ಮಾರ್ಚ್-೨ ರಂದು ಸದ್ಧರ್ಮ ಶ್ರೀಗುರುಕುಲದ ದಶಮಾನೋತ್ಸವದಲ್ಲಿ ಆರು ಜನ ಸಾಧಕರಿಗೆ “ಸದ್ಧರ್ಮ ಶ್ರೀ ಪ್ರಶಸ್ತಿ” ಘೋಷಣೆ

ಗಂಗಾವತಿ: ತಾಲೂಕಿನ ಗಡ್ಡಿ ಗ್ರಾಮದ ಸದ್ಧರ್ಮ ಶ್ರೀ ಗುರುಕುಲದ ದಶಮಾನೋತ್ಸವ ಇದೇ ಮಾರ್ಚ್-೨ ಭಾನುವಾರ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಅಜಾತ ಅಪ್ಪಾಜಿಯವರ ಪವಿತ್ರ ಪುಣ್ಯಾಶ್ರಮದಡಿಯಲ್ಲಿ ಸದ್ಧರ್ಮ ಶ್ರೀ ಗುರುಕುಲದಿಂದ ನೀಡಲಾಗುವ ವಾರ್ಷಿಕ ಸದ್ಧರ್ಮ ಶ್ರೀ ಪ್ರಶಸ್ತಿಯನ್ನು ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಆರು ಜನ ಸಾಧಕರಿಗೆ ಘೋಷಿಸಲಾಗಿದ್ದು, ಪ್ರಶಸ್ತಿಯನ್ನು ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ಪ್ರಧಾನ ಮಾಡಲಿದ್ದಾರೆ ಎಂದು ಶ್ರೀಮಠದ ಪರಮಪೂಜ್ಯ ಸಂಗಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇತಿಹಾಸ ಹಾಗೂ ಗಂಗಾವತಿ ಪರಿಸರದ ಸಂಶೋಧನಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಗಂಗಾವತಿ ಕಲ್ಮಠ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶರಣಬಸಪ್ಪ ಕೋಲ್ಕಾರ, ಗಂಗಾವತಿಯ ಸಾಹಿತಿ, ಸಂಶೋಧಕ ಡಾ.ಎನ್.ಡಿ. ತಿಪ್ಪೇಸ್ವಾಮಿ, ರಂಗಭೂಮಿ ಹಾಗೂ ಪತ್ರಿಕಾರಂಗದ ಸಾಧಕ ನಾಗರಾಜ ಇಂಗಳಗಿ, ಚಿತ್ರಕಲಾ ಕ್ಷೇತ್ರದ ಅನನ್ಯ ಸಾಧಕ ರಾಘವೇಂದ್ರ ಬಯ್ಯಾಪುರ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಸದಸ್ಯ ಡಾ.ಬಸವರಾಜ ಗವಿಮಠ, ಸಮಾಜ ಸೇವಕ ಟಿ. ಆಂಜನೇಯ ಅವರಿಗೆ ಸದ್ಧರ್ಮ ಶ್ರೀ ಪ್ರಶಸ್ತಿಯನ್ನು ಮಠಾಧೀಶರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಧಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಪರಮಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮೀಜಿ, ಗುಳೇದಗುಡ್ಡದ ಸದಾನಂದ ಶಿವಯೋಗಿ ಮಠದ ಪರಮಪೂಜ್ಯ ನಾಗಭೂಷಣ ದೇವರು ಸಾನಿಧ್ಯ ವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ವಹಿಸಲಿದ್ದು, ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕೊಪ್ಪಳ ಎಸ್.ಎಫ್.ಎಸ್. ಶಾಲೆಯ ಪ್ರಾಚಾರ್ಯರಾದ ಪೂಜ್ಯ ಶ್ರೀ ಜಬಲಮಲೈ ರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ವಿಧಾನಪರಿಷತ್ ಮಾಜಿ ಸದಸ್ಯ ಹೆಚ್.ಆರ್. ಶ್ರೀನಾಥ್, ಡಿ.ವೈ.ಎಸ್.ಪಿ. ಸಿದ್ಧಲಿಂಗಪ್ಪ ಗೌಡ ಪೊಲೀಸ್ ಪಾಟೀಲ್, ವೆಂಕಟಗಿರಿ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಅಕ್ಕಮ್ಮ ಪರಸಪ್ಪ ಕಂದಕೂರು, ಉಪಾಧ್ಯಕ್ಷೆ ಶ್ರೀಮತಿ ಹುಲಿಗೆಮ್ಮ, ವೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅರ್ಜುನ ನಾಯಕ, ವೆಂಕಟಗಿರಿ ಕ್ಲಸ್ಟರ್ ಸಿಆರ್.ಪಿ ಮಲ್ಲಿಕಾರ್ಜುನ, ಬಿಜೆಪಿ ಮುಖಂಡ ಮನೋಹರಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply