ಗಂಗಾವತಿ: ಸಂಗೀತ ಎಂಬುದು ಯಾವುದೇ ಒಬ್ಬ ವ್ಯಕ್ತಿಯ ಸ್ವತ್ತಲ್ಲ. ಯಾವುದೇ ಜಾತಿ ಮತ ಎಣಿಸದೆ, ಸರ್ವರನ್ನೂ ಆಕರ್ಷಿಸುವ ದಿವ್ಯಶಕ್ತಿ ಸಂಗೀತ ಹೊಂದಿದೆ ಎಂದು ಗಾನಯೋಗಿ ಶ್ರೀ ಗುರು ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದ ಅಧ್ಯಕ್ಷ ಕೆಎಫ್ ಮುದ್ದಾಬಳ್ಳಿ ಹೇಳಿದರು.
ಅವರು. ಕಳೆದ ಮಹಾ ಶಿವರಾತ್ರಿ ಪ್ರಯುಕ್ತ ಹಿರೇಜಂತಕಲ್‌ನ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಅಬೀದಾ ಬೇಗಂ, ಕಲಾವಿದ ವೆಂಕಟೇಶ್ ದಾಸನಾಳ ಇತರರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಣ್ಣಪ್ಪ ಕಮ್ಮಾರ್. ಜಿ.ನಾಗೇಶ್ವರ ರಾವ್, ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕಲಾವಿದರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.