ಶಿಕ್ಷಣದಿಂದ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ: ಹುಲ್ಲೇಶ್

ಗಂಗಾವತಿ: ಸಾಮಾಜಿಕವಾಗಿ ಆರ್ಥಿಕವಾಗಿ ಧಾರ್ಮಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದ. ಭೋವಿ ಸಮಾಜ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸುವುದರ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕೆಂದು ಭೋವಿ ಸಮಾಜದ ಅಧ್ಯಕ್ಷ. ಹುಲ್ಲೇಶ್ ಹೇಳಿದರು.

ಅವರು.ಹಿರೇಜಂತಕಲ್ಲಿನ ಶ್ರೀ ಪೆದ್ದಮ್ಮ ಹಾಗೂ ತಾಯಮ್ಮ ದೇವಿಯ ಜಾತ್ರಾ ಮಹೋತ್ಸವದ ಸಮಾರೂಪ ಸಮಾರಂಭವನ್ನು ಉದ್ದೇಶಿಸಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು. ಸಮಾಜ ಬಾಂಧವರು ವೃತ್ತಿ ಧರ್ಮ ಪಾಲನೆಯ ಜೊತೆಗೆ ಗುಣಮಟ್ಟದ ಶಿಕ್ಷಣ, ಸಮಾಜದ ಸಂಘಟನೆ ಹಾಗೂ ಹೋರಾಟದ ಮೂಲಕ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜಮುಖಿಯಾಗಿ ಬಾಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ದುರ್ಗಪ್ಪ, ವೆಂಕಟೇಶ, ಹನುಮೇಶ, ಕಲ್ಲಪ್ಪ, ಪರಮೇಶ, ಭೀಮೇಶ್, ರಾಮಪ್ಪ, ಅರ್ಚಕ ದುರ್ಗೇಶ ಸೇರಿದಂತೆ ಸಮಾಜದ ಮಹಿಳೆಯರು, ಯುವಕರು, ಭಕ್ತಾದಿಗಳು ಪಾಲ್ಗೊಂಡಿದ್ದರು.

Leave a Reply