ತಿಪ್ಪೇಸ್ವಾಮಿ ಹೆಚ್. ಅವರ ಸಂಶೋದನೆಗೆ ಬಳ್ಳಾರಿ ವಿ.ವಿ ಡಾಕ್ಟರೇಟ್

ಗಂಗಾವತಿ: ನಗರದ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ತಿಪ್ಪೇಸ್ವಾಮಿ ಹೆಚ್. ಅವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದಲ್ಲಿ “ಎ ಸ್ಟಡಿ ಆನ್ ಪರ್ಫಾಮೆನ್ಸ್ ಆಫ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಂಡ್ ಇಟ್ಸ್ ಅಸೊಸಿಯೇಟ್ ಬ್ಯಾಂಕ್ಸ್ ಬಿಫೋರ್ ಆಂಡ್ ಆಫ್ಟರ್ ದಿ ಮರ್ಜರ್” ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿಗೆ ಭಾಜನರಾಗಿರುತ್ತಾರೆ.
ಇವರ ಈ ಮಹಾಪ್ರಬಂಧಕ್ಕೆ ಬಳ್ಳಾರಿ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಭೀಮನಗೌಡ ರವರು ಮಾರ್ಗದರ್ಶನ ನೀಡಿದ್ದಾರೆ.
ಈ ಕುರಿತು ತಿಪ್ಪೇಸ್ವಾಮಿ ಹೆಚ್. ಮಾತನಾಡಿ ನಾನು ಮೂಲತಃ ಕಂಪ್ಲಿ ತಾಲೂಕಿನ ನಂ: ೧೫ ಗೋನಾಳ ಗ್ರಾಮದ ಗ್ರಾಮೀಣ ನಿವಾಸಿಯಾಗಿದ್ದು, ಸಹಾಯಕ ಪ್ರಾಧ್ಯಾಪಕ ವೃತ್ತಿಯೊಂದಿಗೆ ಪಿಎಚ್.ಡಿ. ಪದವಿಯನ್ನು ಪಡೆಯುವ ಹಂಬಲದೊಂದಿಗೆ ಈ ಅಧ್ಯಯನವನ್ನು ಕೈಗೊಂಡು ಮುಂದಿನ ಪೀಳಿಗೆಗೆ ಅನುಕೂಲವಾಗುವ ಉದ್ದೇಶವನ್ನಿಟ್ಟುಕೊಂಡು ಈ ಮಹಾಪ್ರಬಂಧವನ್ನು ಮಂಡಿಸಿರುತ್ತೇನೆ ಎಂದು ತಿಳಿಸಿದರು.
ಇವರಿಗೆ ಕುಟುಂಬಸ್ಥರು, ಸ್ನೇಹಿತರು, ವಿ.ಎಸ್.ಕೆ.ಯು.ಬಿ ಮತ್ತು ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳು, ಆಡಳಿತ ಮಂಡಳಿ, ಸಿಬ್ಬಂದಿವೃಂದ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

Leave a Reply