ಶ್ರೀ ಕನ್ನಿಕಾ ಪರಮೇಶ್ವರಿ ಆತ್ಮಾರ್ಪಣೆ ದಿನದಂದು ದೇವಸ್ಥಾನ ನಿರ್ಮಾಣದ ಸಂಕಲ್ಪ: ರೂಪ ರಾಣಿ ಲಕ್ಷ್ಮಣ್

ಗಂಗಾವತಿ:ನಗರದ ಆರ್ಯವೈಶ್ಯ ಸಮಾಜದ ನೇತೃತ್ವದಲ್ಲಿ ಶುಕ್ರವಾರದಂದು ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಸಂಜೆ ಆಯೋಜಿಸಿದ ಶ್ರೀ ಕನ್ನಿಕಾ ಪರಮೇಶ್ವರಿ ಆತ್ಮಾರ್ಪಣೆ ದಿನ ಹಾಗೂ ವಿಶ್ವರೂಪ ದರ್ಶನ ಪ್ರಯುಕ್ತ ಆಯೋಜಿಸಿದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ರೂಪ ರಾಣಿ ಲಕ್ಷ್ಮಣ್ ರಾಯಚೂರು ಮಾತನಾಡಿ ನಗರದಲ್ಲಿ ಹಲವು ವರ್ಷಗಳಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ನಿರ್ಮಾಣಕ್ಕೆ ಹಲವಾರು ಅಡೆತಡೆಗಳು ಉಂಟಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರ ಸಮ್ಮುಖದಲ್ಲಿ ದೇವಸ್ಥಾನದ ನಿರ್ಮಾಣಕ್ಕೆ ಸಂಕಲ್ಪಿಸಿಕೊಂಡು ಪ್ರತಿಯೊಬ್ಬ ಸಮಾಜ ಬಾಂಧವರ ಕುಟುಂಬದವರಿಗೆ ಶ್ರೀಚಕ್ರ ಕಲ್ಪಿಸುವುದರ ಮೂಲಕ ಮನೆಯಲ್ಲಿ ವಿಶೇಷ ಪೂಜೆಯ ಮೂಲಕ ದೇವಸ್ಥಾನ ನಿರ್ಮಾಣಕ್ಕೆ ಪ್ರಾರ್ಥಿಸಿಕೊಳ್ಳುವಂತೆ ವಿಶ್ವರೂಪ ದರ್ಶನ ನೀಡಿದ ಶುಭದಿನದಂದು ದೇವಸ್ಥಾನದ ಪ್ರಧಾನ ಅರ್ಚಕ ದಿಗಂಬರ್ ಭಟ್ ಜೋಶಿ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷ ಭಾಗ್ಯ ಈಶ್ವರಶೆಟ್ಟಿ ಮಾತನಾಡಿ ಕುಲದೇವತೆಯಾದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಗಂಗಾವತಿ ಅಂತಹ ಮಹಾನಗರಕ್ಕೆ ಅವಶ್ಯವಾಗಿದೆ.ಸಮಾಜ ಬಾಂಧವರು.ಭೇದಭಾವ ಮರೆತು.ಒಗ್ಗಟ್ಟಿನಿಂದ ದೇವಸ್ಥಾನ ನಿರ್ಮಾಣಕ್ಕೆ ಕಂಕಣಬದ್ಧರಾಗಬೇಕಾಗಿದೆ. ಸಮಾಜದ ಸಂಘಟನೆ ಜೊತೆಗೆ ಧಾರ್ಮಿಕತೆ ಆಚರಣೆ ಮೂಲಕ ಸಂಸ್ಕಾರ ಬೆಳೆಸುವ ಕಾರ್ಯವಾಗಬೇಕೆಂದು ಹೇಳಿದರು.
ಯುವಕ ಸಂಘದ ಅಧ್ಯಕ್ಷರು.ಸಮಾಜ ಬಾಂಧವರು ಪಾಲ್ಗೊಂಡಿದ್ದರು.

Leave a Reply