ಇ-ಆಸ್ತಿ ತಂತ್ರಾಂಶದ ಮೂಲಕ ಸಾರ್ವಜನಿಕರ ಆಸ್ತಿಯ ಅರ್ಜಿಗಳ ಸಲ್ಲಿಕೆಗೆ ಅವಕಾಶ

ಇ-ಆಸ್ತಿ ತಂತ್ರಾಂಶದ ಮೂಲಕ  ಸಾರ್ವಜನಿಕರ ಆಸ್ತಿಯ ಅರ್ಜಿಗಳ ಸಲ್ಲಿಕೆಗೆ ಅವಕಾಶ

ಗಂಗಾವತಿ : ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ೩೧ ವಾರ್ಡುಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಇನ್ನು ಮುಂದೆ ಇ-ಆಸ್ತಿ ತಂತ್ರಾಂಶದಲ್ಲಿ ಖಾತಾ ಅರ್ಜಿಗಳನ್ನು ಸಲ್ಲಿಸಲು ಸಿಟಿಜನ್ ಮಾಡ್ಯೂಲ್ ಒದಗಿಸಲಾಗಿರುತ್ತದೆ.

ಸಾರ್ವಜನಿಕರು ತಮ್ಮ ಆಸ್ತಿಯ ಖಾತೆಯ ಅರ್ಜಿಗಳನ್ನು ಇನ್ನು ಮುಂದೆ ಕರ್ನಾಟಕ ಒನ್ ನಾಲ್ಕು ಕೇಂದ್ರಗಳ ಮೂಲಕ ನಾಗರಿಕರಿಂದ ನೇರವಾಗಿ ಮಾಡ್ಯೂಲ್ ಮೂಲಕ ಹಾಗೂ ಹೆಲ್ಪ್ ಡೆಸ್ಕ್ ಲಾಗಿನ್ ಮೂಲಕ ಸಲ್ಲಿಸಲು ಮಾನ್ಯ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಕೆ.ಎಂ.ಡಿ.ಎಸ್ ನಿಂದ ಅವಕಾಶ ಸಲ್ಲಿಸಿರುತ್ತಾರೆ. ಆದ ಕಾರಣ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಸಹಿ/-
ಪೌರಾಯುಕ್ತರು,
ನಗರಸಭೆ, ಗಂಗಾವತಿ.

Leave a Reply