ಪವಿತ್ರ ತ್ರಿವೇಣಿ ಸಂಗಮದ ಕುಂಭಮೇಳದ ಜಲ ವಿತರಣೆ: ರೂಪರಾಣಿ ರಾಯಚೂರು

ಗಂಗಾವತಿ: ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ಪ್ರಯಾಗರಾಜ್ ತ್ರಿವೇಣಿ ಸಂಗಮದ ಕುಂಭಮೇಳದ ಪವಿತ್ರ ಜಲವನ್ನು ಆರ್ಯವೈಶ್ಯ ಸಮಾಜದ ಬಾಂಧವರು ಸೇರಿದಂತೆ ಭಕ್ತಾದಿಗಳಿಗೆ ಸಮಾಜದ ಅಧ್ಯಕ್ಷೆ ರೂಪರಾಣಿ ರಾಯಚೂರುರವರು ಸೋಮವಾರದಂದು ವಿತರಿಸಿದರು.

ನಗರದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಪ್ರತಿ ಸೋಮವಾರದಂತೆ ನಡೆಸಲಾಗುತ್ತಿರುವ ಭಜನೆ, ಪಾಲಕಿ ಉತ್ಸವ, ಅಷ್ಟಾವಧಾನ ಸೇವೆ, ಧಾರ್ಮಿ ಕಾರ್ಯಕ್ರಮಗಳನ್ನು ಹಾಗೂ ಸೇವಾ ಕರ್ತನ ಸನ್ಮಾನವನ್ನು ದೇವಸ್ಥಾನದ ಅರ್ಚಕ ದಿಗಂಬರ್ ಭಟ್ ನೆರವೇರಿಸಿದರು. ಬಳಿಕ ಜಲ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷೆ ರೂಪರಾಣಿಯವರು, ತಾವು ತಮ್ಮ ಕುಟುಂಬದ ಸದಸ್ಯರೊಂದಿಗೆ ಕುಂಭಮೇಳಕ್ಕೆ ಹೋಗಿದ್ದು, ಅಲ್ಲಿ ದಿನಂಪ್ರತಿ ಕಂಡುಬರುವ ಕೋಟ್ಯಾಂತರ ಜನ ಭಕ್ತರ ಪವಿತ್ರ ಸ್ನಾನ, ಸಾಧು ಸಂತರು, ನಾಗ ಸಾಧುಗಳಿಂದ ಹರ ಹರ ಮಹಾದೇವ ಎಂಬ ಘೋಷಣೆ ಬಾನೆತ್ತರಕ್ಕೆ ತಲುಪುವಂತಿತ್ತು ಎಂದು ತಿಳಿಸಿದ ಅವರು ಸಮಾಜ ಬಾಂಧವರ ಒಳಿತಿಗಾಗಿ ಹಾಗೂ ಭಕ್ತರಿಗಾಗಿ ಮಹಾಶಿವರಾತ್ರಿಯ ಪ್ರಯುಕ್ತ ತ್ರಿವೇಣಿ ಸಂಗಮದ ಪವಿತ್ರ ಜಲವನ್ನು ವಿತರಿಸಲಾಗಿದೆ ಎಂದು ಹೇಳಿದರು.

ಸಮಾಜದ ಕಾರ್ಯದರ್ಶಿ ಈಶ್ವರ ಶೆಟ್ಟಿ ಮಾತನಾಡಿ ಭಾರತದ ಸನಾತನ ಧರ್ಮದ ಸಂಸ್ಕೃತಿ ಕುಂಭಮೇಳದಲ್ಲಿ ರಾರಾಜಿಸಿದ್ದು ಕಂಡುಬಂದಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ನೇತೃತ್ವದ ಸರಕಾರ ಭಕ್ತಾದಿಗಳಿಗೆ ಸಕಲ ಸೌಲಭ್ಯವನ್ನು ಕಲ್ಪಿಸಿದ್ದರು. ಒಟ್ಟಾರೆ ದೇವಲೋಕ ಧರೆಗಿಳಿದು ಬದಂತೆ ಬಾಸವಾಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುರೇಶ ಶೆಟ್ಟಿ, ಖಜಾಂಚಿ ಮಾರುತಿ ಪ್ರಸಾದ್, ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಭಾಗ್ಯ ಈಶ್ವರಶೆಟ್ಟಿ, ಸೇವಾ ಕರ್ತರಾದ ಶೋಭಾರಾಣಿ ದಂಪತಿಗಳು, ಯೋಜನೆ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply