ಸ್ತನ ಕ್ಯಾನ್ಸರ್ ಹಾಗೂ ಹೃದಯರೋಗಗಳನ್ನು ಉಚಿತ ಆರೋಗ್ಯ ಶಿಬಿರಗಳಿಂದ ನಿಯಂತ್ರಿಸಬಹುದಾಗಿದೆ: ಡಾ|| ಜಿ. ಚಂದ್ರಪ್ಪ

ಸ್ತನ ಕ್ಯಾನ್ಸರ್ ಹಾಗೂ ಹೃದಯರೋಗಗಳನ್ನು ಉಚಿತ ಆರೋಗ್ಯ ಶಿಬಿರಗಳಿಂದ ನಿಯಂತ್ರಿಸಬಹುದಾಗಿದೆ: ಡಾ|| ಜಿ. ಚಂದ್ರಪ್ಪ

ಗಂಗಾವತಿ: ಆರೋಗ್ಯವೇ ಮಹಾ ಭಾಗ್ಯ ಎಂಬ ನಾಣ್ನುಡಿಯಂತೆ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ಅವಶ್ಯಕತೆ ಇದೆ.

ಇತ್ತೀಚೆಗೆ ಹಾಸನ ಸೇರಿ ರಾಜ್ಯದ ಹಲವೆಡೆ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಿದೆ, ಇದು ಆತಂಕಕಾರಿ ವಿಷಯವಾಗಿದೆ.

ಅದೇ ರೀತಿ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ವೈದ್ಯ ಡಾ|| ಜಿ. ಚಂದ್ರಪ್ಪ ಹೇಳಿದರು.

ಇಂತಹ ಮಾರಕ ರೋಗಗಳನ್ನು ನಿಯಂತ್ರಿಸಲು ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಜುಲೈ-೧೬ ಬುಧವಾರದಂದು ಶ್ರೀರಾಮನಗರದ ಎಕೆಆರ್‌ಡಿ ಪಿಯು ಕಾಲೇಜಿನಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.

ಈ ಶಿಬಿರವನ್ನು ಲಯನ್ಸ್ ಕ್ಲಬ್ ಗಂಗಾವತಿ, ಬೆಂಗಳೂರು ವಿಜಯನಗರ, ಐಎಂಎ, ವೈದೇಹಿ ಆಸ್ಪತ್ರೆ ಮತ್ತು ಗ್ರೇಸ್ ಫೌಂಡೇಶನ್ ನಡೆಸಿದವು.

ಡಾ|| ಚಂದ್ರಪ್ಪ ಅವರು ಶಿಬಿರದಲ್ಲಿ ಪಾಲ್ಗೊಂಡು, ಆರೋಗ್ಯ ಶಿಬಿರಗಳ ಮಹತ್ವವನ್ನು ವಿವರಿಸಿದರು.

ಈ ಶಿಬಿರವನ್ನು ಲಯನ್ಸ್ ಕ್ಲಬ್‌ನ ಪಿ.ಎಂ.ಜೆ.ಎಫ್, ಲಯನ್ ಡಾ|| ಮಾಧವಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಹಿಂದಿನ ಅಧ್ಯಕ್ಷರಾದ ಲಯನ್ ಗಂಗಾಧರ ಅವರು ಉದ್ಘಾಟಿಸಿದರು.

ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ರಕ್ತ ತಪಾಸಣೆ, ಬಿ.ಪಿ, ಸಕ್ಕರೆ ಕಾಯಿಲೆ ಸೇರಿದಂತೆ ದೀರ್ಘ ಅವಧಿಯ ರೋಗರುಜಿನಗಳಿಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಅಧಿಕ ವೆಚ್ಚವಾಗಲಿದ್ದು, ಅವುಗಳಿಗೆ ಕಡಿವಾಣ ಹಾಕಲು ಇಂತಹ ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಸಹಕಾರಿಯಾಗಲಿವೆ ಎಂದರು.

ಮಳೆಯ ನಡುವೆಯೂ ೮೫೦ ಜನರು ತಪಾಸಣೆಗೆ ಹಾಜರಾಗಿದ್ದು, ಇದರಲ್ಲಿ ಹಲವು ತಪಾಸಣೆ ವಿಭಾಗಗಳು ಇದ್ದವು.

ಕಣ್ಣಿನ ತಪಾಸಣೆಗೆ ೨೭೦, ಇಕೋ ಮತ್ತು ಇ.ಸಿ.ಜಿ ಗೆ ೨೫೦, ಮೆಮೋಗ್ರಾಫಿಗೆ ೬೦ ಜನರು ತಪಾಸಣೆಗೆ ಬಂದಿದ್ದರು.

ಆರ್ಥೋಪೆಡಿಕ್ ವಿಭಾಗದಲ್ಲಿ ೨೫೦ ಜನರಿಗೆ ತಪಾಸಣೆ ಮಾಡಲಾಗಿತ್ತು.ಸರ್ವರಿಗೂ ಬಿ.ಪಿ, ಶುಗರ್ ತಪಾಸಣೆ ಉಚಿತವಾಗಿ ಮಾಡಲಾಯಿತು ಹಾಗೂ ಔಷಧಿಗಳ ವಿತರಣೆ ನಡೆಯಿತು.

ಐ.ಎಂ.ಎ ಮೈತ್ರಿ ಅಧ್ಯಕ್ಷರಾದ ಡಾ|| ಮೇಧಾ ಮಲ್ಲನಗೌಡ ಅವರು ಸ್ತನ ಕ್ಯಾನ್ಸರ್ ಕುರಿತು ಮಾತನಾಡಿ, ಮಹಿಳೆಯರು ಸ್ತನ ಕ್ಯಾನ್ಸರ್ ಬಗ್ಗೆ ವಿಶೇಷ ಗಮನಹರಿಸಬೇಕು, ಅಂತಹ ಲಕ್ಷಣಗಳು ಕಂಡುಬಂದಲ್ಲಿ ಪ್ರಥಮ ಹಂತದಿಂದಲೇ ಚಿಕಿತ್ಸೆಗೆ ಒಳಪಟ್ಟಲ್ಲಿ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ಹೇಳಿದರು.

ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಅಧ್ಯಕ್ಷರಾದ ಲ.ಎಸ್. ಸತೀಶ್ ಅದಿಥಿಯ, ಕಾರ್ಯದರ್ಶಿಯಾದ ಲ. ಆನಂದ ಎಸ್, ಖಜಾಂಚಿಯಾದ ಲ. ಸುದೇಶಕುಮಾರ ಉಪಸ್ಥಿತರಿದ್ದರು.

ಡಾ|| ಎ.ಎಸ್.ಎನ್ ರಾಜು, ಡಾ|| ನಾಗರಾಜ ಹೆಚ್., ಡಾ|| ಅಕ್ಷತಾ ಪಟ್ಟಣಶೆಟ್ಟಿ, ಡಾ|| ಅವಿನಾಶ್ ಪದ್ಮಶಾಲಿ ಮೊದಲಾದವರು ಉಪಸ್ಥಿತರಿದ್ದರು.

ಡಾ. ಎ.ಸೋಮರಾಜು, ಟಿ.ರಾಮಕೃಷ್ಣ, ಈರಣ್ಣ ಪತೇಪೂರ್, ಜಿ.ಹರಿಬಾಬು, ಡಾ|| ಪಂಪಾಪತಿ ಮುಂತಾದವರು ಉಪಸ್ಥಿತರಿದ್ದರು.

ಶ್ರೀರಾಮನಗರ ಸಮುದಾಯ ಆಡಳಿತಾಧಿಕಾರಿ ಡಾ|| ವೀರಾನಾಯ್ಕ, ಡಾ|| ವರಲಕ್ಷ್ಮೀ, ರೆಡ್ಡಿ ಶ್ರೀನಿವಾಸ್, ಶಾಂತಪ್ಪ, ಹುಸೇನ್ ಬೀ, ಮಹಮ್ಮದ್ ರಫಿ ಉಪಸ್ಥಿತರು.

ಮುಖಂಡರು ಬಬ್ಬಾ ಸತ್ಯನಾರಾಯಣ, ರೆಡ್ಡಿ ನಾಗೇಶ್ವರರಾವ್, ಮಂಜು ಕಟ್ಟಿಮನಿ, ಜಂಬಣ್ಣ ಐಲಿ, ಶಿವಪ್ಪ ಗಾಳಿ ಇತರರು ಭಾಗವಹಿಸಿದ್ದರು.

ಶಿಬಿರದ ಶಂಯೋಜಕರಾದ ಲಯನ್ ಸುಬ್ರಹ್ಮಣ್ಯಶ್ವರಾವ್ ಹಾಗೂ ಮಲ್ಲಿಕಾರ್ಜುನ ಹಚ್ಚೊಳ್ಳಿಯವರನ್ನು ಸನ್ಮಾನಿಸಲಾಯಿತು.

ಎಕೆಆರ್‌ಡಿ ಕಾಲೇಜು ಆಡಳಿತ ಮಂಡಳಿ ವೈದ್ಯರಿಗೆ ಹಾಗೂ ಶಿಬಿರಾರ್ಥಿಗಳಿಗೆ ಉಪಹಾರ, ಊಟ ವ್ಯವಸ್ಥೆ ಮಾಡಿತ್ತು.

ಡಾ|| ಶಿವಕುಮಾರ ಮಾಲಿಪಾಟೀಲ್
ಅಧ್ಯಕ್ಷರು, ಲಯನ್ಸ್ ಕ್ಲಬ್, ಗಂಗಾವತಿ
ಮೋ:ನಂ: ೯೪೪೮೩೦೨೭೭೫

Leave a Reply