ಗಂಗಾವತಿ : ಜ್ಞಾನ ಶಾರದೆ ಅಕಾಡೆಮಿಯ ಸಂಸ್ಥಾಪಕರಾದ ಡಾ. ಪ್ರವೀಣಕುಮಾರ ಬಿರಾದಾರ ಕಲಬುರ್ಗಿ ಅವರಿಗೆ ಭಾರತೀಯ ಶಿಕ್ಷಣ ರತ್ನ ರಾಷ್ಟ್ರಪ್ರಶಸ್ತಿ ಲಭಿಸಿದುದು ಸ್ವಾಗತಾರ್ಹವಾಗಿದೆ ಎಂದು ಪ.ಪೂ ಶ್ರೀ ಶರಣಬಸವ ದೇವರು ಹರ್ಷ ವ್ಯಕ್ತಪಡಿಸಿದ್ದಾರೆ.
ಅವರು ಗಂಗಾವತಿಯ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠ ಶಾಲೆಯು ಹಾಗೂ ಅರಳಹಳ್ಳಿ ಬೃಹನ್ಮಠದ ಪರವಾಗಿ ಈ ಶುಭ ಸುದ್ಧಿ ಹಂಚಿಕೊಂಡರು.

ಈ ಪ್ರಶಸ್ತಿ ಜೂನ್ 20 ರಂದು, ಶುಕ್ರವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ) ಬೆಂಗಳೂರಿನವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಗೊಂಡಿತು.
ಡಾ. ಪ್ರವೀಣಕುಮಾರ ಬಿರಾದಾರ ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸೇವೆಗಳನ್ನು ಮುಂದುವರೆಸಿ ಇನ್ನೂ ಎತ್ತರಕ್ಕೆ ಬೆಳೆಯುವ ಆಶಯವನ್ನು ವ್ಯಕ್ತಪಡಿಸಿ ಆಶೀರ್ವಾದ ಸಂದೇಶ ನೀಡಿದ್ದಾರೆ.

ಮಾಹಿತಿಗಾಗಿ:
ಶ್ರೀ ಶರಣಬಸವ ದೇವರು
ಶ್ರೀ ರಾಜರಾಜೇಶ್ವರಿ ಬೃಹನ್ಮಠ, ಅರಳಹಳ್ಳಿ
ಮೊ.ನಂ: ೮೧೫೦೯೦೮೩೮೫