿ ಲಕ್ಷ್ಮೀನಾರಾಯಣ ಹೃದಯ ಮಂತ್ರ, ಹೋಮ. ರಾಘವೇಂದ್ರ ಆಚಾರ್ ಜೋಶಿ ತಂಡದವರು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಹುಣಸಿಹೊಳೆ ಅನ್ನುವ ಮಠದ ಪೀಠಾಧಿಕಾರಿಗಳಾದ ವಿದ್ಯಾ ಕಣ್ವವಿರಾಜತೀರ್ಥ ಶ್ರೀಪಾದಂಗಳವ ದಿವ್ಯಸಾನಿಧ್ಯದಲ್ಲಿ ತಪ್ತ ಮುದ್ರಾಧಾರಣೆ ವೇದಿಕೆ ಕಾರ್ಯಕ್ರಮ ಜರಗಿತು.
ರಾಜ್ಯದ ನಾನಾ ಭಾಗಗಳಿಂದ ಭಕ್ತರು ಪಾಲ್ಗೊಂಡಿದ್ದರು.