ಗಂಗಾವತಿ: ವಿಶ್ವವಿಖ್ಯಾತ ಹಂಪಿಯಲ್ಲಿ ಫೆ. ೨೮ ಶುಕ್ರವಾರ ಆರಂಭಗೊಳ್ಳುವ ಹಂಪಿ ಉತ್ಸವದ ‘ವಿಜಯನಗರ ವೈಭವ’ ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕೆ ನಗರದ ಕಲಾವಿದ ಜೂನಿಯರ್ ರಾಜಕುಮಾರ ಎನ್.ಆರ್. ರಾಯಬಾಗಿ ಆಯ್ಕೆಯಾಗಿದ್ದಾರೆ.
ಕೇಂದ್ರ ರ‍್ಕಾರದ ಮಾಹಿತಿ, ಪ್ರಸಾರ ಹಾಗೂ ಸಂಪರ್ಕ ಕೇಂದ್ರ (ಗಾಯನ ಮತ್ತು ನಾಟಕ ವಿಭಾಗ), ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲಾಡಳಿತ ನೇತೃತ್ವದಲ್ಲಿ ಧ್ವನಿ ಮತ್ತು ಬೆಳಕು ಪ್ರರ‍್ಶನ ಫೆ.೨೮ ರಿಂದ ಆರಂಭಗೊಂಡು ಮಾ.೭ ರವರಗೆ ನಡೆಯಲಿದೆ. ಕಲಾವಿದ ನಾರಾಯಣ ರಾಯಬಾಗಿಯು ಸತತ ೧೬ನೇ ವರ್ಷದಲ್ಲಿ ಧ್ವನಿ ಬೆಳಕು ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಈ ಮೊದಲು ‘ಕರ್ನಾಟಕ ವೈಭವ’, ‘ಶ್ರೀ ಕೃಷ್ಣದೇವರಾಯ’ ವಿಜಯನಗರ ವೈಭವ’ ಧ್ವನಿ ಬೆಳಕು ಪ್ರದರ್ಶನಗಳಲ್ಲಿ ಅಶೋಕ ಚಕ್ರವರ್ತಿ, ಶಂಕರಾಚಾರ್ಯರ, ಭರತ ಚಕ್ರವರ್ತಿ, ತಿಮ್ಮರಸ, ಅಪ್ಪಾಜಿ, ಪೊರ್ಚುಗೀಸ್ ಅಧಿಕಾರಿ, ಸಾಮಂತ ರಾಜ್, ಕನಕದಾಸ ಮತ್ತಿತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ವಿಜಯನಗರ ವೈಭವದಲ್ಲಿ ಪುರಂದರ ದಾಸ, ಅಬ್ದುಲ್ ರಜಾಕ್, ಬ್ರಿಟಿಷ್ ಅಧಿಕಾರಿ ನಿಕೋಲಸ್ ಕೌಂಟಿ, ಗಜಪತಿ ರಾಜನ ಮಂತ್ರಿ, ಡೋಯಿಂಗ್ ಪಾಯಸ ಇನ್ನಿತರ ಪಾತ್ರಗಳಲ್ಲಿ ಅಭಿನಯಿಸುವರು.