ಪರಿಮಳ ಬಸವರಾಜ ಬಡಿಗೇರ ಅವರಿಗೆ ರಾಜ್ಯಮಟ್ಟದ ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶದಲ್ಲಿ ಸನ್ಮಾನ

ಯಲಬುರ್ಗಾ: ತಾಲೂಕಿನ ಗುನ್ನಾಳ ಗ್ರಾಮದ ಆಶಾ ಕಾರ್ಯಕರ್ತೆ ಪರಿಮಳ ಬಸವರಾಜ ಬಡಿಗೇರ ಅವರಿಗೆ ಧಾರವಾಡದಲ್ಲಿ ರವಿವಾರ ನಡೆದ ರಾಜ್ಯಮಟ್ಟದ ಪ್ರಪ್ರಥಮ ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಧಾರವಾಡದ ಪಾಟೀಲ್ ಪುಟ್ಟಪ್ಪ ಸಭಾಭವನ, ವಿದ್ಯಾವರ್ಧಕ ಸಂಘ ಕಲಾ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶದಲ್ಲಿ ಪರಿಮಳ ಬಸವರಾಜ ಬಡಿಗೇರ ಅವರು ಸುಮಾರು ವರ್ಷದಿಂದಲೂ ಆಶಾ ಕಾರ್ಯಕರ್ತೆಯಾಗಿ ಉತ್ತಮ ಕರ್ತವ್ಯನಿರ್ವಹಿಸಿದ ಪ್ರಯುಕ್ತ ಸಮಾಜದ ವತಿಯಿಂದ ಅವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ವಿಶ್ವಕರ್ಮ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಭಾಸ್ಕರ ಬಡಿಗೇರ, ಎಂ.ಸೋಮಶೇಖರ, ಡಾ.ಪವಿತ್ರಾ ಪ್ರಭಾಕರ ಆಚಾರ ಸೇರಿದಂತೆ ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು, ಮುಖಂಡರು, ಸಮಾಜದ ಪ್ರಮುಖರು, ಮಹಿಳೆಯರು ಭಾಗವಹಿಸಿದ್ದರು.

Leave a Reply