ಗಂಗಾವತಿ: ಏಪ್ರಿಲ್-೫ ಶನಿವಾರ ನಗರದ ಬಸ್ ನಿಲ್ದಾಣ ಹತ್ತಿರದ ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್‌ನಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಜಯಂತಿ ಆಚರಣೆ ಮಾಡಲಾಯಿತು ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಈ ಪ್ರಯುಕ್ತ ಡಾ. ಬಾಬು ಜಗಜೀವನರಾಮ್‌ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ, ಅವರ ಸಾಧನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಇಬ್ರಾಹಿಂ ಮೇಸ್ತ್ರಿ, ಚಾಂದ್‌ಪಾಷಾ ಮುರಾಹರಿನಗರ, ಸೋಮು ಜಿ., ರಸೂಲ್, ಖಾದರಭಾಷಾ, ಇಬ್ರಾಹಿಂ ರಾಡ್‌ಬೆಂಡರ್, ಸದ್ದಾಂ ಸೇರಿದಂತೆ ಇತರರು ಪಾಲ್ಗೊಂಡಿದ್ದರು.