ಚಿತ್ರ ಸಂತೆ ಪತ್ರಿಕೆಯಿಂದ ಗಂಗಾವತಿಯ ಚನ್ನಬಸವ ಕೊಟಗಿ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿ ಪ್ರದಾನ

ಚಿತ್ರ ಸಂತೆ ಪತ್ರಿಕೆಯಿಂದ ಗಂಗಾವತಿಯ ಚನ್ನಬಸವ ಕೊಟಗಿ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿ ಪ್ರದಾನ

ಗಂಗಾವತಿ: ಜುಲೈ-೧೫ ಮಂಗಳವಾರ, ಬೆಂಗಳೂರಿನ ಸದಾಶಿವನಗರದ ಹೈಪಾರ್ಕ್ ಅಪಾರ್ಟ್ ಹೋಟಲ್‌ನಲ್ಲಿ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭ ಜರುಗಿತು.

ಈ ಸಮಾರಂಭದಲ್ಲಿ ಗಂಗಾವತಿಯ ಕಲಾವಿದ ಹಾಗೂ ಪತ್ರಕರ್ತ ಚನ್ನಬಸವ ಕೊಟಗಿಗೆ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಪ್ರಶಸ್ತಿಯನ್ನು ಚಿತ್ರ ಸಂತೆ ಪತ್ರಿಕೆಯ ಸಂಪಾದಕರಾದ ಗಿರೀಶ್ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ವರ್ಷದಿಂದ ವರ್ಷಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಬಾರಿ ೫೦ಕ್ಕೂ ಹೆಚ್ಚು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯದ ಟೆಲಿಕಾಂ ನೌಕರರ ಸಂಘದ ಟ್ರಸ್ಟ್ ಅಧ್ಯಕ್ಷ ಡಾ. ಎನ್. ನರಸಿಂಹಮೂರ್ತಿಯವರು ವಹಿಸಿದ್ದರು.

ಚಲನಚಿತ್ರ ನಟ ವಿಜಯ್ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಕಲಾಭಿಮಾನಿಗಳಿಗೆ ಮತ್ತು ಸಾಧಕರಿಗೆ ಗೌರವ ವ್ಯಕ್ತಪಡಿಸುವ ವೇದಿಕೆಯಾಗಿತ್ತು.

ಚನ್ನಬಸವ ಕೊಟಗಿ, ಗಂಗಾವತಿಯ ನಿವಾಸಿಯಾಗಿದ್ದು, ಅವರು ಒಬ್ಬ ಕಲಾವಿದ, ಪತ್ರಕರ್ತ ಮತ್ತು ಪ್ರವಾಸ ಮಾರ್ಗದರ್ಶಕರಾಗಿ ಹಲವಾರು ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸಂಘಟಕ, ಸಂಘ-ಸಂಸ್ಥೆಗಳ ಪ್ರತಿನಿಧಿ ಹಾಗೂ ಖಾಸಗಿ ಟಿ.ವಿ ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸಿ ಹೆಸರು ಪಡೆದಿದ್ದಾರೆ.

ಪ್ರಸ್ತುತ ಅವರು ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಈ ಬಹುಮುಖ ಸೇವೆಯನ್ನು ಗುರುತಿಸಿ, ಈ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ಸ್ವೀಕರಿಸುವಾಗ ಅವರು ತಮ್ಮ ಪತ್ನಿ ಲಕ್ಷ್ಮೀ ಕೊಟಗಿ ಹಾಗೂ ಪುತ್ರ ಸ್ಕಂದ ಕೊಟಗಿ ಉಪಸ್ಥಿತರಿದ್ದರು. ಚಿತ್ರ ಸಂತೆ ಪತ್ರಿಕೆಯ ಸಂಪಾದಕರಿಗೆ ಹಾಗೂ ಸಿಬ್ಬಂದಿಗಳಿಗೆ ಕುಟುಂಬದ ಪರವಾಗಿ ಚನ್ನಬಸವ ಕೊಟಗಿಯವರು ಕೃತಜ್ಞತೆ ಸಲ್ಲಿಸಿದರು.

ಮಾಹಿತಿಗಾಗಿ:
ಚನ್ನಬಸವ ಕೊಟಗಿ
ಐತಿಹಾಸಿಕ ಸ್ಥಳಗಳ ಮಾರ್ಗದರ್ಶಕರು.
ಹಂಪಿ, ಸಾ|| ಗಂಗಾವತಿ
ಮೊ.ನಂ: ೯೪೮೧೦೮೭೦೦೯

Leave a Reply